STORYMIRROR

Lakumikanda Mukunda

Tragedy

2  

Lakumikanda Mukunda

Tragedy

ಗಜಲ್

ಗಜಲ್

1 min
101

ಕೆಂಡದುಂಡೆಯ ಹಾದಿಯೊಳು ಬಂಡತನದಿ ಸಾಗಿರುವೆ ಸಾಕಿ..

ಮೊಂಡು ಮನದ ಬೀದಿಯಲ್ಲಿ ನಿನ್ನೊಲ್ಮೆಯ ಬೇಡಿರುವೆ ಸಾಕಿ..


ಏಷ್ಟೋ ಹಸಿಗಾಯಗಳಿಗೆ ಮುಲಾಮು ಬಳಿದು ನಗುತಿರುವೆ

ಗರ್ಭದಿಂದವತರಿಸಿದಾಗಲೆ ನಂಜುಂಡು ಬೆಳೆದಿರುವೆ ಸಾಕಿ..


ಒಡಲಾಗ್ನಿಯಲ್ಲಿ ಬೆಂದ ಸಾಸಿರ ಕನಸಿನಾಶೆಗಳ ಕೆಂಬೂದಿ ಇದೆ..

ಏಕಾಏಕೀ ಉಳಿದ ಭಾವಗಳನ್ನೆಲ್ಲ ಮಾರಾಟ ಮಾಡಿರುವೆ ಸಾಕಿ..


ಸ್ವಾರ್ಥದ ಮರ್ಥ್ಯ ಲೋಕಕ್ಕೆ ಮತ್ತೆಂದು ಬರಲಾರೆ ಸಾಕಾಗಿದೆ..

ನೋವ ಮರೆತು ನನ್ನೊಂದಿಗೆ ನಾನೇ ಮಾತಿಗಿಳಿದಿರುವೆ ಸಾಕಿ..


ಮಂದಿರದಂತ ಮನವಿಂದೆಕೋ ಮದಿರೆಯ ಮತ್ತನ್ನರಸುತಿದೆ..

ನಗೆಗವಚ ಧರಿಸಿ ಮುಕುಂದನಣತೆಯಂತೆ ಬದುಕಿರುವೆ ಸಾಕಿ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy