STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಹಾರುವವರು

ಹಾರುವವರು

1 min
11

ಹಾರುವೆವು ನಾವು
ಹಾರುವವರು ನಾವು
ರೆಕ್ಕೆಪುಕ್ಕ ಕಟ್ಟಿಕೊಂಡು
ಹಾರುವವರು ನಾವು
ಭುವಿಯಿಂದ ಬಾನಿಗೆ
ಬಾನಿಂದ ಭುವಿಗೆ
ಬೆಳ್ಮುಗಿಲ ನಡುವೆ
ಸ್ವಚ್ಛಂದವಾಗಿ
ಹಾರುವವರು ನಾವು
ಆವ ಬಂಧನವಿರದೆ
ಹೇಗೆಂದರೆ ಹಾಗೆ
ಎಲ್ಲೆಂದರಲ್ಲಿಗೆ
ಹಾರುವವರು ನಾವು
ಎಲ್ಲಾ ನೋವುಗಳ
ಮರೆತು ಹಾರುವ
ಸ್ವತಂತ್ರರು ನಾವು
ಹಾರುವವರು ನಾವು
ದೂರಕೆ ದೂರಕೆ
ಬಹು ಬಹು ದೂರಕೆ
ಹಾರುವೆವು ನಾವು
ಹಾರುತ ಹಾರುತ
ಭೂರ್ಭುವಸ್ವರ
ಸಪ್ತ ಲೋಕಗಳಿಗೆ
ಏರುವೆವು ನಾವು
ಹಾರುವವರು ನಾವು
ಹಾರುವವರು ನಾವು

ವಿಜಯಭಾರತೀ.ಎ.ಎಸ್.



Rate this content
Log in

Similar kannada poem from Abstract