ಆ ಕಲ್ಬೆಂಚು
ಆ ಕಲ್ಬೆಂಚು
ಆ ಕಲ್ಬೆಂಚು
ಇಂದು
ಖಾಲೀ ಇತ್ತು
ನಿನ್ನೆ
ನಾವಿಬ್ಬರೂ
ಅಲ್ಲಿದ್ವಿ
ಸಂಜೆ ಹೊತ್ತು
ಒಂದಿಷ್ಟು ಮಾತು
ಒಂದಿಷ್ಟು ನಗು
ಇನ್ನೊಂದಿಷ್ಟು
ಏನೋ ಖುಷೀ
ಸಂಗತಿ ಇತ್ತು
ಕೈಲಿದ್ದ
ಹುರಿಗಡಲೆ
ತಿಂತಿದ್ವಿ
ಮನಸಲ್ಲೇ
ಮಂಡಿಗೇನೂ
ತಿಂತಿದ್ವಿ
ಸುತ್ಲೂ
ಯಾರಿರಲಿಲ್ಲ
ಕತ್ಲೂ
ಮುತ್ತಿತ್ತು
ಮನಸೆಲ್ಲ
ನಿನ್ಕಡೇನೆ
ನಿನ್ಕೆನ್ನೆ
ಅರಳಿತ್ತು
ನಾ ಬಾಗಿ
ಮುದ್ಸಿದ್ದೆ
ನೀ ರಂಗೇರಿದ್ದೆ
ನಾಚಿ ನಕ್ಕೆ
ನಾನೂ ನಕ್ಕೆ
ಮನಸಿಲ್ದೇ
ಎದ್ವಿ
ಹೊರಟಿದ್ವಿ
ಇಂದೇಕೋ
ಅದೇ ಬೆಂಚು
ಖಾಲೀ ಇತ್ತು
ನೀನಿಲ್ಲದ ಹೊತ್ತು
ಮತ್ತೊಮ್ಮೆ ಕಾಡಿತ್ತು
ಆ ಬಿಸಿ ಮುತ್ತು..