STORYMIRROR

Vaishnavi S Rao

Children Stories Classics Others

4  

Vaishnavi S Rao

Children Stories Classics Others

ನೆನಪು

ನೆನಪು

1 min
321


ಬಾಳಿನ ಪುಟಗಳಲ್ಲಿ ನನ್ನೊಲವಿನ ಹಣತೆ

ನೀನು ಇಲ್ಲದಿದ್ದರೆ ನನಗೆ ನೀನೇ ಕೊರತೆ

ನಾನೇ ಬರೆಯುವೆನು ಸೊಗಸಾದ ಕಿರುಕತೆ

ಯಾಕೆ ಈ ನಿನ್ನ ನೋಟದಿಂದಲೇ ಸೆಳೆತೆ


ಬದುಕಿನಲ್ಲಿ ನಡೆದ ಕತೆ ನೀನೇ ಹೆಣೆಯುವೆ

ನಾನೇ ನನ್ನ ಪ್ರೀತಿಯ ಹಸ್ತದಿ ಕಣ್ಣೀರ ಒರೆಸುವೆ

ಬದುಕಿನ ದಿಕ್ಕನ್ನು ನಾನೇ ಇಂದೇ ಬದಲಾಯಿಸುವೆ

ನಿನ್ನ ಎಲ್ಲಾ ಕನಸುಗಳನ್ನು ನನಸು ಮಾಡುವೆ


ನನ್ನ ಬಿಟ್ಟು ದೂರ ಹೋಗಬೇಡ ದಯವಿಟ್ಟು

ನಿನ್ನ ನೋವುಗಳನ್ನು ಇಂದೇ ದೂರಗಟ್ಟು

ನಗುವನ್ನು ಎಂದೂ ನೀನು ಮರೆಯಬೇಡ

ನಾನು ಇಲ್ಲವೆಂದು ಎಂದೂ ನುಡಿಯಬೇಡ


ಬಾಳಿನ ಪುಟಗಳಲ್ಲಿ ನಿನ್ನ ಹೆಸರು ಅಮರ

ನೀನೇ ನನ್ನ ಬಾಳಿನ ಪ್ರೀತಿಯಾದ ಮಧುರ

ಎಲ್ಲರೂ ತೋರುವರು ಅಂತಿಮವಾಗಿ ಕನಿಕರ

ನನ್ನ ನಿನ್ನ ಹೆಸರು ಯಾವಾಗಲು ಅಜರಾಮರ


 *ವೈಷ್ಣವಿ ಪುರಾಣಿಕ್ ಉಡುಪಿ*


Rate this content
Log in