STORYMIRROR

Sugamma Patil

Classics Inspirational Others

3.3  

Sugamma Patil

Classics Inspirational Others

ಗೃಹಿಣಿಗೇ ಆದಾಯ ಮುಖ್ಯ..

ಗೃಹಿಣಿಗೇ ಆದಾಯ ಮುಖ್ಯ..

2 mins
360



ಗೃಹಿಣಿಗೇ ಆದಾಯ ತುಂಬಾ ಅಗತ್ಯವಿದೆ. ನಾನು ಇಲ್ಲಿ ಹೆಣ್ಣು ಸ್ವಾವಲಂಬಿಯಾದಷ್ಟು ಬಲಿಷ್ಠಳಾಗುತ್ತಾಳೆ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಏಕೆಂದರೆ ಒಂದು ಹೆಣ್ಣುಇಂದಿನ ಕಾಲದಲ್ಲಿ ತನ್ನ ಅತ್ತೆ ಮಾವ ಗಂಡ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಹೋಗುವದರ ಜೊತೆಗೆ ಕೆಲಸಕ್ಕೆ ಹೋಗುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ.ಮನೆ ಕೆಲಸ ಮಾಡಿಕೊಂಡು ಹೇಗೆ ಹೋಗಬೇಕು ಎಂದು ಸೊಸೆ ಚಿಂತೆ ಆದ್ರೆ, ಸೊಸೆ ಕೆಲಸಕ್ಕೆ ಹೋದರೆ ತನ್ನ ಸೇವೆ ಮಾಡುವರು ಯಾರು ಎಂಬುದು ಅತ್ತೆಯ ಚಿಂತೆ, ಹೀಗೆ ಒಬ್ಬೊಬ್ಬರಿಗೂ ಒಂದೊಂದು ಚಿಂತೆ. ಇವರೆಲ್ಲರ ಅನುಮತಿ ಪಡೆದು ಕೆಲಸಕ್ಕೆ ಹೋಗುವಷ್ಟರಲ್ಲಿ ಜೀವನ ಸಾಕಾಗಿ ಹೋಗಿಬಿಟ್ಟಿರುತ್ತದೆ.


ಮನೆಯವರು ಮನೆಯ ಕೆಲಸದಲ್ಲಿ ಚೂರು ಹೆಚ್ಚು ಕಡಿಮೆ ಆದರೂ ಸಹ ಆಡುವ ಒಂದೇ ಮಾತು ಕೆಲಸಕ್ಕೆ ಹೋಗು ಎಂದವರು ಯಾರು? ನಿಭಾಯಿಸಿಕೊಂಡು ಹೋಗುವ ಯೋಗ್ಯತೆ ಇಲ್ಲವೆಂದ ಮೇಲೆ ಮನೆಯವರ ಸೇವೆ ಮಾಡಿಕೊಂಡು ಇರಬೇಕು ಎನ್ನುವ ಕೊಂಕು ಮಾತು ಕೇಳುವುದು ಅನಿವಾರ್ಯ.


ಈ ಎಲ್ಲಾ ಕೊಂಕು ನುಡಿಗಳನ್ನು ಕೇಳಿಯು ಕೇಳದಂತಿರುವ ಅವಳ ಸಹನೆ ನಿಜಕ್ಕೂ ದೊಡ್ಡದು. ಇಷ್ಟು ಬೈಗುಳಗಳ ನಡುವೆ ಎಲ್ಲರಿಗೂ ಅಡುಗೆ ಮಾಡಿಟ್ಟು, ಮಕ್ಕಳಿಗೂ ಗಂಡನಿಗೂ ಡಬ್ಬಿಯನ್ನು ಕಟ್ಟಿಕೊಟ್ಟು ಕೊನೆಗೆ ತನಗೇ ಊಟ ತೆಗೆದುಕೊಳ್ಳುವುದೇ ಮರೆತು ಹೋಗಿ ಕೆಲಸ ಮಾಡುವಳು. ಸಾಲದು ಎಂದು ಊಟಕ್ಕೆ ಕರೆದ ಸಹೋದ್ಯೋಗಿಗಳಿಗೆ ಉಪವಾಸ ಎಂದು ಸುಳ್ಳು ಹೇಳಿ, ಹಸಿದ ಹೊಟ್ಟೆಗೆ ತಣ್ಣೀರು ತುಂಬಿಸಿ ಸಂತೃಪ್ತಿ ಪಡೆಯುವಳು. ಇದರ ಜೊತೆಗೆ ತಡವಾಗಿ ಆಫೀಸ್ ಹೋದ ಕಾರಣಕ್ಕೇ ಅಲ್ಲೂ ಬೈಗುಳಗಳ ಸುರಿಮಳೆ ಅನುಭವಿಸಿ ಕೊನೆಗೆ ತಿಂಗಳ ಸಂಬಳ ಎಣಿಸುವಷ್ಟರಲ್ಲಿ ಜೀವ ಬಾಯಿಗೆ ಬಂದಿರುತ್ತೆ

ಎಂಬುದು ಅಂತೂ ಸತ್ಯ.

ಪ್ರತಿಯೊಬ್ಬ ಉದ್ಯೋಗಸ್ತ ಮಹಿಳೆ ಅನುಭವಿಸಿರುವ, ಅನುಭವಿಸುತ್ತಿರುವ, ಪಾಡು ಹೇಳತೀರದು .

p>


ಅವಳಿಗೂ ಬದುಕಿದೆ ಕನಸಿದೆ ಅರ್ಥ ಮಾಡಿಕೊಂಡು ಬದುಕುವ ಪ್ರಯತ್ನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.


ಅವ್ಳಿಗೆ ಇಷ್ಟವಾಗಿರುವುದನ್ನು ಕೊಡಿಸದಿದ್ದರೂ ಚಿಂತಿ ಇಲ್ಲ. ಅವಳು ದುಡಿಮೆಯಲ್ಲಿ ಅವಳ ಇಷ್ಟದಂಗ್ ಬದುಕುವ ಅವಕಾಶ ಮಾಡಿಕೊಡಿ.

ನಿಮ್ಮ ಸ್ವಾರ್ಥಕ್ಕಾಗಿ ಅವಳ ಕನಸುಗಳನ್ನು ನಾಶ ಮಾಡದಿರಿ.

ಹೆಣ್ಣು ತ್ಯಾಗ ಜೀವಿ ತಾನು ದುಡಿದರು ಆ ಹಣವನ್ನು ಸಹ ತನ್ನವರ ಸಂತೋಷಕ್ಕಾಗಿಯೇ ಬಳಸುತ್ತಾಳೆ ಎಂಬುದು ಗಮನದಲ್ಲಿರಲಿ.

ಅವಳಿಗೂ ಅವಳದೇ ಆದ ವೈಯಕ್ತಿಕ ಖರ್ಚುಗಳಿರುತ್ತವೆ. ಪ್ರತಿಯೊಂದಕ್ಕೂ ಕೈ ಒಡ್ದುವುದು ಅವಳಿಗೂ ಮುಜುಗರದ ವಿಷಯ ವಾಗಿರುತ್ತದೆ. ಅರ್ಥ ಮಾಡಿಕೊಳ್ಳುವ ಜೊತೆಗಾರನಿದ್ದರೆ ಪರವಾಗಿಲ್ಲ. ಕೇಳಿದರು ಕೇಳದಂಗ ವರ್ತಿಸುವ ಸಂಗಾತಿಯಿದ್ದಾಗ ಬಾಳು ಗೋಳು ಆಗಿ ಬಿಡುತ್ತದೆ. ಈ ಸಂದರ್ಭದಲ್ಲಿ ತಾನೇ ಸ್ವತಃ ದುಡಿಯುತ್ತಿದ್ದರೆ ಅವಳ ಜೊತೆಗೆ ಬೇರೆಯವರನ್ನು ಚೆನ್ನಾಗಿ ನೋಡಿಕೊಳ್ಳುವ ಸಾಮರ್ಥ್ಯವನ್ನು ಸಹ ಹೆಣ್ಣುಪಡೆಯುತ್ತಾಳೆ.


ಹೆಣ್ಣಿನ ಆದಾಯ ಹೆಚ್ಚಿದಷ್ಟು ಅವಳು ಬದುಕುವ ರೀತಿ ನೀತಿಗಳು ಬದಲಾಗುತ್ತವೆ.

ಸಮಾಜದಲ್ಲಿ ಉತ್ತಮ ಸ್ಥಾನವನ್ನು ಸಹ ಪಡೆಯುತ್ತಾಳೆ.


ಧರ್ಮಪತ್ನಿ ಎಂದರೆ ನಿಮ್ಮ ಕಷ್ಟದಲ್ಲಿ ಭಾಗಿಯಾಗುವ ಜೀವಿ ಮಾತ್ರವಲ್ಲ ನಿಮಗಾಗಿ ಮಿಡಿಯುವ ನಿಮ್ಮದೇ ಹೃದಯ ಎಂಬುದು ನೆನಪಿರಲಿ..

ನೀವು ಖುಷಿಯಾಗಿರಿ ಅವಳನ್ನು ಖುಷಿಯಾಗಿ

ನೋಡಿಕೊಳ್ಳಿ. ಗೃಹಿಣಿ ಇರುವ ಗೃಹದಲ್ಲಿ ಯಾವುದಕ್ಕೂ ಕೊರತೆ ಬರದು ಎಂಬುದು ಅರಿತು ನಡೆಯಿರಿ 


ಗಳಿಸುವೆನು ಎಂದು ಗರ್ವ ತೋರಲಿಲ್ಲ

ಹಳಸಿದ ಅನ್ನವನು ಕೊಟ್ಟರು ನಿಂದಿಸಲಿಲ್ಲ

ಹಂಗಿಸಿ ಅವಮಾನಿಸಿದರು ಚಿಂತಿಸಲಿಲ್ಲ

ಮನ್ನಿಸಿ ಪ್ರೀತಿಸುವಳು ಎಂದಿಗೂ ಗೃಹಿಣಿ


ನಿತ್ಯ ಸತ್ಯ ಅಲ್ವೇ?


Rate this content
Log in