ಮಗಳೇ....
ಮಗಳೇ....
ಬಾಳ ದಾರಿಯಲ್ಲಿ
ಹಾದಿ ಮಸುಕಾಗೆ
ತಾರೆಯಂದದಲಿ ಬಂದು
ಬದುಕ ಬೆಳಗಿಸಿದೆ
ಕಲ್ಲರಳಿ ಹೂವಾಗಿ
ಬದುಕು ತಂಪಾಗಿ
ಹೆಜ್ಜೆಹೆಜ್ಜೆಗೂ ಸಂತಸವ
ನೀ ತುಂಬಿದೆ..
ನಿನ್ನ ಬೆನ್ನನೆ ಹಿಡಿದು
ನಿನ್ನನುಜೆ ಬಂದಿಹಳು
ಈರ್ವರೂ ಆಗಿಹಿರಿ ನನ್ನ
ಬಾಳಿನ ಕಣ್ಣುಗಳು
ಎಲ್ಲ ಬವಣೆಗಳು ನನಗಿರಲಿ
ಬವಣೆಗಳ ಅರಿವು ನಿಮಗಿರಲಿ
ಸಾಧನಾಪಥದಲಿ ಪ್ರಗತಿ ನಿಮಗಿರಲಿ
ಆಯುರಾರೋಗ್ಯ ಭಾಗ್ಯ ಸದಾ ಸಿಗಲಿ
