*ಮುಗ್ಧ ಮನಸ್ಸು*
*ಮುಗ್ಧ ಮನಸ್ಸು*


ಅಪ್ಪ ಅಮ್ಮನ ಮುಖವೇ ನೋಡದೆ ಅನಾಥಳಾಗಿ ತೊಟ್ಟಿಯಲ್ಲಿ ಬಿದ್ದಿದ್ದ ಹೆಣ್ಣು ಮಗುವನ್ನು ಕಂಡು ಮಕ್ಕಳಿಲ್ಲದ ಹಲುಬುತ್ತಿದ್ದ ಸರೋಜಾ, ಸಂಪತ್ ಕರುಳು ಕಿವಿಚಿದಂಗೆ ಆಯಿತು.ದೇವರು ಕೊಟ್ಟ ವರವೆಂದು ನಾವೇ ಯಾಕೆ ಸಾಕಬಾರದು ಎನಿಸಿತು? ಅವಳು ಇನ್ನು ಮುಂದೆ ನಮ್ಮ ಮಗಳಾಗಿ ಬೆಳೆಯಲಿ ಎಂದು ಮನೆಗೇ ಎತ್ತುಕೊಂಡು ಬಂದರು.
ಮುದ್ದಾದ ಹೆಣ್ಣು ಮಗುವಿಗೆ ಗೌರಿ ಎಂದು ನಾಮಕರಣ ಮಾಡಿದರು. ಅವರ ಪಾಲಿಗೆ ಗೌರಿ ತಮಗಾಗಿಯೇ ಭೂಲೋಕದಿಂದ ಧರೆಗಿಳಿದು ಬಂದ ದೇವತೆಯಾಗಿದ್ದಳು.
ಅಪ್ಪ ಅಮ್ಮ ಅಲ್ಲದಿದ್ದರೂ ಗೌರಿ ಪಾಲಿಗೆ ಅವರೆ ಹೆತ್ತವರು ಆಗಿದ್ದರು. ಅವಳಿಗೆ ಮನೆಯೇ ದೇವಸ್ಥಾನ ತಂದೆ ತಾಯಿಯೇ ದೇವರಾಗಿದ್ದರು. ಹೊರಗಿನ ಪ್ರಪಂಚದ ಜ್ಞಾನವೇ ಇಲ್ಲದ ಮುಗ್ಧೆಯಾಗಿ ಬೆಳೆದಿದ್ದಳು. ಆದ್ರೆ ಬುದ್ಧಿವಂತಳಾಗಿದ್ದಳು. ಹಳ್ಳಿಯಲ್ಲಿ ಓದಿ ಮುಂದೆ puc ಯಲ್ಲಿ ಹೆಚ್ಚು ಅಂಕ ಗಳಿಸಿ ಸರಕಾರಿ ಕೋಟಾದಲ್ಲಿ ಉನ್ನತ ಕಾಲೇಜಿನಲ್ಲಿ ಸ್ಥಾನ ಪಡೆದುಕೊಂಡಳು. ಅವಳಿಗೆ ಓದುವ ಬಯಕೆ ಹೆಚ್ಚಿತ್ತು ಜೊತೆಗೆ ಹೆತ್ತವರು ಎಂಬ ಭ್ರಮೆಯಲ್ಲಿ ಇದ್ದ ಗೌರಿಗೆ ಅವರನ್ನು ಬಿಟ್ಟು ಹೋಗಲು ಹೃದಯ ಬೇಸರಿಸಿತ್ತು. ಹಾಗಾಗಿ ಅವಳಿಗೆ ಯಾವುದನ್ನು ಆಯ್ಕೆ ಮಾಡಬೇಕೆಂದು ತಿಳಿಯದಾದಳು. ಎಲ್ಲರ ಮಾತಿಗೆ ಕಿವಿಗೊಟ್ಟು ಮನಸಿಲ್ಲದ ಮನಸ್ಸಿನಿಂದ ಹಳ್ಳಿ ಬಿಟ್ಟು ನಗರದ ಉನ್ನತ ಕಾಲೇಜಿಗೆ ಸೇರಿದಳು. ಹೊಸ ಕಾಲೇಜು, ಹೊಸ ಜನರು, ಹೊಸ ವಸತಿ ಗೃಹ, ಇದೆಲ್ಲವನ್ನು ಎದುರಿಸುವುದು ಗೌರಿಗೆ ಕಷ್ಟವಾಯಿತು. ಸಾಲದು ಎಂದು ಸೀನಿಯರ್ಸ್ ಗಳಿಂದ ಕಿರುಕುಳ ಇದೆಲ್ಲದರಿಂದ ಬೇಸತ್ತ ಗೌರಿ ಕಾಲೇಜು ಬಿಟ್ಟು ಮರಳಿ ಹಳ್ಳಿಗೇ ಹೋಗುವ ನಿರ್ಧಾರ ಮಾಡಿದಳು.
ಅದೇ ಸಮಯಕ್ಕೆ ಸರಿಯಾಗಿ ದೇವತೆಯಾಗಿ ಬಂದವಳು ಗಂಗಾ.ಅವಳು ಇವಳತ್ತ ನೋಡುತ್ತ ನೋಡು ಗೌರಿ ಈ ಸಿಟಿಯಲ್ಲಿ ಇದೆಲ್ಲಾ ಕಾಮನ್ ಇದಕ್ಕೆ ಹೆದರಿಕೊಂಡು ನೀನು ಊರು ಬಿಟ್ಟರೆ ನಿನ್ನ ಹೆತ್ತವರ ಕನಸು ನೀನೇ ಚಿವುಟಿ ಹಾಕಿದ ಹಾಗೇ ಆಗುತ್ತೆ. ಅವರಿಗೆ ಎಷ್ಟು ನಿರಾಸೆಯಾಗುವುದು ಎಂದು ಸ್ವಲ್ಪವಾದರೂ ಊಹಿಸಿರುವೆಯಾ? ಅನ್ಯಾಯವಾಗಿ ನಿನ್ನ ಭವಿಷ್ಯವನ್ನು ನೀನೇ ಹಾಳು ಮಾಡಿಕೊಳ್ಳುವದರಲ್ಲಿ ಅರ್ಥವ
ಿಲ್ಲ.
ನನ್ನ ಮಾತು ಕೇಳು ಎದುರಿಸಿ ನಿಲ್ಲು ನಿನ್ನೊಟ್ಟಿಗೆ ನಾನಿರುವೆ ಎನ್ನುತ್ತಾಳೆ. ಮೌನ ಗೌರಿಯಾದ ನೀನು ಕಾಳಿಯಾಗಿ ಬದಲಾಗು. ಆಗ ಅವರೇ ನಿನ್ನ ಕಾಲು ಹಿಡಿಯುತ್ತಾರೆ ಎಂದಳು.
ಗೌರಿಗೆ ಗಂಗಾಳ ಮಾತು ಸರಿ ಎನಿಸಿತು ಆದ್ರೆ ಇದೆಲ್ಲ ನನ್ನಿಂದ ಹೇಗೆ ಸಾಧ್ಯ? ಗಂಗಾ ನನ್ನಿಂದ ಇದು ಸಾಧ್ಯವಿಲ್ಲ ಇಲ್ಲದನ್ನು ಹೇಳಿ ನನಗೆ ಗೊಂದಲ ಮಾಡದಿರು.
ಗೌರಿ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ನೀನು ಹಳ್ಳಿಯಿಂದ ಬಂದಿರಬಹುದು ಆದ್ರೆ ನಿನಗೆ ಗೊತ್ತಿಲ್ಲದ ಕಲೆಗಳು ನಿನ್ನ ಬಳಿ ಇವೆ ನಿನ್ನ ಊರಲ್ಲಿ ನಿನ್ನ ರಕ್ಷಣೆಗಾಗಿ ಕಲಿತ ವಿದ್ಯೆ ಬಳಸಿಕೋ..
ಒಮ್ಮೆ ಒಬ್ಬರಿಗೆ ಏಟು ಕೊಟ್ಟು ನೋಡು? ಆಮೇಲೆ ನಿನ್ನ ಪಾಡಿಗೆ ನೀ ಇದ್ದುಬಿಡು ಯಾರು ನಿನ್ನ ತಂಟೆಗೆ ಬರುವುದಿಲ್ಲ.
ಗೌರಿ ಗಂಗೆಯೇ ಮಾತನ್ನು ಕೇಳಿ ಎದುರಿಸಿ ನಿಂತಳು. ಆಗ ದಿನವು ರೇಗಿಸಿ ಅವಮಾನಿಸುತ್ತಿದ್ದ ಹುಡುಗರು ಇಂದು ಗೌರಿಯನ್ನು ತಂಗಿ ಎಂದು ಗೌರವದಿಂದ ಕರೆದರು.
ಗೌರಿಯ ಮುಗ್ಧ ಮನಸ್ಸಿಗೆ ಒಳ್ಳೆಯ ಗುಣಕ್ಕೆ ಗಂಗಾಳ ಸ್ನೇಹ ದೊರೆತು ನಗರ ಜೀವನದಲ್ಲಿ ಬದುಕುವ ರೀತಿ ನೀತಿ ಕಲಿತಳು.
ಚೆನ್ನಾಗಿ ಓದಿ ಕಾಲೇಜಿಗೆ ಟಾಪರ್ ಆಗಿ ಮುಂದೆ ಸರಕಾರಿ ಹುದ್ದೆ ಪಡೆದು ತಂದೆ ತಾಯಿಯನ್ನು ತನ್ನೊಟ್ಟಿಗೆ ಕರೆದುಕೊಂಡು ಬಂದಳು. ಎಲ್ಲರೂ ಖುಷಿಯಾಗಿ ಜೀವನ ಸಾಗಿಸಿದರು. ಮುಗ್ಧ ಗೌರಿ ಯಶಸ್ಸಿಗೆ ಗಂಗಾಳ ಮಾರ್ಗದರ್ಶನ ಸಹಕಾರಿ ಆಯಿತು. ದಾರಿ ತಪ್ಪಿಸುವರ ನಡುವೆ ದಾರಿ ತೋರಿಸಿ ಇಂದು ನನಗೊಂದು ಅಸ್ತಿತ್ವ ಕೊಟ್ಟವಳು ಗಂಗಾ ಎಂದು ನಡೆದ ಘಟನೆ ಹೆತ್ತವರ ಮುಂದೆ ತಿಳಿಸಿದಾಗ, ಹೌದು ಮಗಳೇ ಅದೆಷ್ಟೋ ಮುಗ್ಧ ಹೆಣ್ಣು ಮಕ್ಕಳು ಇಂಥವರ ಕಿರಿ ಕಿರಿ ತಾಳದೆ ಯಾರಿಗೂ ಹೇಳಲು ಆಗದೇ ಮಾನಸಿಕ ಹಿಂಸೆ ಅನುಭವಿಸುತ್ತಾರೆ ಕೊನೆಗೆ ಜೀವನವೇ ಬೇಡ ಎಂದು ನಿರ್ಧಾರ ತೆಗೆದುಕೊಂಡವರು ಇದ್ದಾರೆ.ಆದ್ರೆ ನಿನ್ನನ್ನು ಬದಲಾಯಿಸಿ
ನಿನ್ನನ್ನೂ ಧೈರ್ಯಶಾಲಿಯಾಗಿ ಮಾಡಿದ ಗಂಗಾಳಂಥವರು ಸಿಗುವುದು ತುಂಬಾ ವಿರಳ ನಿನ್ನ ಮುಗ್ಧ ಮನಸ್ಸಿಗೆ ದೇವರು ಕಳಿಸಿದ್ದಾನೆ. ಅವಳನ್ನ ದೇವರು ನೂರ್ಕಾಲ ಚೆನ್ನಾಗಿ ಇಟ್ಟಿರಲಿ.