ಅರಿವೇ....ಗುರು
ಅರಿವೇ....ಗುರು


ಸದ್ಗುಣ ಸಾರುವ,ಸತ್ನುಡಿ ಆಡುವ
ಸಜ್ಜನರಾಗಿ ಸರಿದಾರಿಯ ತೋರುವ
ಕನಸಿನ ಸಸಿಗೆ ನೀರನು ಎರೆಯುವ
ನನ್ನಯ ಶಿಕ್ಷಕ ಆ ದೇವರ ರೂಪಕ
ತಪ್ಪಿಗೆ ಸವಿಮಾತಿನ ಮದ್ದನು ಹಾಕುವ
ಕೇಳದೆ ಕೂತರೆ ಬಡಿಗೆ ರುಚಿ ತೋರುವ
ಸಾಧನೆ ಹಾದಿಯ ಸರಾಗಗೊಳಿಸುವ
ನನ್ನಯ ಶಿಕ್ಷಕ ಶ್ರೇಷ್ಠ ಮಾರ್ಗದರ್ಶಕ
ವೇದಿಕೆ ಹತ್ತಿಸಿ ಮಾತನು ಕಲಿಸುವ
ಪ್ರತಿಭೆಯ ಕುರಿತು ಜಗತ್ತಿಗೆ ಹೇಳುವ
ಬದುಕಿನ ಅರ್ಥವ ಪಾಠದಿ ತಿಳಿಸುವ
ನನ್ನಯ ಶಿಕ್ಷಕ ಧೈರ್ಯದ ಪ್ರತೀಕ
ದೇಶದ ಒಳಿತಿಗೆ ಸತ್ರ್ಪಜೆಗಳ ನೀಡುವ
ದಂಡಿಸಿ ಕಲಿಸಿ ದಾರಿದೀಪವಾಗುವ
ಶಿಕ್ಷಕರ ದಿನವಿದು ವಂದಿಸಿ ತಲೆಬಾಗುವ
ಹೆಮ್ಮೆಯಿಂದೇಳುವೆ ಧನ್ಯವಾದ ಶಿಕ್ಷಕ