ಕುರುಡ ಕಂಡ ಪ್ರಕೃತಿ
ಕುರುಡ ಕಂಡ ಪ್ರಕೃತಿ


ಕಣ್ಣಿಲ್ಲದ ಕುರುಡ ಕಂಡನಂತೆ ಕನಸೊಂದು
ತನ್ನ ಬಳಿಗೆ ಬಾಯೆಂದು ಕರೆಯಿತಂತೆ ಮರವೊಂದು...
ಎಲ್ಲಿ ನೋಡಲಲ್ಲಿ ಹಸಿರು ಎಲೆಗಳ ರಾಶಿ
ಯಾವುದೆಂದು ನೋಡಿದರೆ ಇದು ಪ್ರಕೃತಿಯ
ಸಸ್ಯಕಾಶಿ
ಹರಿಯುತಿಹಳು ಗಂಗೆ ಝರಿಯಂತೆ
ಮುಳುಗುತಿಹನು ರವಿ ಕಾಣದಂತೆ
ಮೃಗಜಲಚರಪಕ್ಷಿಗಳ ಶಬ್ದ
ಸಂಗೀತದಂತೆ
ಕಣ್ಣಿಲ್ಲದ ಕುರುಡನಿಗೂ ಕಾಣಿಸಿತಂತೆ
ಸೌಂದರ್ಯದ ಈ ಚಿತ್ರ ಸಂತೆ
ಬೆಟ್ಟ ಗುಡ್ಡಗಳು ಶಿವಲಿಂಗದಂತೆ
ಪ್ರಜ್ವಲಿಸಿತು ಓಂಕಾರವಂತೆ
ಹೂಗಿಡಗಳ ಅಲಂಕಾರವಂತೆ
ಸೌಂದರ್ಯದ ಸವಿಕಾಣದವ
ನಿಜ ಕುರುಡನಂತೆ....