ಬಾಳ ಸಂಗಾತಿ.
ಬಾಳ ಸಂಗಾತಿ.


ಪ್ರೀತಿ ಪದವ ನೂರಾರು ಕಾಲ ಕೆಳೋಣ
ಪಿಸು ಮಾತಲೆ ಕೂಗಿ ಕೂಗಿ ಹೆಳೋಣ
ಮೌನದಲಿ ಪ್ರಣಯ ಗೀತೆ ಬರೆಯೋಣ
ತಂಗಾಳಿಲಿ ಪ್ರೇಮ ಪತ್ರವ ಕಳಿಸೋಣ
ಕಾನನದಲ್ಲಿ ನವಿಲಂತೆ ನಲಿಯುವ
ಆಗಸದಲ್ಲಿ ಹಕ್ಕಿಯಂತೆ ಸುತ್ತುವ
ಕೊಲ್ಮಿಂಚಿಗೆ ಪ್ರೀತಿ ಪಾಠವ ಮಾಡೋಣ
ಸೂರ್ಯಂಗೆ ಮುಗುಳ್ನಗೆ ಚಿತ್ರವ ತೋರೋಣ
ಜಡಿ ಮಳೆಯಲ್ಲಿ ಕೈ ಹಿಡಿದು ನಡೆಯುವ
ಚಂದ್ರನ ಊರಲ್ಲೊಂದು ಅರಮನೆ ಕಟ್ಟುವ
ಸುಖ-ದುಃಖದಲಿ ಮುಗುಳ್ನಗೆ ಬೀರುವ
ಜೊತೆಯಾಗಿ, ಜೊತೆ ಜೊತೆಯಲಿ ನೂರಾರು ಕಾಲ ಬಾಳುವ.