kaveri p u

Classics Inspirational Others

4  

kaveri p u

Classics Inspirational Others

ಸಮಯ

ಸಮಯ

1 min
569



ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಈ ಸಮಯ ಅನ್ನೋದು ಬಹಳ ಕಿಲಾಡಿ ಕಂಡ್ರಿ.

ಒಮ್ಮೆ ಅಳಸತ್ತೆ ಮತ್ತೊಮ್ಮೆ ನಗಿಸುತ್ತೆ. ಮಗದೊಮ್ಮೆ ಭಯವನ್ನು ತಂದುಬಿಡುತ್ತೆ. ಈ ಸಮಯಕ್ಕೆ ಸರಿಯಾದ ಸಮಯವೇ ಇಲ್ಲಾ. ಖುಷಿಯಾಗಿ ಇದ್ದಾಗ ಖುಷಿಯಾಗಿ ಇರಲು ಬಿಡಲ್ಲಾ ನೋಡಿ ಈ ಸಮಯ.


ತಿಪ್ಪಣ್ಣ ಬಡವ 4 ಎಕರೆ ಭೂಮಿಯಲ್ಲಿ ತನ್ನೇಲ್ಲಾ ಕುಟುಂಬವನ್ನು ನೋಡಿಕೊಂಡು ಹೋಗುತ್ತಿದ್ದ. ಇಬ್ಬರು ಹೆಣ್ಣು ಮಕ್ಕಳು ಅವರಿಗೆ. ಆ ಇಬ್ಬರು ಮಕ್ಕಳು ಶಾಲೆಗೆ ಹೋಗಿ ಬಂದು ಅಪ್ಪನಿಗೆ ಸಹಾಯ ಮಾಡಲು ಹೊಲಕ್ಕೆ ಬರುತ್ತಿದ್ದರು. ಇರುವ ಕಡಿಮೆ ಸಮಯದಲ್ಲಿ ಅವರು ಅಪ್ಪಾ ಅಮ್ಮನ ಜೊತೆ ಹೊಲಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು.


ಬೆಳಿಗ್ಗೆ ಬೇಗ ಎದ್ದು ನೀರು ತಂದು ಅಮ್ಮನಿಗೂ ಸಹಾಯ ಮಾಡುತ್ತಿದ್ದರು. ನಿಜಕ್ಕೂ ಎಲ್ಲರಿಗೂ ಅವರು ಮಾದರಿ ಹೆಣ್ಣುಮಕ್ಕಳು. ಈಗಿನ ಮಕ್ಕಳು ವಾಟ್ಸಪ್, facbook ಅಂತಾ ಸಮಯ ಕಳೆಯುವಾಗ ಈ ಮಕ್ಕಳು ಮಾತ್ರ ಎಲ್ಲರಿಗೂ ಉದಾಹರಣೆ.


ಹಾಗೆಯೇ ಓದಿನಲ್ಲೂ ಮುಂದಿದ್ದ ತಿಪ್ಪಣ್ಣನ ಮಕ್ಕಳು ಶಾಲೆಗೂ ಮೊದಲಿಗರೇ ಆಗಿದ್ದರು. ಶಿಕ್ಷಕ ವೃಂದಕ್ಕೂ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಾಗಿದ್ದರು ತಿಪ್ಪಣ್ಣನ ಮಕ್ಕಳು. ಓದಲು ಬಡತನ ಎಂದೂ ಅಡ್ಡಿಯಾಗದು ಎನ್ನುವುದನ್ನು ತಿಪ್ಪಣ್ಣನ ಮಕ್ಕಳು ಲೋಕಕ್ಕೆ ಸಾರಿದ್ದರು.

ಕತ್ತಲು ತುಂಬಿದ ಮನೆಯಲ್ಲಿ ದೀಪದ ಬೆಳಕಿನ ಅಡಿಯಲ್ಲಿ ಮಕ್ಕಳೋದು ನಿರಂತರವಾಗಿ ಸಾಗುತ್ತಿತ್ತು. ಸಮಯದ ಸದುಪಯೋಗವನ್ನು ತಿಪ್ಪಣ್ಣನ ಮಕ್ಕಳು ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದರು.


ಇರುವ ಸಮಯವನ್ನು ನಮ್ಮವರಿಗಾಗಿ ಇಡೀ..

ಮತ್ತೆ ಆ ಸಮಯ ಬರುವುದಿಲ್ಲಾ...



Rate this content
Log in

Similar kannada story from Classics