STORYMIRROR

Ranjitha Ranju

Inspirational Others Children

4  

Ranjitha Ranju

Inspirational Others Children

ಭಾವವೊಂದೇ....ಭಾಷೆ ಹಲವು

ಭಾವವೊಂದೇ....ಭಾಷೆ ಹಲವು

1 min
350


ಒಮ್ಮೆ ಅರಿವಿಲ್ಲದೆ ಶಾಲೆಯಲ್ಲೇ 

ಮುಟ್ಟಾದಾಗ ಗೆಳತಿ ಸಂಶೀನ ಕೊಟ್ಟ 

ಪ್ಯಾಡಿಗೆ ಇರದ ಜಾತಿ ಮುದ್ರೆ 

ಮಂದಿರ, ಮಸೀದಿ, ಚರ್ಚುಗಳಿಗೇಕೆ?


ಪರೀಕ್ಷೆಯಲ್ಲಿ ಶಾಯಿ ಖಾಲಿಯಾಗಿ 

ಒದ್ದಾಡುವಾಗ ಲೇಖನಿ ನೀಡಿದ ಮೇರಿ

ಅಂದು ಸರಸ್ವತಿ ದೇವಿಯಾದಳು

ಆದರೂ ಭೇದ ಭಾವವೇಕೆ?


ಮೈದಾನದಲ್ಲಿ ಆಡುತ್ತಾ ಬಿದ್ದಾಗ 

ಭಾಗ್ಯ ಹಚ್ಚಿದ ಮುಲಾಮು,ಕಟ್ಟಿದ 

ಕರವಸ್ತ್ರ ಕೇಳಲಿಲ್ಲ ಜಾತಿ ಯಾವುದೆಂದು

ಆದರೂ ಭೇದ ಭಾವವೇಕೆ?


ಅವಳ ಬುತ್ತಿಯ ಬಿರಿಯಾನಿ ಇವಳ 

ಮನೆಯ ಹೋಳಿಗೆ ತಿಂದ ನಾಲಿಗೆ 

ಕೇಳಲಿಲ್ಲ, ಅಲ್ಲಾ, ಏಸು, ಈಶ್ವರನ ಬಗ್ಗೆ

ಆದರೂ ಭೇದ ಭಾವವೇಕೆ?


ಬುರ್ಖಾ,ಪ್ಯಾಂಟು,ಸೀರೆಯಾದರೇನು

ಕನ್ನಡ, ಕೊಂಕಣಿ ಹಿಂದಿಯಾದರೇನು

ವೇಷ-ಭಾಷೆ ಹಲವಾದರೂ ಭಾವವೊಂದೆ

ಭಾರತೀಯರು ನಾವು ಎಂದೂ ಒಂದೇ....






ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational