STORYMIRROR

ಹೃದಯ ಸ್ಪರ್ಶಿ

Abstract Classics Inspirational

4  

ಹೃದಯ ಸ್ಪರ್ಶಿ

Abstract Classics Inspirational

ಜೀವನ

ಜೀವನ

1 min
336

ಮುಗಿಯದ ಪಯಣವಿದು

ಅಲ್ಲಲ್ಲಿ ತಿರುವು

ಅಂತ್ಯವಿಲ್ಲದ ಹಾದಿಯಿದು

ಕೆಲವೊಂದು ನಿಲ್ದಾಣ..


ಅಲ್ಲೊಂದು ಇಲ್ಲೊಂದು ಪರಿಚಯ

ಕ್ಷಣದ ಅನಿಸಿಕೆ ಅತಿಶಯ

ಏಳು ಬೀಳಿನ ಬಾಳಿದು

ನಯ ವಿನಯ ಅನಿವಾರ್ಯ


ಒಮ್ಮೆ ಅಳು ಮತ್ತೊಮ್ಮೆ ನಗು

ಬಾಳಿನ ರೀತಿಯಿದು

ಅರಿತು ನಡೆದರೆ ಸುಖ

ಇಲ್ಲವೇ ಬದುಕೊಂದು ಬರೀಯ ಗೋಳು


ಪ್ರೀತಿ ಸ್ನೇಹದ ಜೊತೆಗಾರ

ನೋವು ನಲಿವಿನ ಮಮಕಾರ

ನಿಲ್ಲದು ಈ ಪಯಣ

ಸಮ್ಮಿಶ್ರ ಭಾವದ ಹೂರಣ..



Rate this content
Log in

Similar kannada poem from Abstract