ಪ್ರೀತಿಗಾಗಿ ಹಂಬಲಿಸುವ ಮನ
ಪ್ರೀತಿಗಾಗಿ ಹಂಬಲಿಸುವ ಮನ


ಅವನ ನೆನಪು ಮತ್ತೆ ಮತ್ತೆ ಕಾಡಬಾರದು ಎಂದು ಎಲ್ಲಾ ಸಂಬಂಧಗಳನ್ನು ಕಡೆದುಕೊಂಡು ಬಂದಿದ್ದಳು. ಆದ್ರೆ ಅವಳ ಕರುಳ ಬಳ್ಳಿ ತನ್ನ ಉದರದಲ್ಲಿ ಬೆಳೆಯುತ್ತಿರುವುದು ಅವನದೇ ಜೀವ ಎಂಬುದು ಅವಳಿಗೆ ಸಂಬಂಧ ಕಡೆದುಕೊಂಡ ಮೇಲೆ ಅರ್ಥವಾಯಿತು.
ಯಾವ ಗಂಡನ ನೆನಪು ಬೇಡ ಅವನೊಟ್ಟಿಗೆ ಯಾವುದೇ ಸಂಬಂಧ ಮುಂದುವರಿಸುವದರಲ್ಲಿ ಅರ್ಥವಿಲ್ಲ ಎಂದು ವಿವಾಹ ಬಂಧವನ್ನು ಮುರಿದುಕೊಂಡಿದ್ದಳೋ?. ಅವನ ನೆನಪಿನ ವಂಶದ ಕುಡಿ ಚಿಗುರುವಾಗಲೇ ಅವಳ ನಿರ್ಧಾರ ಕೈ ಮೀರಿ ಹೋಗಿತ್ತು. ತವರು ಮನೆ ದಾರಿ ಹಿಡಿದವಳಿಗೆ ಗಂಡನ ಮನೆ ದಾರಿ ಮರೆತೇ ಹೋಗಿತ್ತು.
ನಿನ್ನ ಅವಿವೇಕತನಕ್ಕೆ ಮುಂದೆ ಹುಟ್ಟುವ ಮಗುವಿಗೆ ತಂದೆ ಪ್ರೀತಿ ಕಾಣದ ಸಂದರ್ಭ ಬರುತ್ತದೆ ಎಂದು ತಂದೆ
ಹೇಳಿದಾಗ ಅಪ್ಪ ನನಗೆ ಈ ಮಗು ಬೇಡ ತೆಗೆಸಿಬಿಡುವೆ ಗಂಡನೆ ಬೇಡವೆಂದ ಮೇಲೆ ಅವನ ಮಗುವನ್ನು ತೆಗೆದುಕೊಂಡು ಏನು ಮಾಡಲಿ ಎಂದು ಕಿಂಚಿತ್ತೂ ಮಮಕಾರವಿಲ್ಲದೆ ನುಡಿದಳು.
ನಿನಗೇನಾದ್ರು ತಲೆ ಕೆಟ್ಟಿದೆಯಾ ಮಕ್ಕಳಿಲ್ಲವೆಂದು ಕಂಡ ಕಂಡ ದೇವರಿಗೆ ಕೈ ಮುಗಿದು ಹರಕೆ ಹೊತ್ತು ನೂರಾರು ಆಸ್ಪತ್ರೆ ಅಲೆದಾಡಿ ಆದ ಮೇಲೆ ಪುಣ್ಯಕ್ಕೇ ಈಗ ದೇವರು ಕೊಟ್ಟ ಮಗುವನ್ನು ಬೇಡ ಎನ್ನುತ್ತಿಯ
ಈ ವಿಷಯದಲ್ಲಿ ನಿನ್ನೊಬ್ಬಳ ನಿರ್ಧಾರ ಸಲ್ಲದು ಮುಂಜಾನೆ ಅಳಿಯನಿಗೆ ಕರೆ ಮಾಡಿ ತಿಳಿಸುವೆ ಅವರು ಹೇಗೆ ಹೇಳುತ್ತಾರೋ ಹಾಗೇ ನಡೆದುಕೋ ಎಂದಾಗ ಅವಳ ಒಳ ಮನಸ್ಸು ಅವನ ಪ್ರೀತಿಗಾಗಿ ಹ
ಂಬಲಿಸುತಿತ್ತು, ತನ್ನನ್ನೂ ತನ್ನ ಮಗುವನ್ನು ಒಪ್ಪಿಕೊಳ್ಳಲಿ ಮೊದಲಿನ ಹಾಗೇ ಸುಖ ಸಂಸಾರ ತನ್ನದಾಗಲಿ ಎಂದು ಅವಳಿಗೂ ಆಸೆ ಇತ್ತು ಆದ್ರೆ ಅದು ಅಸಾಧ್ಯವಾಗಿತ್ತು ಆದರು ಅವಳು ಬೆಳಗಿಗಾಗಿ ಕಾಯುತ್ತಿದ್ದಳು.
ಬೆಳಗಾಗಿ ಹೋಯಿತು ಗಂಡನ ಆಗಮನವು ಆಯಿತು ಆದ್ರೆ ಅವನ ಬಾಯಿಂದ ಬಂದ ಉತ್ತರ. ನನಗೂ ಆ ಮಗುವಿಗೂ ಯಾವ ಸಂಬಂಧವಿಲ್ಲ ನಿಮ್ಮಿಷ್ಟದಂಗೆ ಮಾಡಿ ಎನ್ನುತಲೇ ಹೊರಟು ಹೋಗಿಬಿಟ್ಟನು.
ಇದು ನನ್ನ ಮಗು ಅದರ ಆಗು ಹೋಗುಗಳ ನಿರ್ಧಾರ ನನ್ನದೇಯಾಗಿರಬೇಕು ಎಂದು ಗಟ್ಟಿ ನಿರ್ಧಾರ ಮಾಡಿ ಆ ಮಗುವಿಗೆ ಜನ್ಮಕೊಡುವ ನಿರ್ಧಾರ ಮಾಡುತ್ತಾಳೆ. ದಿನಗಳು ಉರುಳಿದವು ತಿಂಗಳು ತುಂಬಿದವು ಗಂಡು ಮಗುವಿಗೆ ಜನ್ಮ ನೀಡಿದಳು.
ಅಪ್ಪನೆಂಬ ಆಸಾಮಿ ಆಗಲೂ ಬರಲಿಲ್ಲ ತಂದೆ ಇಲ್ಲದ ಕೊರಗು ಬರಬಾರದು ಎಂದು ತವರು ತೊರೆದು ದೂರ ಹೋದಳು. ತಾನೊಬ್ಬಳೆ ಮಗುವನ್ನು ಚೆನ್ನಾಗಿ ಬೆಳೆಸಿ ಓದಿಸಿದಳು. ತಾಯಿ ಎಷ್ಟೇ ಪ್ರೀತಿಸಿದರು ಮಗನಿಗೆ ತಂದೆಯಿಲ್ಲದ ನೋವು ಪದೇ ಪದೇ ಆತನನ್ನು ಕಾಡುತಿತ್ತು ಅವನ ಹಿಡಿ ಪ್ರೀತಿ ಸಿಕ್ಕಿರೆ ಸಾಕೆಂದು ಅವನ ಮನಸು ಹಂಬಲಿಸುತಿತ್ತು.
ದುಡುಕಿ ನಿರ್ಧಾರ ತೆಗೆದುಕೊಂಡು ಬದುಕು ಹಾಳುಮಾಡಿಕೊಂಡೆ ಹೊಂದಿಕೊಂಡು ಹೋಗಿದ್ದರೆ ಬದುಕು ಸುಂದರವಾಗಿರುತಿತ್ತು ಎಂಬ ಸತ್ಯ ಅರಿಯುವ ಹೊತ್ತಿಗೆ ಬಾಳಿನ ಕೊನೆಯ ಪುಟಕ್ಕೇ ತಲುಪಿ ಬಿಟ್ಟಿದ್ದಳು. ಅಮ್ಮನ ಅಸಾಯಕತನ ಕಂಡು ಮಗ ಅಪ್ಪನನ್ನು ಮರೆಯುವ ಪ್ರಯತ್ನ ಮಾಡಿದನು.