Nagalakshmi K.P.

Drama Tragedy Others

4  

Nagalakshmi K.P.

Drama Tragedy Others

ತಟಸ್ಥ

ತಟಸ್ಥ

1 min
584


ಆಕೆ ಪ್ರೀತಿ ಸಿಗದ ಜೀವ. ಈತನಿಗೋ ಕಿವಿ ಕೇಳದು, ಮಾತು ಬಾರದ ಮೂಕ. ಇಬ್ಬರ ಭೇಟಿ ನಿಧಾನವಾಗಿ ಪ್ರೇಮಕ್ಕೆ ತಿರುಗಿತ್ತು. ಆತನ ಸನ್ನೆಗಳು ಈಕೆಗೆ ಸ್ವಲ್ಪವೂ ತಪ್ಪಿಲ್ಲದೆ ತಿಳಿಯುತ್ತಿದ್ದವು. ಆತ ಆಕೆಯ ಕಣ್ಣಿನ ಭಾಷೆ ಅರಿತಿದ್ದ. ಹೇಳುತ್ತಿದ್ದ, ನಿನ್ನ ಕಣ್ಣುಗಳು ಎಂದು ಸುಳ್ಳು ಹೇಳವು ಎಂದು!

ಒಂದಿನ ಧೋ! ಎಂದು ಸುರಿಯುವ ಮಳೆ. ಆಕೆ ರಸ್ತೆಬದಿ ಮರದ ಬುಡದಲ್ಲಿ ಒದ್ದೆ . ಇನ್ನೇನು ಮಳೆ ನಿಲ್ಲಬೇಕು, ರಸ್ತೆಯ ಆಚೆ ಬದಿ, ರಸ್ತೆದಾಟಲು ಪರದಾಡುತ್ತಿದ್ದ ಒಬ್ಬ ಕುರುಡನನ್ನು ಕಂಡು ಮರುಗಿ ಆತನಿಗೆ ನೆರವು ನೀಡಲು ಹೊರಟಳು. ಆದರೆ ವಿಧಿ ವಿಪರ್ಯಾಸ! ಆಕೆ ವೇಗದ ಮಿತಿ ಮೀರಿದ ಟ್ರಕ್ಕಿಗೆ ಸಿಲುಕಿದ್ದಳು. ತಲೆಗೆ ದೊಡ್ಡ ಪೆಟ್ಟು ಬಿದ್ದಿತ್ತು.

ಆಸ್ಪತ್ರೆಯಲ್ಲಿ ಆಕೆ, ಈತ ಓಡೋಡಿ ಆಸ್ಪತ್ರೆ ತಲುಪಿದ್ದ. ಆಕೆ ಇದ್ದ ವಾರ್ಡ್ಗೆ ಹಿಂಜರಿಯುತ್ತಲೇ ಹೋಗಿ ನೋಡಿದ. ಎಂದೂ ಸುಳ್ಳನ್ನಾಡದ ಕಣ್ಣುಗಳು ತಟಸ್ಥವಾಗಿದ್ದವು. ಎಂದೂ ತಟಸ್ಥ! ಆತನ ಎದೆ ಒಡೆದಿತ್ತು. ಕೂಗಲು ಬಾಯಿ ಬಾರದು. ಈಗ ಆತನೇ ಅವಳ ಕಣ್ಣಾಗಬೇಕಿತ್ತು!


Rate this content
Log in

Similar kannada story from Drama