ಜಾಣ ಗಿಣಿ
ಜಾಣ ಗಿಣಿ
ಮರದ ಮೇಲೆ
ಗಿಣಿಯು ಒಂದು
ಗೂಡು ಕಟ್ಟಿತು
ಗೂಡಿನೊಳಗೆ
ಕುಳಿತು ಕೊಂಡು
ಇಣುಕಿ ನೋಡಿತು
ಪುಟ್ಟ ಕಣ್ಣು
ಅರಳಿಸುತ್ತಾ
ಮತ್ತೆ ನೋಡಿತು
ಬಿಲ್ಲು ಹಿಡಿದ
ಬೇಡನ ನೋಡಿ
ಹೆದರಿ ಬಿಟ್ಟಿತು
ಗೂಡಿನೊಳಗೆ
ಓಡಿ ಹೋಗಿ
ತನ್ನ ಮರಿಯ
ಎತ್ತಿಕೊಂಡು
ಎದೆಗೆ ಅವಚತು
ಪುಟ್ಟ ಪುಟ್ಟ
ಕಡ್ಡಿ ಆಯ್ದು
ಗೂಡು ಮುಚ್ಚಿತು
