STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಬರೆದೆ ನಾನು

ಬರೆದೆ ನಾನು

1 min
10

ಧರ್ಮದಲಿ ಅರ್ಥದಲಿ
ಕಾಮದಲಿ ನಿನ್ನ ನಾ
ಮೀರಿ ಹೋಗಲಾರೆ
ಓ ನನ್ನ ಬಾಳಸಂಗಾತಿ
ಸುಖದಲಿ ದು:ಖದಲಿ
ಜೊತೆ ಜೊತೆಯಲಿ
ಹೆಜ್ಜೆ ಹಾಕುತ್ತಾ  ನೀ
ಪ್ರಮಾಣ ಮಾಡುತಾ
ನನ್ನ ಜೊತೆಯಾಗಿ
ಸಪ್ತಪದಿ ತುಳಿದ ನೀ
ನನ್ನ ಬಾಳ ಸಂಗಾತಿ
ಬರೆದೆ ನಾನು ನಿನ್ನ ಹೆಸರ
ನನ್ನ ಆತ್ಮದ ಪುಟದಲಿ
ಜನುಮ ಜನುಮಕೂ
ಜೊತೆಯಾಗಿ ಸಾಗಿ ಬಾ
ನನ್ನ  ಬಾಳಿನ ಒಡತಿ
ನೀ ನನ್ನ  ಆತ್ಮ ಸಂಗಾತಿ


ವಿಜಯ ಭಾರತೀ.ಎ.ಎಸ್.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract