ಹೊಸ ಬಾಳ್ವೆ
ಹೊಸ ಬಾಳ್ವೆ
ಒಂದು ಗಂಡು
ಒಂದು ಹೆಣ್ಣು
ಕೂಡಿ ಕೊಂಡು
ಕರವ ಹಿಡಿದು
ಅಗ್ನಿ ಮುಂದೆ
ಎದ್ದು ನಿಂತು
ಏಳು ಹೆಜ್ಜೆ
ಮುಂದೆ ಇಟ್ಟು
ಧರ್ಮದಲ್ಲಿ
ಅರ್ಥದಲ್ಲಿ
ಕಾಮದಲ್ಲಿ
ನಿನ್ನ ಮೀರಿ
ನಡೆಯೆನೆನುತ
ಮಾತು ಕೊಟ್ಟು
ಒಂದು ಗೂಡಿ
ಹೊಸ ಬಾಳಿನ
ಹೊಸಿಲ ದಾಟಿ
ಹೊಸ ಭಾವ
ಹೊಸ ರಾಗ
ಬೆರೆತ ಮಿಲನ
ಹೊಸ ಬಾಳಿನ
ಹೊಸ ಉದಯ
