ಮತ್ತೆ ನಾ ಹೇಗೆ ಬರೆಯಲಿ ಕವಿತೆಯಾ ?
ಮತ್ತೆ ನಾ ಹೇಗೆ ಬರೆಯಲಿ ಕವಿತೆಯಾ ?

1 min

102
ರತಿಯ ಅನುಭವವಿಲ್ಲ,
ಕವಿಯ ಕಲ್ಪನೆಗಳಿಲ್ಲ,
ದೇಶ ಸುತ್ತಲಿಲ್ಲ,
ಕೋಶ ಓದಲಿಲ್ಲ.
ಪ್ರೀತಿ ಮಾಡಲಿಲ್ಲ,
ಕೋಪ ಕಾಣಲಿಲ್ಲ,
ಪದಗಳ ಗೆಳೆತನವಿಲ್ಲ,
ವಿರಹದ ವೇದನೆಗಳಿಲ್ಲ,
ನಿನ್ನೆಯ ನೆನಪುಗಳಿಲ್ಲ,
ನಾಳೆಯ ಚಿಂತೆಗಳಿಲ್ಲ,
ಮತ್ತೆ ನಾ ಹೇಗೆ ಬರೆಯಲಿ ಕವಿತೆಯಾ ?