STORYMIRROR

Danesh G

Romance

2  

Danesh G

Romance

ಸಂಗಾತಿ

ಸಂಗಾತಿ

1 min
546

ಸಾಹಿತ್ಯದ ಕುರುಹುಗಳಿಲ್ಲ, ಸಾಹಿತಿ ಆಗಹೊರಟೆ,

ಭಾವನೆಗಳ ಮೂಲ ಅರಿಯೆ, ಪ್ರೇಮಿ ಆಗಹೊರಟೆ,


ಕನಸುಗಳಿಲ್ಲದ ಕಣ್ಣುಗಳಿಗೆ ಜೀವವ ನೀ ನೀಡಿರುವೆ

ಅಲೆಮಾರಿಯಾದ ನಾನು, ನೆಲೆನಿಲ್ಲ ಬಯಸಿರುವೆ,

ಕೊಳಲು ನಾನಾಗಿರಲು, ಉಸಿರು ನೀನಾಗು ಗೆಳತಿ.


ಪ್ರೀತಿ ಸಾಲ ಕೇಳಿರುವೆ, ಇಲ್ಲ ಎನ್ನದಿರು ಸಖಿಯೆ!

ಉಸಿರಿರುವರೆಗು ನೀಡುವೆ, ಪ್ರೀತಿಯ "ಇ ಎಮ್ ಐ"

ಭಾವ ನೀನಾಗು, ಧ್ವನಿ ನಾನಾಗುವೆ ಗೆಳತಿ.


ಗುರಿ ಇಲ್ಲದ ಪಯಣಿಗ ನಾ, ಕೈ ಹಿಡಿದು ನಡೆಸುವೆಯಾ?

ಕೈ ಚಾಚಿ ನಿಂತಿರುವೆ, ಒಮ್ಮೆ ಆಲಂಗಿಸು ಸಖಿಯೆ,

ಸುಖ ದುಃಖದಲಿ ಜೋಡಿಯಾಗುವೆ ನಿನ್ನ ಸ್ನೇಹದಲ್ಲಿ


ನನ್ನೆದೆಯ ಗುಡಿಗೆ, ಬಲಗಾಲಿಟ್ಟು ಬಾ ಸಖಿಯೆ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance