kaveri p u

Classics Inspirational Others

4  

kaveri p u

Classics Inspirational Others

ರತ್ನನ್ ಪ್ರಪಂಚ

ರತ್ನನ್ ಪ್ರಪಂಚ

1 min
458


ನಾನ್ ಸ್ಟಾಪ್ ನವೆಂಬರ್ ಎಡಿಷನ್-ಮಧ್ಯಂತರ


ರತ್ನನ್ ಪ್ರಪಂಚ ಸಿನಿಮಾದಲ್ಲಿ ಬರುವ ಒಂದು ದೃಶ್ಯದ ಬದಲಾವಣೆ (ನನ್ನ ಕಲ್ಪನೆಯoತೆ )


 "ಈಗಿರುವ ನಿನ್ನ ಅಮ್ಮ ನಿನ್ನ ಸ್ವಂತ ಅಮ್ಮ ಅಲ್ಲಾ ಕಣೋ, ನಿಂಗ್ ಅವಳು ಮೋಸ ಮಾಡಿದಾಳೆ, ನೀನು ಯಾರಿಗೋ ಬೇರೆಯವರಿಗೆ ಹುಟ್ಟಿದವನು, ಬೇಕಾದ್ರೆ ಕೇಳು ಹೋಗೋ "


(ಹೆತ್ತ ತಾಯಿಗೂ ಹೆಚ್ಚು ಪ್ರೀತಿ ಮಾಡಿದ ತಾಯಿಯನ್ನು ತನ್ನ ಸ್ವಂತ ಅಮ್ಮ ಅಲ್ಲ ಎನ್ನುವ ವಿಷಯ ನಾಯಕನಿಗೆ ಸಂಕಟ ಉಂಟು ಮಾಡುತ್ತದೆ)


ನಾಯಕ ನಟ ತನ್ನ ಅಮ್ಮನಿಗೆ : ಅಮ್ಮ, ನೀನು ನನ್ನ ಹೆತ್ತವಳು ಅಲ್ವಂತೆ, ನಿಜಾನಾ?


ಅಮ್ಮ : ಅದೆಲ್ಲ ಯಾರ್ ಹೇಳಿದ್ದು ನಿನಗೆ? ನೀನು ನನ್ನ ಮಗಾನೇ, ನಾನು ನಿನ್ ಅಮ್ಮನೇ!


ನಾಯಕ ನಟ : ಅದೆಲ್ಲ ಬೇಡ, ನೀನು ನನ್ನ ಸಾಕು ತಾಯಿನಾ ಹೇಳಮ್ಮ?


ಅಮ್ಮ : ಹೌದಪ್ಪ! (ಅಮ್ಮನ ಅಳು )


ನಾಯಕನಟ : (ಆಶ್ಚರ್ಯದೊಂದಿಗೆ, ಅಳುತ್ತ ) ಅಮ್ಮಾ ನಿನ್ನನ್ನು ಕೇಳಿದ್ದಕ್ಕೆ ಕ್ಷಮಿಸಮ್ಮ. ಹೊಟ್ಟೆಯಲ್ಲಿ ಹುಟ್ಟಿದರೆ ಮಾತ್ರಾ ಹೆತ್ತ ಅಮ್ಮಾನಾ? ಹೆತ್ತವಳನ್ನೂ ಮೀರಿಸುವ ಅಮ್ಮ ನೀನು. ನಿನ್ನಂತ ಅಮ್ಮನನ್ನು ಪಡೆಯೋದಿಕ್ಕೆ ನಾನದೇಷ್ಟು ಜನ್ಮದ ಪುಣ್ಯ ಮಾಡಿದ್ದೆ ಅನ್ಸತ್ತೆ. ಯಾರ್ ಏನೇ ಅನ್ಲಿ, ನೀನೇ ನನ್ನ ಹೆತ್ತಮ್ಮ, ನೀನೇ ನನ್ನ ಹೆತ್ತಮ್ಮ.


ಅಮ್ಮ : ಹೌದು ಕಣೋ, ಈ ಬರಿದಾದ ಮಡಿಲನ್ನು ತುಂಬಿದ ನೀನು ನನ್ನ ಸ್ವಂತ ಮಗಾನೇ ಕಣಪ್ಪ.


ಅಮ್ಮ- ಮಗ ಮತ್ತೇ ಮೊದಲಿನಂತೆ ಇರುತ್ತಾರೆ.


(ಚಿತ್ರದಲ್ಲಿ ಮಗನಿಗೆ ತನ್ನ ತಾಯಿ ತನ್ನ ಹೆತ್ತ ತಾಯಿ ಅಲ್ಲವೆಂದು ತಿಳಿದಾಗ ಅಮ್ಮನಿಗೆ ಹೇಳುತ್ತಾನೆ. ''ನಮ್ಮಿಬ್ಬರಿಗೆ ಸರಿ ಹೋಗುತ್ತಿಲ್ಲ, ನೀನು ನನ್ನ ತಾಯಿ ಅಲ್ಲಾ ಅನ್ನೋ ಸತ್ಯ ಹೇಳದೆ ಮೋಸ ಮಾಡಿದೀಯಾ, ನಾನು ನನ್ನ ತಾಯಿ ತಂಗಿಯರನ್ನ ಹುಡುಕ್ಕೊಂಡು ಹೋಗ್ತೀನಿ ಅಂತ ಸಾಕು ತಾಯಿಯನ್ನು ತೊರೆದು ಹೋಗುವ ದೃಶ್ಯವಿದು)


Rate this content
Log in

Similar kannada story from Classics