ಪ್ರವಾಸ
ಪ್ರವಾಸ
ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್
ಸುಷ್ಮಾ,ಹತ್ತು ವರ್ಷದ ಹುಡುಗಿ. ಕೊರೋನಾ ಬಂದಾಗಲಿಂದ ಊರಿಗೇ ಊರೇ ಲಾಕ್ ಡೌನ್ ಆಗಿದ್ದರಿಂದ ಪ್ರಸಿದ್ಧ ಪ್ರವಾಸಿ ತಾಣಗಳೂ ಸಹ ಬಂದ್ ಆಗಿದ್ದರಿಂದ ಯಾರೂ ಪ್ರವಾಸ ಕೈಗೊಂಡಿರಲಿಲ್ಲ. ಈಗೀಗ ಕೊರೋನಾ ಹಾವಳಿ ಕಡಿಮೆಯಾದದ್ದರಿಂದ ಪುಟ್ಟ ಹುಡುಗಿ ಸುಷ್ಮಾಳ ತಲೆಯಲ್ಲೂ ಪ್ರವಾಸದ ಗುಂಗು ಮೂಡಿತ್ತು.
ಅಮ್ಮಾ ಅಮ್ಮಾ ಕರೋನ ಬಂದಾಗಿನಿಂದ ನಾವು ಎಲ್ಲಿಯೂ ಪ್ರವಾಸಕ್ಕೆ ಹೋಗಿಲ್ಲಾ, ಈಗಲಾದ್ರ್ರು ಹೋಗೋಣ ಅಮ್ಮಾ ಪ್ಲೀಸ್ ಅಮ್ಮ ಎಂದು ಒಂದೇ ಸಮನೇ ಅಮ್ಮನ ತಲೆ ತಿನ್ನುತ್ತಿದ್ದಳು.
ಸುಷ್ಮಾ ನಿಮ್ಮ ಅಪ್ಪನ್ನ ಕೇಳು ಮೊದಲು, ಅವರು ಹೋಗೋಣ ಅಂದ್ರೆ ನಾನು ತಿನ್ನಲು ಕುರುಕಲು ತಿಂಡಿ ಮಾಡಿಕೊಳ್ತಿನಿ. ಎಂದು ಅಮ್ಮ ಹೇಳಿದಳು.
ಅಪ್ಪಾ ಹು ಅಂತಾರೆ, ನೀನೇ ಹು ಅನ್ನಲ್ಲ ಗೊತಾ? ಅವರನ್ನಾ ಒಪ್ಪಿಸುವ ಹೊಣೆ ನನ್ನದು ಸರೀನಾ ಅಮ್ಮಾ,,,
ಸರಿ. ನೀವು ಅಪ್ಪಾ ಮಗಳು ಒಂದೇ ತಾನೇ? ಏನಾದರೂ ಮಾಡಿ ಎಂದು ಅಮ್ಮ ಸುಮ್ಮನಾದಳು.
ಎಲ್ಲರೂ ಸೇರಿ ಮಡಿಕೇರಿ ಕಡೆ ಪ್ರಯಾಣ ಬೆಳೆಸಿದರು.
ಸುಷ್ಮಾ ಬಹಳ ಸಂತೋಷದಿಂದ ಅಪ್ಪ ಅಮ್ಮನ ಜೊತೆ ಸಂಭ್ರಮಿಸುತ್ತಿದ್ದಳು. ಸುಷ್ಮಾಳ ಮೊದಲ ಪ್ರವಾಸವಿದು.
ನೂರಾರು ನೆನಪುಗಳ ಮಧುರ ಕ್ಷಣಗಳು ಅವರ ನೆನಪಿನ ಕಪಾಟಿಗೆ ಸೇರಿದವು. ಮಡಿಕೇರಿ ಪ್ರವಾಸ ಅವರೆಲ್ಲರಿಗೂ ಅದ್ಭುತ ಖುಷಿಯನ್ನು ನೀಡಿತು.
