ಕನಸ್ಸಾ ?
ಕನಸ್ಸಾ ?

1 min

99
ಕನಸು ಮೂಡಿ, ಆಸೆ ಹೆಚ್ಚುತ್ತಿದೆ
ವಿದಿಯ ನಡೆಯ ಪ್ರಶ್ನೆ ಮಾಡುತಿದೆ
ಸೋತ ಮನಸ್ಸು, ಗೆಲ್ಲ ಬಯಸುತಿದೆ
ತಾಳ್ಮೆಯ ತಾಳ್ಮೆಯು ಮಾಯವಾಗುತಿದೆ
ಭಯದ ಭಯವೂ, ಧೈರ್ಯ ತುಂಬುತಿದೆ
ಕಣ್ಣೀರ ಮರೆತ ಕಣ್ಣುಗಳು, ಒದ್ದೆಯಾಗುತಿದೆ
ಕನಸು ಮೂಡುತಿದೆ, ಆಸೆ ಹೆಚ್ಚುತಿದೆ
ಯೋದ್ಧನಾಗುವ ಕನಸು, ಅನ್ಯಾಯವ ಅಳಿಸುವ ಕನಸು
ಹಠವಾದಿಯಾಗುವ ಕನಸು, ಧೈರ್ಯವ ಹಂಚುವ ಕನಸು
ಅನ್ಯಾಯದ ಹಾದಿಯಲಿ, ಪ್ರಾಮಾಣಿಕತೆಯ ಹೂ ಚೆಲ್ಲುವ ಕನಸು
ನೊಂದ ಜೀವಗಳಿಗೆ ದಾರಿ ದೀಪವಾಗುವ ಕನಸು
ನಾನು ನಾವಾಗುವ ಕನಸು, ನಾವು ಭಾರತೀಯರಾಗುವ ಕನಸು.