STORYMIRROR

MAITHILI RAGHUPATHI

Tragedy Classics Others

4  

MAITHILI RAGHUPATHI

Tragedy Classics Others

ಶಿಕಾರಿ ಆದವಳ ಬರಹವೇ ಶಿಕಾರಿಯಾದಾಗ

ಶಿಕಾರಿ ಆದವಳ ಬರಹವೇ ಶಿಕಾರಿಯಾದಾಗ

2 mins
399


ಬರವಣಿಗೆಯ ಗೀಳು ಅಂಟಿದ್ದು‌ ಕಾಲೇಜಿನಲ್ಲಿ. ಅದೊಂದು ಚಟವೇ ಆಗಿ ನನ್ನ ಜೀವನದಲ್ಲಿ‌ ಪ್ರವೇಶ ಪಡೆಯುವ ಹೊತ್ತಿಗೆ ನಾನು ಮದುವೆಯಾಗಿ ಸಂಸಾರ ಸಾಗರದಲ್ಲಿ ಮುಳುಗಿ ಬಿಟ್ಟಿದ್ದೆ. ಮದುವೆಯಾದ ಹೊಸತರಲ್ಲಿ ಪ್ರತಿಯೊಬ್ಬರೂ ಅನುಭವಿಸಿದಂತೆ ನಾನೂ‌ ಕೂಡಾ ಅವರ ಸಂಪ್ರದಾಯಕ್ಕೆ ಹೊಂದಿಕೊಳ್ಳಲು ಕಷ್ಟ ಪಟ್ಟಿದ್ದೆ. ಪ್ರತೀ ದಿನದ ತೊಳಲಾಟದ ನಡುವೆ ಅದೊಂದು ದಿನ ನನ್ನ ಮತ್ತು ನನ್ನವರ ನಡುವೆ ಅದ್ಯಾವುದೋ ಕಾರಣಕ್ಕೆ ಜಗಳವಾಗಿತ್ತು. ಹತ್ತಿರ ಹತ್ತಿರ ಒಂದು ತಿಂಗಳು ನಾನು ಮಾತೇ ಆಡಲಿಲ್ಲ. ಅದೇ ಮೊದಲ ಬಾರಿ ನಾನು ಇನ್ನೊಬ್ಬರೊಡನೆ ಮಾತು ಬಿಟ್ಟಿದ್ದು. ಆ ಸಮಯದಲ್ಲಿ ನನ್ನ ಸಂಪೂರ್ಣ ಮನಸ್ಸು ಬರವಣಿಗೆಯತ್ತ ಮುಖ ಮಾಡಿತ್ತು. ನನ್ನ ಪಾಡಿಗೆ ನಾನು ಅವರ ಪಾಡಿಗೆ ಅವರು. ಹೀಗಿರುವಾಗ ಒಂದು ಕಥೆ ನನ್ನಿಂದ ಸೃಷ್ಟಿಯಾಗಿತ್ತು. ಗಂಡನೊಡನೆ ಮಾತನಾಡದೆ, ಒಂದು ತಿಂಗಳ ನಿರಂತರ ಒಂದೇ ವಿಷಯವಸ್ತುವಿನ ಯೋಚನೆಯಲ್ಲಿ ನಿದ್ರೆಗೂ ತುಸು ಬ್ರೇಕ್ ನೀಡಿ ಅಂತೂ "ಶಿಕಾರಿ ಆದವಳ ಆತ್ಮಕಥೆ" ಎಂಬ ಕಥೆ ಬರೆದೆ. ಒಂದು ಸ್ಪರ್ಧೆ ಇತ್ತು. ಅದಕ್ಕೂ ಆ ಕಥೆ ಕಳಿಸಿದೆ. ಅಲ್ಲಿ ನಿಯಮ ಇತ್ತು, ಕಥೆ ಸ್ವಂತದ್ದಾಗಿರಬೇಕು ಎಂಬ ಸಾಮಾನ್ಯ ನಿಯಮ. ನನಗೆ ನನ್ನ ಬರಹ ಎಂಬ ಗರ್ವ, ನಾನೇ ಬರೆದದ್ದು ಎಂಬ ಅಹಮ್ಮಿನಲ್ಲಿ ನಮ್ಮದೇ ಒಂದು ವಾಟ್ಸಾಪ್ ಗುಂಪಿನಲ್ಲಿ ಅದನ್ನು ಹಂಚಿಕೊಂಡೆ. ಮರುದಿನ ಮುಂಜಾನೆಯ ಹೊತ್ತಿಗೆ ಅದರ ಸ್ಕ್ರೀನ್ ಶಾಟ್ ನನಗೆ ಬಂತು. ಶಿಕಾರಿ ಆದವಳ ಕಥೆಯೇ ಶಿಕಾರಿಯಾಗಿ ಹೋಗಿತ್ತು. ಸ್ಪರ್ಧೆಯ ಫಲಿತಾಂಶವೂ ಬಂದಿತ್ತು. ನನ್ನ ಬರಹ ಸ್ಪರ್ಧೆಗೆ ಅನರ್ಹ. ಅದು ಬೇರೆಯವರದ್ದು. ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚುವ ಮೊದಲೇ ಬೇರೊಬ್ಬರು ಅದನ್ನು ತಮ್ಮ ಹೆಸರಿನಲ್ಲಿ ಹಂಚಿಯಾಗಿತ್ತು. ದುಃಖ ಉಮ್ಮಳಿಸಿ ಬಂತು. ವಿಧಿ ಇಲ್ಲದೆ ಮುಖಪುಸ್ತಕದಲ್ಲಿ ಈ ಕುರಿತು ಮುಕ್ತವಾಗಿ ಮಾತನಾಡಿ ಇರುವ ವಿಷಯ ಹೇಳಿದೆ. ಕೊನೆಗೆ ಕ್ಯಾಪಿಕ್ಯಾಟ್ ನಿಂದ ಕರೆ ಬಂತು. ಅವರ ಕಡೆಯವರಿಂದಲೂ ಕರೆ ಬಂತು. ಕೆಲವೇ ದಿನದಲ್ಲಿ ಅವಳ ಮದುವೆ. ಅವಳ ಮರ್ಯಾದೆ ಹೋಗುತ್ತೆ... ಸೋ.... ಸೋ....ಸೋ.... ಬ್ಲಾ....ಬ್ಲಾ...ಬ್ಲಾ... ಇದರ ಪರಿಣಾಮ ಅವಳ ಕಣ್ಣೀರು ಮುಖಪುಸ್ತಕದಲ್ಲಿನ ಈ ಕುರಿತ ಬರಹವನ್ನು ಡಿಲೀಟ್ ಮಾಡಿಸಿತು. ಆದರೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ಸಿಗುತ್ತಿದ್ದ ಪ್ರಮಾಣಪತ್ರ ಕೂಡಾ ನನ್ನ ಕೈ ತಪ್ಪಿ ಹೋಯಿತು. ನನ್ನ ಬೇಸರವೂ ಅವಳ ಕಣ್ಣೀರಿನ ಜೊತೆ ಕೊಚ್ಚಿ ಹೋಯಿತು.


ಹೀಗೆ ವಿವಿಧ ಬರಹಗಳನ್ನು ಬರೆದು ಬೇರೆ ಬೇರೆ ಗುಂಪುಗಳಲ್ಲಿ ಪ್ರಕಟಿಸುತ್ತಿದ್ದೆ. ಒಮ್ಮೆ ಮುಖಪುಸ್ತಕದಲ್ಲಿ ಪ್ರಕಟಿಸಿದ " ಶಾರದಕ್ಕನ ಜೀವನದ ಚಪ್ಪಾಳೆ" ಒಂದು ಮಾಸ ಪತ್ರಿಕೆಯಲ್ಲಿ ಪ್ರಕಟವಾಯಿತು. ಆದರೆ ಅದರ ಸೃಷ್ಟಿಯಾದದ್ದು ಮಾತ್ರ ಬೇರೆ ಯಾರಿಂದಲೋ.. ಆ ಸಂಪಾದಕರ ನಡುವೆ ನನಗಿದ್ದ ವೈಷಮ್ಯ ನೇರವಾಗಿ ಸಂಪಾದಕರನ್ನೇ ಹೊಣೆಯಾಗಿಸುವಂತೆಯೂ ಮಾಡಿತು. ಆದರೆ ಅವನಿಗಿರುವ ನೆಟ್ವರ್ಕ್ ನನ್ನ ಸುಮ್ಮನಾಗಿಸಿತು. 

ಇದೆಲ್ಲಾ ನಾನು ಮಾತ್ರ ಅನುಭವಿಸಿದ್ದಲ್ಲ ಈ ರೀತಿ ಬಹಳಷ್ಟು ಮಂದಿ ಅನುಭವಿಸುವಂತದ್ದೇ. ಒಬ್ಬ ಬರಹಗಾರನ ಶ್ರಮ ಕ್ಷಣ ಮಾತ್ರದಲ್ಲಿ ಬೇರೊಬ್ಬರ ಹೆಸರಿನಲ್ಲಿ ರಾರಾಜಿಸಿಬಿಡುತ್ತದೆ ಎಂದರೆ ಇದು ದುರಂತವಲ್ಲದೆ ಮತ್ತೇನು?


Rate this content
Log in

Similar kannada story from Tragedy