ಎಂಥಾ ಲೋಕವಯ್ಯಾ ?
ಎಂಥಾ ಲೋಕವಯ್ಯಾ ?

1 min

141
ಅಮೃತವಿಲ್ಲದ ಜಲ, ಚೈತನ್ಯವಿಲ್ಲದ ಗಾಳಿ
ಹಿರಿಯರಿಲ್ಲದ ಮನೆ, ಗುರಿಯಿಲ್ಲದ ಪಯಣಿಗ
ಕೋಳಿಯು ಕೂಗದು, ನಾಯಿಯೂ ಬೊಗಳದು
ಹಕ್ಕಿಗಳ ಕಲರವವಿಲ್ಲ, ನದಿಗಳ ಸಪ್ಪಳವಿಲ್ಲ
ನೆರಳ ನೀಡುವ ಮರಗಳಿಲ್ಲ, ಫಲ ತೆಗೆಯುವವನಿಗೆ ಬೆಲೆಯಿಲ್ಲ
ಸಂಬಂಧಗಳ ಮರೆತಿಹರು, ಅಪೈರ್ ಗಳಲಿ ಮಿಂದಿಯರು
ಕುರ್ಚಿಗಾಗಿ ಯುದ್ಧ, ನೀರಿಗಾಗಿಯು ಯುದ್ದ
ಬದುಕಿನಲೂ ಯುದ್ಧ, ಸಾವಿನಲ್ಲಿಯೂ ಯುದ್ಧ
ರಾಜ ಧರ್ಮ ತಿಳಿದಿಲ್ಲ, ರಾಜಕಾರಣಿಗಳಾಗಿಯರು
ಧರ್ಮ ಮರೆತಿಯರು, ಜಾತಿ ಎತ್ತಿ ಹಿಡಿದಿಯರು
ಶಾಂತಿಯಿಲ್ಲ, ನೆಮ್ಮದಿ ಇಲ್ಲ, ನಿದ್ದೆಯೂ ಇಲ್ಲ
ಸ್ವಾತಂತ್ರ್ಯವಂತು ಮೊದಲೇ ಇಲ್ಲ
ಪ್ರೀತಿ ಮರೆತಿಯರು, ದ್ವೇಷ ಹರಡಿರುವರು
ಭಯವ ತುಂಬಿಯರು, ಬಲಾತ್ಕಾರ ಮಾಡಿಯರು
ಇದು ಎಂಥಾ ಲೋಕವಯ್ಯಾ ?