ನ್ಯಾನೋ ಕಥೆ : ತ್ಯಾಗ
ತಾನಾಯಿತು ತನ್ನ ಗೆಳೆಯರಾಯಿತು ಎಂದಿದ್ದವನ ಬದುಕಲ್ಲಿ ತಾನಾಗಿ ಒಲಿದು ಬಂದವಳನ್ನು ಇವನೂ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಓದು ಮುಗಿದ ಮೇಲೆ ಕೆಲಸ ಪಡೆಯುವಲ್ಲಿ ಒತ್ತಾಸೆಯಾಗಿ ನಿಂತು, ಪ್ರೋತ್ಸಾಹಿಸಿ, ಹರಕೆಯನ್ನು ಹೊತ್ತು ಯಶಸ್ವಿಯಾಗುವಂತೆ ಮಾಡಿದ ಅವಳನ್ನು ಅವನು ದೇವತೆಯಂತೆ ಆರಾಧಿಸುತ್ತಿದ್ದ. ಅದ್ಯಾವ ಕಾರಣಕ್ಕೊ ಗೊತ್ತಿಲ್ಲ, ಅವಳು ಕಡ್ಡಿ ಮುರಿದಂತೆ ನಾನು ಮನೆಯಲ್ಲಿ ನೋಡಿದ ಹುಡುಗನ ಜೊತೆ ಮದುವೆ ಆಗುತ್ತೇನೆ ಎಂದಾಗ, ಮೊದಲು ತಮಾಷೆ ಎಂದುಕೊಂಡ, ಇಲ್ಲ ನಿಜ ಎಂದು ತಿಳಿದಾಗ ತಡೆಯಲು ಇನ್ನಿಲ್ಲದಂತೆ ಪ್ರಯತ್ನಿಸಿದ, ಆಗುವುದೇ ಇಲ್ಲ ಎಂದಾಗ ಅವಳ ಸಂತೋಷಕ್ಕಿಂತ ಹೆಚ್ಚೆನೂ ಬಯಸದ ಅವನು, ತನಗೇಷ್ಟೆ ನೋವುದರೂ ತೋರಿಸಿಕೊಳ್ಳದೆ ಸುಮ್ಮನಾದ. ಅವಳ ಸಂತೋಷಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ ಅವನು ಹುಚ್ಚನಾಗದಿದ್ದದೆ ದೊಡ್ಡ ವಿಷಯ. ಬಹುಶಃ ಅದು ಅವನ ತಂದೆ ತಾಯಿಯರ ಪುಣ್ಯ ಇರಬೇಕು.
ಜಿ. ಹರೀಶ್ ಬೇದ್ರೆ