ಮೌನರಾಗ
ಮೌನರಾಗ
ನಮಗಿರುವ ನಿಯತ್ತು ಮಾನವರಿಗಿಲ್ಲ
ಆದರೂ ನಮ್ಮಲ್ಲಿ ಭೇದ ಮಾಡುವರಲ್ಲ
ದೇಶಿ ವಿದೇಶಿ ತಳಿಯೆಂದು ಮಾನವರು ಬೇರ್ಪಡಿಸಿದರೂ
ಯಾವುದೊ ಹಳೆಯ ಮೋಹವಿದು
ನಡುರಸ್ತೆಯಲ್ಲಿ ಒಂದಾಗಿರುವೆವು
ಹೇಳಲಾಗದ ನೂರೊಂದು ಭಾವನೆಗಳು
ಚೂರು ಚೂರಾಗಿರುವ ಹೃದಯಗಳು
ತುಂಬಿ ಹರಿಯುವ ಕಣ್ಣುಗಳು
ಅರ್ಥ ಮಾಡಿಕೊಳ್ಳದ ಮನಸುಗಳು
ಪ್ರಾಣಿದಯ ಸಂಘದಿಂದ ನಮ್ಮಿಬ್ಬರಿಗೂ ಮಿಲನದ ಯೋಗ
ಕಹಿಯ ನುಂಗಿ ನಿಶಬ್ದದಿ ಹೊರಡುತಿದೆ ಮೌನರಾಗ