ಬದುಕು
ಬದುಕು
1 min
564
ಜೀವನ ಸಾಗುತಲಿದೆ ಎತ್ತಲೋ....
ಎಳೆಯ ಕಂದಮ್ಮಗಳ
ಕಲಿಯೋ ತವಕವದು
ಕಮರಿಹೋಗಿದೆ ಎಂದೋ..
ಜೀವನ ಸಾಗುತಲಿದೆ ಎತ್ತಲೋ...
ಪ್ರೌಢತೆಯ ಹೊಸ್ತಿಲಿಗೆ
ಕಾಲಿರಿಸಿಹ ಮನಸುಗಳು
ಅಂತರ್ಮುಖಿಯಾಗಿ ವಿಹರಿಸುತಲಿವೆ..
ಜೀವನ ಸಾಗುತಲಿದೆ ಎತ್ತಲೋ...
ಯುವಜನತೆಯ ಪಿಡುಗಾಗಿ
ಕಾಡುತಲಿವೆ ಕಾಯಿಲೆಗಳು
ಮಾತುಗಳ ಮರೆತಿವೆ
ಆಟಗಳ ತ್ಯಜಿಸಿವೆ
ಜೀವನ ಸಾಗುತಲಿದೆ ಎತ್ತಲೋ...
ಸಮಯ ಕಳೆಯಲು ಹೊರಟ
ಮಧ್ಯವಯಸ್ಕರ ದಂಡು
ಕೂಳ ಮಾರ್ಗವ ಮರೆತು
ಕೂತಂತಿದೆ ಕೈ ಚೆಲ್ಲಿ
ಜೀವನ ಸಾಗುತಲಿದೆ ಎತ್ತಲೋ...
ಮಹಾಮಾರಿ ನೆನಪಿಸಿತು
ನಮ್ಮ ಶುಚಿರುಚಿಗಳ ನಿಜ
ಬೆನ್ನಟ್ಟಿತು ಸೋಮಾರಿತನವ ಆದರೆ
ಬದುಕಾಯಿತು ಮಾಧ್ಯಮದ ದಾಸ
ಜೀವನ ಸಾಗುತಲಿದೆ ಎತ್ತಲೋ...
ಬೇಕಾಗಿದೆ ಮುಕ್ತಿ ಇದರಿಂದ....
