ಕೊರೊನ
ಕೊರೊನ
ಕೊರೊನ ಬಂತು ಕೊರೊನ ವಿಷ ತುಂಬಿದ ಮೈ ಅಂತೆ
ಮಾಡದಿರಿ ಸಹವಾಸ
ತೊಡಿಸುವುದು ಅದು ಯಮಪಾಷ
ಸ್ವಚ್ಚತೆ ಇರಲಿ ಅಂತರ ಮರೆಯದಿರಿ
ಭಯ ಬೇಡ ಆತ್ಮವಿಶ್ವಾಸ ಇರಲಿ
ಸಾವಿತ್ರಿ ಇಲ್ಲದ ಊರಲ್ಲಿ ಡಾಕ್ಟರ್, ನರ್ಸ್ಗಳೆ ದೇವರುಗಳು
ಮಾಡದಿರಿ ಹಾನಿ ಮುರಿಯದಿರಿ ಕಾನೂನು
ತಾತ್ತ್ಸರವು ಬೇಡ ಕೆಮ್ಮು, ನೆಗಡಿ, ಜ್ವರ ಏನೆ ಇರಲಿ
ಡಾಕ್ಟರ್ನ ಸಲಹೆ ನೀನೊಮ್ಮೆ ಪಡೆ
ಬೇಡ ನಮಗೆ ಇಟ್ಸ್ ಟೂ ಲೇಟ್ನ ಪಾಠ
ಬೆಳೆದ ಬೆಳೆಗೆ ಬೆಲೆ ಎಲ್ಲಿ ಎನ್ನ ಬೆಡವೊ ತಮ್ಮ
ಮತ್ತೆ ಬರದ ಜೀವಕ್ಕುಂಟಾ ಬೆಲೆ ಇಂದು!
ಅರಿತು ನಡೆಯೋ ನಿ ತಿಮ್ಮ
ಸರ್ಕಾರ ಎಂಬ ಮಹಾ ಪ್ರಭುಗಳೆ ಕಷ್ಟದ ದಿನಗಳಿವು
ಸಹಾಯ ಹಸ್ತ ಬೇಕಿಹುದು ಹಸಿವು ಹೊಸದಲ್ಲ,
ಅಸಹಾಯಕತೆ ಹೊಸದು
ಧರ್ಮದ ಕೂಗು ಕೇಳದು ಕೊರೊನ
ಅಂತಸ್ತಿನ ಅಹಂ ನೋಡದು ಕೊರೊನ
ಜಾಣರಾಗಿ! ಮನೆಯಲ್ಲಿಯೆ ಇರಿ ದಡ್ಡರಾಗಿ! ಮನೆಯಲ್ಲಿಯೆ ಇರಿ