Vijayalaxmi C Allolli

Classics Fantasy Others

4  

Vijayalaxmi C Allolli

Classics Fantasy Others

ಪ್ರಯಾಣ ೨

ಪ್ರಯಾಣ ೨

2 mins
348



ಮುಂದುವರಿದ ಭಾಗ....


   ಸಿದ್ಧನಕೊಳ್ಳ ಊರಿನಿಂದ ಸ್ವಲ್ಪ ದೂರದಲ್ಲಿ ಒಂದು ಗುಡ್ಡದ ಪ್ರದೇಶ ಅದಕ್ಕೂ ಸಿದ್ಧನಕೊಳ್ಳ ಎನ್ನುತ್ತಾರೆ.ಅದು ಬೃಹತ್ ಬಂಡೆಗಳಿಂದ ಕೂಡಿದ್ದು ಅಲ್ಲಿ ಸಿದ್ಧೇಶ್ವರ ದೇವಸ್ಥಾನ,ಕಲ್ಯಾಣ ಮಂಟಪವು ಇದೆ.ಅಮಾವಾಸ್ಯೆ ದಿನ ಮಾತ್ರ ಜನ ಹೆಚ್ಚು ಇರುತ್ತಾರೆ.ಇನ್ನುಳಿದ ದಿನ ಅದು ನಿರ್ಜನ ಪ್ರದೇಶ..ದೇವಸ್ಥಾನ ಎತ್ತರದಲ್ಲಿ ಇದ್ದರೆ,ಕೆಳಗೆ ಇಪ್ಪತ್ತು-ಇಪ್ಪತ್ತೈದು ಮೆಟ್ಟಿಲು ಕೆಳಗೆ ಇಳಿದರೆ ಅಲ್ಲಿ ಗುಹೆ ಮತ್ತು ಝರಿ ಕಾಣಸಿಗುತ್ತದೆ.ಮಳೆಗಾಲದಲ್ಲಿ ಭೋರ್ಗರೆದರೆ,ಬೇಸಿಗೆಯಲ್ಲಿ ಸಣ್ಣಗೆ ಝರಿಯುತ್ತದೆ ಆ ಝರಿ.ಇದುವರೆಗೂ ಅದರ ಮೂಲ ಸಿಕ್ಕಿಲ್ಲ ಎಂದು ಹೇಳುತ್ತಾರೆ ಜನ..ದೊಡ್ಡ ಬಂಡೆಗಳಿಂದ ನೀರು ಹರಿದು ಬರುವುದು ಒಂದು ವಿಸ್ಮಯವೆ ಸರಿ...


ನಾವು ಕೆಂಗಲ್ ಸರ್ ಜೊತೆ ಈ ಸ್ಥಳಕ್ಕೆ ಹೋದಾಗ.ರಥದ ಬೀದಿಯಲ್ಲಿನ ರಥ ಎದುರಾಯಿತು.ಅಲ್ಲಿಂದ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದೇವು.ಅಲ್ಲಿಂದ ಕೆಳಗಿರುವ ಝರಿ ಹತ್ತಿರ ಹೋಗಲು ಕಲ್ಲು ಬಂಡೆಗಳ ಮೇಲೆ ಗೆಳತಿಯರೆಲ್ಲಾ ಕೈ-ಕೈ ಹಿಡಿದು ಹೋದೇವು.ಝರಿ ಮೆಲಿಂದ ಬೀಳುವಾಗ ಅದರ ಹಿಂದೆ ಒಂದು ಗುಹೆ.ಅಲ್ಲಿ ನೀರು ಮತ್ತು ಒಂದು ದೇವರ ಮೂರ್ತಿ ಇತ್ತು.ಆ ಝರಿಯ ನೀರು ಹರಿಯುವ ದಾರಿ ಉದ್ದಕ್ಕೂ,ನೀರಿನ ನಾದ ಮೇಲೆ ನೋಡಿದರೆ ಸುತ್ತಲೂ ಬಂಡೆಗಲ್ಲುಗಳು,ಸುಮಾರು ಎತ್ತರ ಕಾಣುತ್ತಿದ್ದವು.ಆ ಹರಿಯುವ ನೀರಿನಲ್ಲಿ ನನ್ನ ಗೆಳತಿಯರು ತಮ್ಮ ದಾವನಿ ಸಹಾಯದಿಂದ ಅದರಲ್ಲಿಯ ಮೀನುಗಳನ್ನು ಹಿಡಿದಿದ್ದರು.ಅಲ್ಲಿಂದ ಮೇಲೆ ಬಂದು ಮಂಟಪದೊಳಗೆ ಊಟಕ್ಕೆ ಕುಳಿತು ಕೊಂಡೇವು..


ಆ ಮಂಟಪದ ಮೂಲೆಯಲ್ಲಿ ಒಂದು ಕೋಣೆ ಇತ್ತು,ಅದರಲ್ಲಿ ಒಬ್ಬ ವಯಸ್ಸಾದ ಅಜ್ಜಿ ಇದ್ದರು.ಅವರು ವಿದೇಶದಿಂದ ಬಂದವರು,ಮರಳಿ ಹೋಗದೆ ಅಲ್ಲೆ ಉಳಿದಿದ್ದಾರೆ ಎನ್ನುವ ವಿಷಯ ತಿಳಿಯಿತು.ನಮ್ಮ ಗಲಾಟೆ ಸಹಿಸಿಕೊಳ್ಳದ ಅವರು,"ನೀವು ಹೆಣ್ಣು ಮಕ್ಕಳಾ,ಶಾಂತತೆಯಿಂದ ಇರಬೇಕು.ಎಷ್ಟು ಗಲಾಟೆ ಮಾಡತಿರಾ"ಅಂತಾ ಬೈದಿದ್ದರು....


ಸೂರ್ಯ ಮುಳುಗುವ ಹೊತ್ತಿಗೆ ಎಲ್ಲರೂ ಗಾಡಿ ಏರಿ ಮನೆಕಡೆ ನಡೆದೇವು....



ಹೈಸ್ಕೂಲ್ ಜೀವನದ ಕೊನೆ ಘಟ್ಟವಾದ ಹತ್ತನೆ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಪ್ರವಾಸ ಹೋಗಲು ಕೆಲವು ಶಿಕ್ಷಕರು ನಿರ್ಧಾರ ಮಾಡಿದರು.

ಎಲ್ಲಿಗೆ?

ಅನ್ನೋ ಪ್ರಶ್ನೆ ಮೂಡಿದಾಗ ಮಂತ್ರಾಲಯಕ್ಕೆ ಎಂಬ

ಒಮ್ಮತ ದೊರೆಯಿತು.ಇದನ್ನು ಸಹಿಸದ ಓರ್ವ ಶಿಕ್ಷಕರು ಅಸಮಾಧಾನ ಹೊರಹಾಕಿದರು..ಆದರೂ ಬಿಡದೆ ಅಲ್ಲಿಗೆ ಹೋದೇವು..


ರಾತ್ರಿ ಶಾಲೆಯಿಂದ ಎರಡು ವಾಹನದಲ್ಲಿ ವಿದ್ಯಾರ್ಥಿನಿಯರು,ಒಂದು ವಾಹನದಲ್ಲಿ ವಿದ್ಯಾರ್ಥಿಗಳು,ಐದು ಜನ ಶಿಕ್ಷಕರು ಹೊರಟೇವು...

ಬೆಳಗ್ಗೆ ಅಷ್ಟರಲ್ಲಿ ಮಂತ್ರಾಲಯ ತಲುಪಿದೇವು.ತುಂಗಾ ನದಿಯಲ್ಲಿ ಸ್ನಾನ ಮುಗಿಸಿಕೊಂಡು ರಾಯರ ದರ್ಶನ ಪಡೆದು,ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡು ಮುನ್ನಡೆದೇವು.ಅಲ್ಲಿಂದ ತೋಟಗಾರಿಕೆಗೆ ಸಂಬಂಧ ಪಟ್ಟ ವನದಲ್ಲಿ ಎಲ್ಲರೂ ಸೇರಿ ಊಟ ಮಾಡಿದೇವು.ಅಲ್ಲಿಂದ ರಾಯಚೂರಿನಲ್ಲಿರುವ ಗೆಳತಿ ಭಾರ್ಗವಿಯ ಮನೆಗೆ ಆಹ್ವಾನಿಸಿದ್ದರು ಗೆಳತಿಯ ಪಾಲಕರು.ಎರಡು ವಾಹನದ ಹುಡುಗಿಯರು ಮೂರು ಜನ ಶಿಕ್ಷಕರು ಅವರ ಮನೆಗೆ ಹೋದೇವು.ಇನ್ನೊಂದು ವಾಹನದ ಹುಡುಗರು ಜೇನು ಗೂಡಿನ ಜೊತೆ ಆಟವಾಡಿದ್ದರಿಂದ ಜೇನು ಹುಳುಗಳು ಅವರಿಗೆ ತೊಂದರೆ ಕೊಟ್ಟದ್ದರಿಂದ ಅವರಿಗೆ ಬರಲಾಗಲಿಲ್ಲ..


ನಮಗೆ ಕಲಿಸುತ್ತಿದ್ದ ಗುರುಗಳೆ ನನ್ನ ಗೆಳತಿಯ ತಾಯಿಯವರಿಗೂ ಕಲಿಸಿದ್ದರಿಂದ ಗುರು-ಶಿಷ್ಯೆಯರ ಭೇಟಿ ನಮಗೆಲ್ಲಾ ಒಂದು ಹೊಸ ಅನುಭವವನ್ನು ನಿಡೀತು. ಅವರ ಮನೆಯಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದು,ನೆನಪಿಗಾಗಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಹೋರಟೇವು.....


ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರೊಂದಿಗೆ,ಗೆಳತಿಯರೊಂದಿಗೆ ಕಳೆದ ಸಮಯ, ನೆನಪುಗಳು ಎಂದಿಗೂ ಅಮರ. ದೀರ್ಘ ದಿನದ ಪ್ರವಾಸಗಳಾಗದಿದ್ದರೂ ನೆನಪುಗಳ ಪುಳಕ ಮಾತ್ರ ದೀರ್ಘವಾಗಿವೆ...ಶಿಕ್ಷಕ ತರಬೇತಿ ಪಡೆಯುತ್ತಿರುವಾಗ ಹತ್ತು ದಿನಗಳ ಪ್ರವಾಸವೆ ನನ್ನ ದೀರ್ಘ ಪ್ರವಾಸವಾಗಿದೆ...


ಮತ್ತೆ ಅಂತಹ ಅವಕಾಶ ಸಿಕ್ಕಾಗ ಪ್ರಯಾಣ ಮಾಡುವ ಎಂದು ಕಾಯುತ್ತಿರುವೆ...




Rate this content
Log in

Similar kannada story from Classics