STORYMIRROR

Geethasaraswathi K

Tragedy Classics Others

4  

Geethasaraswathi K

Tragedy Classics Others

ಅಪರಿಚಿತ

ಅಪರಿಚಿತ

1 min
351

ಈ ಜಗವ ನೋಡಲು

ಜನುಮ ತಳೆದು ಬಂದೆ

ನೋಡಿ ಗಾಬರಿಗೊಂಡೆ 

ಅಪರಿಚಿತ ನಾನು॥

ಅರಳು ಕಂಗಳಲಿ 

ಜಗವ ನೋಡಿದಾಗ

ಕಂಡದ್ದು ಅಪರಿಚಿತ ಮುಖ

ಯಾಕೆಂದರೆ...

ನಾನೊಬ್ಬ ಅಪರಿಚಿತ ॥

ಬದುಕಲಿ ಮುಂದೆ ಸಾಗಿದಂತೆ 

ಎದುರಾದ ಸಂಗತಿಗಳು

ಎಲ್ಲವೂ ಹೊಸತು

ಜೀವನದ ಹಾದಿಯಲಿ

ಹೋಗುತ್ತ ಹೋಗುತ್ತ

ಅನುಭವ ಬೆಳೆದಂತೆ

ಪರಿಚಿತವಾಯ್ತು॥

ಪರಿಚಯ ಮನುಜ ಸಹಜಗುಣ 

ಹತ್ತಿರವಿದ್ದೂ ಅಪರಿಚಿತರಾಗಿ

ಬದುಕುವುದು ಮಾನವನ

ದೌರ್ಭಾಗ್ಯ॥


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy