ಕವನ ಬರೆಯೋಣ
ಕವನ ಬರೆಯೋಣ
ಕವನ ಬರೆಯೋಣ,
ಪದಕ ಗೆಲ್ಲೋಣ
ಮಕ್ಕಳು ಆಗೋಣ,
ದಡ್ಡರು ಆಗೋಣ,
ಕವನ ಬರೆಯೋಣ
ಶಿಖರವ ಏರೋಣ,
ನದಿಯಲಿ ಈಜೋಣ,
ಕವನ ಬರೆಯೋಣ
ಪಠ್ಯವ ಓದೋಣ,
ಜ್ಞಾನಿಗಳು ಆಗೋಣ,
ಕವನ ಬರೆಯೋಣ
ಆಟವ ಆಡೋಣ,
ಊಟವ ಮಾಡೋಣ,
ಕವನ ಬರೆಯೋಣ
ನಾವುಗಳು ಆಗೋಣ,
ಸಹಬಾಳ್ವೆ ಮಾಡೋಣ,
ಕವನ ಬರೆಯೋಣ
ಸ್ಕ್ಯಾನು ಮಾಡೋಣ,
ಪ್ರಿಂಟು ಮಾಡೋಣ,
ಕವನ ಬರೆಯೋಣ
ಕವನ ಬರೆಯೋಣ,
ಬರೆದು ಬರೆದು ಬೇಂದ್ರೆ ಆಗೋಣ.
