ಗಜಲ್
ಗಜಲ್
ಭಾವಲೋಕದಲ್ಲಿ ತಿರಿವವರ ಸಾಂಗತ್ಯವಿದೆ ಸಾಕಿ
ನೋವಿನೆಲ್ಲೆಗಳನ್ನೆಲ್ಲ ದಾಟಿದ ನಂಬಿಕೆಯಿದೆ ಸಾಕಿ
ಮಸಣದ ಮಾರಿಗಳೇ ಬದುಕಿನುದ್ದಕೂ ಮುತ್ತಿವೆ
ಕಸವರ ಕಾವ್ಯದಿ ನನ್ನನವರತ ಪಯಣವಿದೆ ಸಾಕಿ
ಸತ್ತ ಅದೆಷ್ಟೋ ಕನಸಿನ ಹೆಣ ಹೊತ್ತವನು ನಾನು
ಭತ್ತೇರಿಯೊಳಗೆ ಕಾಪಿಟ್ಟ ಒಲವಸಾಲುಗಳಿದೆ ಸಾಕಿ
ಇರಿದವರ ಪಾದಕ್ಕೂ ಪುಷ್ಪ ಚೆಲ್ಲಿ ತುಸು ಕಾದಿರುವೆ
ಹಿರಿದಾದ ಬಾಳಿಗೆ ಇಗಷ್ಟೆ ಖುಷಿ ಶುರುವಾಗಿದೆ ಸಾಕಿ
ಬರದ ಬದುಕಿಗೆ ಲಕುಮಿಕಂದನ ಧನ್ಯ ಕೃಪೆಯೊಂದಿದೆ
ಅಬ್ದಿಯಲೆಗಳ ತೆರದಿ ಜೀವನ ಸಾಗಿ ರಂಗೇರಿದೆ ಸಾಕಿ..

