ಕಲ್ಪವೃಕ್ಷ
ಕಲ್ಪವೃಕ್ಷ
ಎಳೆಯ ವಯಸ್ಸಿನಲ್ಲಿ
ಅಲ್ಪನೀರನು ಕುಡಿದು
ಅಮೃತ ಕಲಶಗಳನು
ಶಿರದಲ್ಲಿ ಹೊತ್ತು ನಿಂತು
ದಾರಿಹೋಕರ ದಾಹವ
ತೀರಿಸುವ ಪರೋಪಕಾರಿ
ಆ ದೇವತರು ಕಲ್ಪವೃಕ್ಷಗಳು
ಕಡಲ ತಡಿಯಲ್ಲಿ ನಿಂತು
ಕಾಯುವವರು ಇಲ್ಲದೇ
ಕಾರ್ಮುಗಿಲ ಆರ್ಭಟಕ್ಕೆ
ಕುಸಿದು ನೆಲಕೊರಗಿ
ಪ್ರವಾಹದಲಿ ಕೊಚ್ಚಿ
ಕೊಳೆತು ಹೋಗುವ
ಕಡಲ ತೀರದ ಕಲ್ಪವೃಕ್ಷಗಳು
ನಾಡಿನಲ್ಲೇ ಇರಲಿ
ಕಡಲತೀರದಲ್ಲೇ ಇರಲಿ
ತನಗಾಗಿ ಏನನ್ನೂ
ಬಯಸದ ನಿಸ್ವಾರ್ಥ
ನಿರಂತರ ಪರೋಪಕಾರಿ
ಸಜ್ಜನರ ಮನಸ್ಸಿನ
ದೇವತರು ಆ ಕಲ್ಪವೃಕ್ಷಗಳು