STORYMIRROR

mamta km

Classics Inspirational Children

4  

mamta km

Classics Inspirational Children

ಮಿಠಾಯಿ

ಮಿಠಾಯಿ

1 min
287

ಮಿಠಾಯಿ ಎಂದರೆ ಮಕ್ಕಳಿಗಿಷ್ಟ,

ಹೆಚ್ಚಾಗಿ ತಿಂದರೆ ಹೊಟ್ಟೆಗೆ ಕಷ್ಟ.

ಅಂಗಡಿ ಡಬ್ಬದ ಬಣ್ಣದ ಮಿಠಾಯಿ,

ಸೆಳೆಯುವುದು ಮಕ್ಕಳ ಕಣ್ಣು ಬಾಯಿ.


ಅಮ್ಮ ಕೊಡುವಳು ಮಿಠಾಯಿ ಲಂಚ,

ಮಕ್ಕಳ ದಾರಿಗೆ ತರಲು ಕೊಂಚ.

ಅಪ್ಪ ಕೊಡವರು ಮಿಠಾಯಿ ಉಡುಗೊರೆ,

ಒಳ್ಳೆಯ ಮಕ್ಕಳು ಅನ್ನಿಸಿಕೊಂಡರೆ.


ಗೆಳೆಯ ಗೆಳತಿಯರು ಪಡೆವರು ಕೊಡುವರು,

ವಿಧವಿಧ ಹೆಸರಿನ ಮಿಠಾಯಿ ಪರಸ್ಪರರು,

ಆಗಾಗ ಬರುತ್ತಿತ್ತು ವಿದೇಶಿ ಮಿಠಾಯಿ,

ಚಪ್ಪರಿಸಿ ತಿನ್ನುತ್ತಾ ಇದ್ದೆವು ಆ ಮಿಠಾಯಿ.


ಬಾಲ್ಯದಲ್ಲಿ ದಿನಾ ತಿನ್ನುತ್ತಿದ್ದೆವು,

ಹಲವು ವಿಧದ ಮಿಠಾಯಿ,

ಕಿತ್ತಳೆ ನಿಂಬೆ ಹುಣಸೆ ರುಚಿಯ,

ಖಾರ ಹುಳಿ ಸಿಹಿಯ ಮಿಠಾಯಿ.


ಜೊತೆಗೆ ಇನ್ನೂ ಇರುತ್ತಿತ್ತು,

ಕಡಲೆ ಮಿಠಾಯಿ, ಸಕ್ಕರೆ ಮಿಠಾಯಿ,

ಈಗಿನ ಮಕ್ಕಳಿಗೆ ಆ ಸುಖವಿಲ್ಲ,

ಮಿಠಾಯಿ ತಿನ್ನಬೇಡಿರಿ ಎನ್ನುವರೆಲ್ಲ


ಅಕ್ಕರೆ ತೋರುವ ಎಲ್ಲರಿಗೂ,

ಈಗಲೇ ಕೊಡುವೆ ನಿಮಗೆಲ್ಲರಿಗೂ,

ಹೊಸ ಹೊಸ ರುಚಿಯ,

ಹಲವು ಮಿಠಾಯಿ, ಕೇಳಿ ಪಡೆಯಿರಿ,

ನಿಮ್ಮ ಇಷ್ಟದ ಮಿಠಾಯಿ.


Rate this content
Log in

Similar kannada poem from Classics