ನಮ್ಮ ದೌರ್ಬಲ್ಯವೇ ನಮ್ಮ ಶತ್ರು
ನಮ್ಮ ದೌರ್ಬಲ್ಯವೇ ನಮ್ಮ ಶತ್ರು


ಒಬ್ಬ ವ್ಯಕ್ತಿ ಯಶಸ್ವಿಯಾಗಬೇಕೆಂದು ನಿರ್ಧರಿಸಿದ ಮೇಲೆ ಆತ ಜೀವನದಲಿ ಬರುವ ಸಮಸ್ಯೆಗಳನ್ನು, ಸಂಕಷ್ಟದ ಸನ್ನಿವೇಶಗಳನ್ನು ಎದುರಿಸುವ ಮುನ್ನ ಎಂತಹ ಪರಿಸ್ಥಿತಿ ಬಂದರು ಅದನ್ನು ನಿಭಾಯಿಸಲು ಆತ್ಮಶಕ್ತಿ ಇರುವುದು ಮುಖ್ಯ. ತನ್ನಲ್ಲಿರುವ ಗುಣ ಅವಗುಣಗಳನ್ನು ಅರಿತು ನಡೆಯಬೇಕು. ಮನುಷ್ಯ ತನ್ನಲ್ಲಿರುವ ದೋಷಗಳಿಂದಲೆ ಆತ ಪದೇ ಪದೇ ಕಷ್ಟಕ್ಕೇ ಸಿಲುಕುವನು ಮತ್ತು ಅದನ್ನು ಅರಿಯದೇ
ಹೋಗುವನು.
ಮೊದಲು ತಮ್ಮ ದೌರ್ಬಲ್ಯವನ್ನು ಬದಿಗೊತ್ತಿ ಪ್ರತಿಭೆಗೇ ಬೆಲೆ ಕೊಟ್ಟು ಸ್ಥಿರಮನದಿ ಕಾರ್ಯ ನಿರ್ವಹಿಸಬೇಕು.
"ನಿಂದಕರು ನಿಂದಿಸಲಿ ಅಂಧಕರು ಆಡಿಕೊಳ್ಳಲಿ ಛಲ ಬಿಡದೇ ನಮ್ಮ ಕಾರ್ಯವನ್ನು ಅಚಲ ಮನದಿಂದ ಮಾಡುತ್ತಾ ಸಾಗಿದರೆ ಖಂಡಿತಾ ಯಶಸ
್ಸು ಗಳಿಸಬಹುದು. ನಮ್ಮ ಪ್ರತಿಭೆಗೇ ಯಾರೋ ನೀರು ಹಾಕಿ ಬೆಳೆಸುತ್ತಾರೆಂದು ಕಾದು ಕೂಡದೆ ಪ್ರಯತ್ನಶೀಲರಾಗಿ ಮುನ್ನಡೆಯಬೇಕು..
ಕಲಿಕೆ ನಿರಂತರವಿದ್ದರೆ ಪ್ರಯತ್ನ ಪರಿಪೂರ್ಣವಿದ್ದರೆ ಗೆಲುವು ಹುಡುಕಿ ಬರುತ್ತದೆ. ಸಕಾರಾತ್ಮಕ ಯೋಚನೆ ವ್ಯಕ್ತಿಯನ್ನು ಬಲಿಷ್ಠಗೊಳಿಸುತ್ತದೆ ನಕಾರಾತ್ಮಕ ಯೋಚನೆ ದುರ್ಬಲಗೊಳಿಸುತ್ತದೆ.ನಮ್ಮ ಚಿಂತನೆ ಸಕಾರಾತ್ಮಕವಿರಲಿ.
ನಮ್ಮ ಕಷ್ಟಕ್ಕೇ, ಸೋಲಿಗೆ ಬೇರೆ ಯಾರೋ ಕಾರಣರಲ್ಲ. ನಮ್ಮಲ್ಲಿ ಆತ್ಮಶಕ್ತಿ ಕೊರತೆ ಇರುವುದು ಮತ್ತು ಸ್ಪಷ್ಟವಾದ ನಿರ್ಧಾರ ತಗೆದುಕೊಳ್ಳದಿರುವುದು.ನಮ್ಮ ದೌರ್ಬಲ್ಯವೇ ನಮ್ಮ ಶತ್ರು ಎಂಬುದು ಅರಿತು ಮತ್ತು ತಿದ್ದಿಕೊಂಡು ಉತ್ತಮ ಬದುಕು ಕಟ್ಟಿಕೊಂಡು ಸಾಗಿದರೆ ಜೀವನ ಸುಂದರ ಸುಗಮ.