ಕನ್ನಡ ತಾಯಿ
ಕನ್ನಡ ತಾಯಿ
ಕಳೆದಿದೆ ನ್ಯಾಯ ಮೆರೆದಿದೆ ಅನ್ಯಾಯ
ಕರಗಿದೆ ಕರುಣೆ ದಣಿದಿದೆ ಧರಿಣಿ
ಏರಿದೆ ಪಾಪಗಳು ಮೆರೆಯುತ್ತಿರೆ ಪಾಪಿಗಳು
ಮರೆಯಾಗುತ್ತಿದೆ ನಂಬಿಕೆಗಳು
ಕೊನೆಯಗುತ್ತಿದೆ ಪ್ರೀತಿ ವಿಶ್ವಾಸಗಳು
ನೆನೆಯುತ್ತಿದೆ ತಾಯಿಯ ಕಂಗಳು
ಬುಗಿಲೆದ್ದಿದೆ ದ್ವೇಷ ಅಸೂಯೆಯು
ಬೆತ್ತಲಾಗಿದೆ ಕಟು ಸತ್ಯಗಳು
ಕರಕಲಾಗಿದೆ ಕನ್ನಡಮ್ಮನ ಕೈಗಳು
ನೊಂದುಹೋಗಿದೆ ಆಕೆಯ ಕರುಳು
ಹುಟ್ಟಿದ ಮಕ್ಕಳೇ ಅಮ್ಮನಿಗೆ ದೂರ
ಪರರ ಮಕ್ಕಳು ಬದುಕಿಗೆ ಭಾರ
ಕನ್ನಡ ಬಾವುಟಕ್ಕೆ ಅವಮಾನ
ಕನ್ನಡ ನುಡಿಗೆ ಅಪಮಾನ
ಮೌನ ಮುರಿಯದ ಕೆಲವರು
ರಾಜಕೀಯದ ದಾಳವಾದರು
ಕೆಚ್ಚೆದೆಯ ವೀರರು ಎದ್ದು ನಿಂತರು
ತಾಯಿಯ ಋಣ ತೀರಿಸಲು ಮುಂದಾದರು
ಒರೆಸುವೆವೆ ತಾಯಿ ಕಣ್ಣಿರು
ತರಿಸುವೆವು ನೆಮ್ಮದಿಯ ನಿಟ್ಟುಸಿರು
