ಗ್ಲಾಸುಮೇಟು
ಗ್ಲಾಸುಮೇಟು
ಕ್ಲಾಸು ಮೇಟು ಬಂದಿದ್ದ
ಗ್ಲಾಸು ಮೇಟೂ ಆಗಿಹೋದ
ತುಂಬಾ ದಿನಗಳ ನಂತರ ಅಲ್ಲವೇ?
ನೆಪ ಬೇಕಿತ್ತಷ್ಟೆ...ll
ಕ್ಲಾಸಿನ ಕ್ಲಾರಾಳ ಮದುವೆ
ಕ್ಲ್ಯಾರಿಪಿಕೇಷನ್..
ತಂಗವೇಲುನ ಜಾಬ್
ಅಲಮೇಲಳ ಅಪೇರ್..
ಸುಖಾಸುಮ್ಮಗೆ
ಮಾತನಾಡಲು..
ಗ್ಲಾಸು ಬೇಡವೇ?
ಹೆಂಡ ಕುಡಿಯೋಕೆ
ಹುಡುಕುತ್ತಾರೆ ನೆಪ
ಬಯ್ಯೋ ಹೆಂಡತಿ ಮುಂದೆ
ಹೆಂಡಅತಿಯಾದರೂ..
ನನಗೇನಾಗಿಲ್ಲವೆಂಬ
ತೋರ್ಪಡಿಕೆ..ll
ಕಣ್ಣು ಸುಳ್ಳು ಹೇಳಲಾರದಲ್ಲ...
ಕ್ಲಾಸು ಮೇಟು ಜಾರಿಕೊಂಡ
ನಾನು ಸಿಕ್ಕಾಕೊಂಡೆ..
ಪ್ರಶ್ನೆಪತ್ರಿಕೆ ಸಿದ್ಧವಾಗಿತ್ತು ll