ಆಡಂಬರ
ಆಡಂಬರ
ಮಂಟಪದಿ ಅದ್ದೂರಿ ಅಲಂಕಾರ
ಬಣ್ಣದ ಹೂವುಗಳ ಚಿತ್ತಾರ
ವಧುವಿನ ಮೊಗದಿ ದುಗುಡ ಬೇಸರ
ಕಂಬನಿಗಳ ಮೇಲೆ ನಿಂತ ಚಪ್ಪರ
ಮದುವೆಯೆಂದರೆ ಪ್ರತಿಷ್ಠೆಯ ಅನಾವರಣ
ಯಾರನ್ನೋ ಮೆಚ್ಚಿಸಲು ಆಡಂಬರ
ವರನ ಕುಟುಂಬದವರಿಗೆ ಅದೊಂದು ವ್ಯವಹಾರ
ಹೆಣ್ಣು ಹೆತ್ತವರಿಗೆ ಹೊರಲಾಗದ ಭಾರ
ಬಣ್ಣದ ದೀಪಗಳ ಮೆರುಗು
ಮದುವೆಯ ಮನೆಯ ತುಂಬಿದೆ ನಗುವು
ಕಾಣಲಿಲ್ಲ ಆ ತಂದೆಯ ಕಣ್ಣೀರು
ಮಿನುಗುವ ಚಪ್ಪರದ ದೀಪಗಳಿಗೂ
