STORYMIRROR

ಶಿವಲೀಲಾ ಹುಣಸಗಿ

Tragedy Action Others

4  

ಶಿವಲೀಲಾ ಹುಣಸಗಿ

Tragedy Action Others

ಹಚ್ಚಲಾದಿತೇ ಕಂದೀಲು?

ಹಚ್ಚಲಾದಿತೇ ಕಂದೀಲು?

1 min
8

ಕಳೆದು ಹೋದ ಗಳಿಗೆ
ಮತ್ತೆ ಬಾರದು,
ಪ್ರೀತಿ,ಪ್ರೇಮವೆಂಬ ಸಲಿಗೆ
ಉರುಳಿಗೆ ಸಮವದು.
ಕತ್ತು ಹಿಸುಕಿದಂತೆ
ಆಗೀಗ ನನ್ನೊಳಗೆ
ಜ್ವಾಲಾಮುಖಿಯಂತೆ
ಸಿಡಿದು ಕೆನ್ನಾಲಿಗೆ ಚಾಚಿದಂತೆ
ಮತ್ತೆ ಬಾರದು ಸನಿಹಕೆ,
ಮಂಪರು ಹಚ್ಚಿದಂತೆ ಸುವ್ವಲಾಲಿ!
ಕುಡಿದವರ ನಂಬಬಹುದು
ಕುಡಿದಂತೆ ನಟಿಸುವವರ ನಂಬಲಾದಿತೆ?
ಎತ್ತ ಸಾಗಿದೆ ಬದುಕು
ನೆತ್ತರು ಹರಿದರೂ ಬಾರದು ನಿಶ್ಚಿಂತೆ!
ಆಗೊಮ್ಮೆ ಈಗೊಮ್ಮೆ ಸ್ಫೋಟಗೊಂಡು
ನರಳುವ ಸದ್ದಿಗೆ ಸುದ್ದಿ ಬೇಕೆ?
ಯಾಕಾದರೂ ಹೊತ್ತು ಮುಳುಗಿತು?
ಇರುಳಿಗೆ ಕಂದೀಲು ಹಚ್ಚಲಾದಿತು!
ಮನಸ್ಸಿನ ಕತ್ತಲೆಯ ಕಳೆಯಲು
ಹಚ್ಚಲಾದಿತೇ ಕಂದೀಲು?
ಯೋಚಿಸಿದಷ್ಟು ನಿರಾಳ ಉಸಿರು!
ಇನ್ನೂ ಅಮಲು ಏರುವ ಗಳಿಗೆಗೆ
ತಾರೆಗಳು ಮೂಡ್ಯಾವೆ ಬಾನಲಿ!
ಮೂದೇವಿ ನಕ್ಕಾಳೆ ಇರುಳಲಿ!.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy