ಪ್ರತ್ಯಕ್ಷ ಪರೋಕ್ಷ
ಪ್ರತ್ಯಕ್ಷ ಪರೋಕ್ಷ
ಪ್ರತ್ಯಕ್ಷ
ಬಾಲ್ಯದಲ್ಲಿ ತನ್ನ ಎಡ ಮತ್ತು ಬಲದಲ್ಲಿ ಸದಾಕಾಲ ಜೊತೆ ಜೊತೆಗೆ ಇರುತ್ತಾ, ತನ್ನನ್ನು ಕಣ್ಣಿನ ರೆಪ್ಪೆಯಂತೆ ಕಾಯುತ್ತಾ, ಕಡೆಗೆ ತನ್ನ ಕೈ ಹಿಡಿದುಕೊಂಡು, ತನ್ನ ಶಾಲೆಯವರೆಗೂ ಬಂದು ಬಿಟ್ಟು ಹೋಗುತ್ತಿದ್ದ ಅಪ್ಪ ಅಮ್ಮ ನ ವಿಪರೀತ ವಾದ ಕಾಳಜಿಯ ಬಗ್ಗೆ ಗ್ರೀಷ್ಮಳಿಗೆ, ಒಂದು ರೀತಿ ಮುಜುಗರವೆನಿಸುತ್ತಿತ್ತು.ಅದರಲ್ಲೂ ಅವಳ ಸ್ನೇಹಿತೆಯರು ಮತ್ತು ಇತರ ತರಗತಿಯ ವಿದ್ಯಾರ್ಥಿ ಗಳು ಅವಳನ್ನು "ಅಮೂಲ್ ಬೇಬಿ, ಚಾಕ್ಲೇಟ್ ಬೇಬಿ"ಎಂದು ಗೇಲಿ ಮಾಡುತ್ತಾ ನಗುವುದನ್ನು ನೋಡಿದಾಗ, ಅವಳಿಗೆ ಅವಳ ಅಪ್ಬ ಅಮ್ಮ ನ ಮೇಲೆ ವಿಪರೀತ ಕೋಪ ಬಂದು , ಅವರೊಂದಿಗೆ ಜಗಳ ಮಾಡುತ್ತಿದ್ದಳು. ಆಗ ಅವಳು ಅಪ್ಪ ಅವಳಿಗೆ ತಂದೆತಾಯಿಯರ ಬೆಲೆ ಏನೆಂಬುದನ್ನು ತಿಳಿಸಿ ಹೇಳುತ್ತಿದ್ದರು.
ಅವಳು ಎಷ್ಟೇ ಕೋಪ ಮಾಡಿಕೊಂಡರೂ ಸರಿ, ಅವಳ ತಂದೆ ತಾಯಿ ಅವಳ ಹಿಂದೆ ಇದ್ದು ಅವಳನ್ನು ಸುರಕ್ಷಿಸುತ್ತಿದ್ದರು.
ಪರೋಕ್ಷ
ಗ್ರೀಷ್ಮ ಬೆಳೆದು ದೊಡ್ಡವಳಾದ ನಂತರ, ಅವಳಿಗೆ ಒಳ್ಳೆಯ ಹುಡುಗನನ್ನು ಹುಡುಕಿ ಮದುವೆ ಮಾಡಿದರು. ನಂತರ ಅವರು ಇಹಲೋಕವನ್ನು ಬಿಟ್ಟು ಹೊರಟು ಹೋದಾಗ, ಗ್ರೀಷ್ಮಳಿಗೆ ತನ್ನ ತಂದೆ ತಾಯಿಯ ಬೆಲೆ ಗೊತ್ತಾಗುತ್ತಿತ್ತು. ತನ್ನ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಿದ್ದ ಅಪ್ಪ ಅಮ್ಮ ಹೋದ ಬಳಿಕ, ಗ್ರೀಷ್ಮಳಿಗೆ ತುಂಬಾ ದು:ಖವಾಯಿತು.
ಈಗ ಅವಳ ಹೃದಯದಲ್ಲಿ ಅವಳ ಗಂಡ ತುಂಬಿಕೊಂಡು ಬಿಟ್ಟಿದ್ದ. ಮಗಳು ಗಂಡನ ಪ್ರೀತಿಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿರುವುದನ್ನು, ಪರಲೋಕದಲ್ಲಿರುವ ಅವಳ ತಂದೆ ತಾಯಿ ಪರೋಕ್ಷವಾಗಿ ನೋಡುತ್ತಾ ಅವಳನ್ನು ಹರಿಸುತ್ತಿದ್ದಾರೆ.
ಹೆತ್ತವರ ಆಶೀರ್ವಾದ ಮಕ್ಕಳ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸದಾ ಕಾಲ ಇದ್ದೇ ಇರುತ್ತದೆ.
