Pushpa Prasad

Classics Inspirational Others

4  

Pushpa Prasad

Classics Inspirational Others

ಜೀವನ ರಹಸ್ಯ

ಜೀವನ ರಹಸ್ಯ

1 min
323


ಕ್ಯಾಲೆಂಡಿರಿನ ದಿನಗಳು ದಿನದಿಂದ

ದಿನಕ್ಕೆ ಉರುಳಿಹೋಗುತ್ತಿವೆ 

ಕಾಲನ ನಡೆ ಎತ್ತಣ ಕಡೆಗೋ?

ಸಮಯವನ್ನು ಮಾತ್ರ ನಾವು ನೀವು

ವ್ಯಯಿಸುತ್ತಿದ್ದೇವೆ

ರಾತ್ರಿ,ಬೆಳಗು ನಿಲ್ಲದಿರುವ ಈ ಚಕ್ರ

ಬದುಕ ಬಂಡಿಯ

ಎಳೆಯುತ್ತಿರುವರು ಯಾರು?


ವ್ಯವಸ್ಥಿತ ಪಿತೂರಿ ಈ ಕಾಲನದು

ವಯಸ್ಸಾಗುತ್ತಿದ್ದಂತೆ ಆಗುತ್ತಿದೆ

ಶಕ್ತಿ ದಿನದಿಂದ ದಿನಕೆ ಕಡಿಮೆ

ಶಕ್ತಿ ಕಡಿಮೆಯಾಗುತ್ತಿದ್ದಂತೆ

ಬದುಕಬೇಕೆಂಬ ಚಪಲ ಹೆಚ್ಚು

ಸಾವಿನ ಬಾಗಿಲ ಯಮ

ತಟ್ಟುತ್ತಿರುವಾಗ ಜೀವನದಲ್ಲಿ

ಪ್ರೀತಿಯ ಸೆಳೆತ ಯಾಕೋ?


ಜಗಳ,ಮನಸ್ತಾಪ,ಹುಚ್ಚು

ಮನಗಳ ನಡುವೆ

ಬೇಡವೆಂದರೂ ನಾವೇ

ತೋಡುತ್ತಿರುವೆವು ದೊಡ್ಡ ಕಂದಕ

ಕೋಪ,ದ್ವೇಷದ ಕೆನ್ನಾಲಗೆಯ

ಚಾಚಿ ಸುಡುತಲಿರುವೆವು 

ಪ್ರೀತಿ-ಪ್ರೇಮದ ಬಲೆಯ ಕ್ಷಣ

ಮಾತ್ರದಿ ಕಳಚುವ ಈ ಪರಿ ಯಾಕೋ?


ಹುಟ್ಟು-ಸಾವು ಜೀವನದ

ಎರಡು ಕೊನೆಗಳು

ಜನನ ಆಕಸ್ಮಿಕವಾದರೂ

ನಡೆಯುತ್ತಿರುವ ಜೀವನದ ದಾರಿ ಸತ್ಯವೆ 

ಜೀವನ ಹೀಗೆ ನಡೆಯಬೇಕೆಂಬ

ನಿಯಮವಿಲ್ಲ ಯಾರಿಗೂ

ಜೀವನದ ಕೊನೆ ಮುಟ್ಟುವುದು

ಇಲ್ಲಿ ಅನಿವಾರ್ಯವಾದರೂ

ಈ ಜೀವನದ ಅನುಭವದ

ಗುರಿಯಾದರೂ ಏನು?


ಬಂದು ಹೋಗುವ ನಡುವೆ

ಎಷ್ಟೊಂದು ಬಯಕೆಗಳು

ಕೊನೆ-ಮೊದಲಿಲ್ಲದೆ ಸೆಳೆಯುತ್ತಿರುವುದು,

ಕಾಡುತಿರುವುದು ಸತತ

ನಾನೇ ಎಲ್ಲವೂ,ಎಲ್ಲವೂ ನನ್ನದೇ

ಎಂಬ ಹುಚ್ಚು ಹಂಬಲ

ಎಂದೂ ತನ್ನದಾಗದ,

ಯಾರಿಗೂ ಕೈವಶವಾಗದ

ಈ ಜೀವನ ರಹಸ್ಯವಾದರೂ ಏನು?


Rate this content
Log in

Similar kannada poem from Classics