ಕಟ್ಟಬೇಕು
ಕಟ್ಟಬೇಕು
ಕಟ್ಟಬೇಕು ಗೂಡನು
ಸಾಗಿಸಲು ಬದುಕನು
ಬಿಸಿಲು ಚಳಿ ಮಳೆ ಗಾಳಿಗೆ
ಬೀಳದಂತ ಗೂಡನು
ಭದ್ರವಾಗಿ ಕಟ್ಟಬೇಕು
ಬದುಕಿಗೊಂದು ಗೂಡನು
ಜಗದ ಜೀವಜಂತುಗಳು
ಕಟ್ಟುವವು ಗೂಡನು
ಮರದ ರೆಂಬೆ ಕೊಂಬೆಗಳಲಿ
ಮಾಡುವುವು ಮಾಡನು
ಕಟ್ಟುವವು ಗೂಡನು
ಸಾಗಿಸಲು ಬದುಕನು
ಹಗಲು ಕಳೆಯುತ
ಇರುಳುರುಳಲು
ನೆಮ್ಮದಿಯ ನಿದ್ರೆಗಾಗಿ
ರಸವಿರಸಗಳ ಸವಿಗಾಗಿ
ಕಟ್ಟಬೇಕು ಗೂಡನು
ಸಾಗಿಸಲು ಬದುಕನು
