ಕಿವಿ
ಕಿವಿ
ಹಿತ್ತಾಳೆ ಕಿವಿಯವನ
ಸ್ವಂತಿಕೆ ಸತ್ತಿತ್ತು..l
ನಾರದಬುದ್ಧಿಗೆ
ಬುದ್ದಿನೇ ಬಿದ್ದಿತ್ತು..ll
ಹೋದಲ್ಲೆಲ್ಲಾ
ಕೇಳೋದೇ ಹೆಚ್ಚು l
ಕಂಡವರನ್ನೆಲ್ಲಾ
ಸಂಶಯದಿ ಕಾಣೋದೆ
ಹುಚ್ಚು..ll
ಯಾರನ್ನು ನೋಡಿದರೂ
ನಂಬದ ಬದುಕು l
ಕಿವಿ ಸರಿಯಾಗಬೇಕಿತ್ತು
ಮತ್ತು ಉದ್ಧಾರವಾಗಲು
ಕಿವಿಯ ಹಿತ್ತಾಳೆ
ಕರಗಿಸಬೇಕಿತ್ತು..ll
