STORYMIRROR

Danesh G

Others

2  

Danesh G

Others

ಸ್ತ್ರೀ

ಸ್ತ್ರೀ

1 min
329

ಪ್ರೀತಿಯ ಆಗರವು ನೀನು

ತ್ಯಾಗದ ಪ್ರತಿರೂಪವು ನೀನು

ಜೊತೆಯಲಿರಲು ನೀನು, ಧೈರ್ಯಕ್ಕೆ ಧೈರ್ಯ ಜಾಸ್ತಿ


ಹುಣ್ಣಿಮೆಯ ಚಂದಿರನು ನೀನು

ಮಲ್ಲಿಗೆಯ ಕುಲದವಳು ನೀನು

ಜೊತೆಯಲಿರಲು ನೀನು, ಅಂದಕ್ಕೆ ಅಂದ ಜಾಸ್ತಿ


ತಾಯಿ ನೀನು, ತಂಗಿ ನೀನು

ಮಡದಿ ನೀನು, ಮಗುವು ನೀನು

ಜೊತೆಯಲಿರಲು ನೀನು, ನಂಬಿಕೆಗೆ ನಂಬಿಕೆ ಜಾಸ್ತಿ


ಮಮತೆಯು ನೀನೇ, ವಾತ್ಸಲ್ಯವೂ ನೀನೇ

ಗಂಧವು ನೀನೇ, ಸೌಗಂಧವೂ ನೀನೇ

ತ್ಯಾಗವು ನೀನೇ, ತಾಳ್ಮೇಯೂ ನೀನೇ

ಗಂಗೆಯು ನೀನೇ, ಗೌರಿಯೂ ನೀನೇ


ಪ್ರಕೃತಿಯೇ ನೀನಾಗಿರಲು, ಸ್ತ್ರೀ ಎಂದರೆ ಅಷ್ಟೇ ಸಾಕೆ ?



Rate this content
Log in