STORYMIRROR

Jyothi Baliga

Inspirational Others

4  

Jyothi Baliga

Inspirational Others

ಚಿಟ್ಟೆ

ಚಿಟ್ಟೆ

1 min
23.6K

ಓ ಚಿಟ್ಟೆ ಬಣ್ಣದ ಚಿಟ್ಟೆ

ಹೂವಿಂದ ಹೂವಿಗೆ ಹಾರುವ ಚಿಟ್ಟೆ

ಬಣ್ಣ ಬಣ್ಣದ ನಿನ್ನ ರೆಕ್ಕೆಯಲಿ

ಚಂದ ಚಂದದ ಚುಕ್ಕಿಯ ರಂಗವಲ್ಲಿ


ಹೇರಿಕೊಂಡಿರುವೆ ಕಾಮನಬಿಲ್ಲಿನಂತ ಬಣ್ಣಗಳು

ಮೈಯ ಮೇಲೆಲ್ಲಾ ಕಪ್ಪು ಚುಕ್ಕೆಗಳು

ನಿನ್ನ ಅಂದ ನೋಡಲು ಬಲು ಸುಂದರ

ಹಿಡಿಯಲು ಹೋದರೆ ನೀ ಓಡುವೆ ಬಲು ದೂರ


ಮಳೆ ಬರಲಿ ಬಿಸಿಲಿರಲಿ

ಹಾರುವುದು ನೀ ನಿಲ್ಲಿಸಲಿಲ್ಲ

ಕೂತಲ್ಲೇ ಕೂರುವುದು ನಿನಗೆ ತಿಳಿದಿಲ್ಲ

ಮನುಜನ ಕಣ್ಮನ ತಣಿಸುವುದು ಬಿಡಲಿಲ್ಲ


ನಾಲ್ಕು ದಿನದ ಬದುಕೆಂದು ತಿಳಿದರೂ ನೀನು

ನಾಳೆಯ ಬಗ್ಗೆ ಯೋಚಿಸುವುದಿಲ್ಲ

ನಿಮ್ಮ ಸಂತಸದ ಜೀವನವೇ 

ಆದರ್ಶವಾಗಲಿ ಮಾನವರಿಗೆಲ್ಲ



સામગ્રીને રેટ આપો
લોગિન

Similar kannada poem from Inspirational