VARUNRAJ JI

Drama Romance Tragedy

3  

VARUNRAJ JI

Drama Romance Tragedy

ಪ್ರೀತಿ

ಪ್ರೀತಿ

4 mins
11.9K


ನಮ್ಮ ಕಥಾನಾಯಕ ಮೋಹನ, ನೆನಪಿರಲಿ ಇವನು ಕಥೆಯಲ್ಲಿ ಮಾತ್ರ ನಾಯಕ ದಿನವೂ ಹಸಿವು, ನೋವು ಎನ್ನದೆ ಕೂಲಿಗಾಗಿ ದುಡಿಯುವುದೇ ಇವನ ಕಾಯಕ. ಮದುವೆ ಆಗಿತ್ತು, ಹೌದು ಇವನಿಗೂ ಮದುವೆ ಆಗಿತ್ತು, ವಯಸ್ಸು 25 ಕ್ಕೆ ಮಿರಿತ್ತು. ತುಂಬಾ ಸಂತಸದ ಕ್ಷಣ ಹೌದು, ಮದುವೆ ಸಂತಸದ ಕ್ಷಣವೇ , ಮದುವೆ ಅಷ್ಟೇ ಮದುವೆಯ ನಂತರದ ಪ್ರತಿ ನಿದ್ರೆಯು ನಿದ್ರೆಯೂ ಅಷ್ಟೇ. ಆದರೆ ಹೊಟ್ಟೆ ತುಂಬದೇ ನಿದ್ರೆ ಬರುವುದು ಹೇಗೆ. ಅದೇ ಸಮಸ್ಯ !

ಪ್ರೀತಿಸಿದ್ದ, ಪ್ರೀತಿಸೋದ್ ತಪ್ಪಾ? , ಇಲ್ಲವಲ್ಲ !. 25 ರ ವಯಸ್ಸು ಇದೆಲ್ಲಾ ಕಾಮನ್ ಗುರು ಅಂತಾರೆ ಮೋಹನನ ಸ್ನೇಹಿತರು, ವಾರದಲ್ಲಿ ನೋಡುತಿದ್ದ ಒಂದು ಎರಡು ಫಿಲಂಗಳಲ್ಲಿ ಇರುತಿದದ್ದು ಅದೇ ಪ್ರೀತಿಯ ಕಥೆ ತಾನೇ?

ನಮ್ಮ್ ಹೀರೋ ನ ಹಾಗೆ ನಾನು ಪ್ರೀತಿ ಮಾಡಿ ಹೀರೋಯಿಸಂ ತೋರಿಸಬೇಕು ಅನೋ ಆಸೆ ಯಾರಿಗೆ ತಾನೇ ಬರೋದಿಲ್ಲ? ಮಠ ದ ಸ್ವಾಮಿಗಳೇ ಇದಕ್ಕೆ ಹೊರತಾಗದಿರುವಾಗ !! ಹೌದು ಇವನಿಗೂ ಪ್ರೀತಿಯ ಆಸೆ ಚಿಗುರೊಡೆಯಿತು, ಚಿಗುರೊಡೆಯಿವುದೆಂದರೆ, ಮೊಳಕೆ ಹೊಡಿಯುವುದಲ್ಲ ! ಈಗಾಗಲೇ ಬೆಳೆದಿದೆ ಮರದಲ್ಲಿ ಹೊಸ ಚಿಗುರು ಮೂಡುವಂತೆ, ಹೌದು ಹಿಂದೆ ಅತ್ತೆ ಮಗಳು, ಎದರು ಬೀದಿಯ ತನಗಿಂತ 3 ವರ್ಷ ಹಿರಿಯಳಾದ ಪ್ರೇಯಸಿ ಇನ್ನೂ ಕೆಲವರು, ಹಾ ಕೆಲವರು ಎಂದರೆ ತಪ್ಪಾಗಬಹುದು ! ನೋಡಿದ್ದು, ಆಸೆ ಪಟ್ಟಿದು, ಮಂಡಿಯೂರಿ ಗುಲಾಬಿ ನೀಡಿ ಚೀ ಎನಿಸಿಕೊಂಡದ್ದು ಎಲ್ಲಾ ಸೇರಿದರೇ ಹಲವರು, ಹೌದು ಹಲವಾರು ಮಂದಿ. ಎಲ್ಲರ ಸಹವಾಸ ದಿಂದ ಕಲಿತದ್ದು ಒಂದೇ ಪಾಠ ಹುಡಿಗಿಯರಂದ್ರೆ ಡೇಂಜರ್ ಎಂಬುದು.


ಹೀಗೆ ಕಲಿತ ಪಾಠ ಈಗಾಗಲೇ ಬೆಳೆದಿದ್ದ ಮರಕ್ಕೆ, ಈಗ ಮರ ಎಲ್ಲಿಂದ ಬಂತು ಅಂತೀರಾ?

ಅದೇ ಹೊಸದಾಗಿ ಚಿಗುರುತ್ತಿರುವ ಮೋಹನನ ಪ್ರೀತಿಯ ಮರ, ಎಷ್ಟೋ ದಿನಗಳಿಂದ ನೀರು ಕಾಣದಿದ್ದ ಮರ, ಹೊಸ ಚಿಗುರೊಡೆಯಿತು. ಹೌದು ಮೋಹನನ ಸ್ನೇಹಿತರ ಪ್ರೋತ್ಸಾಹದ ನೀರು. ಬರಿ ನೀರು ! ಗೊಬ್ಬರ ಬೇಕಲವೇ? ಸೊಂಪಾಗಿ ಬೆಳಿಯೋಕೆ, ಕನಿಷ್ಠ ಯೂರಿಯ ಆದರೂ? !. ಏನಿದು ಗೊಬ್ಬರ ಯೂರಿಯ ಅಂತೀರಾ? ಪ್ರೀತಿಯ ಚಿಗುರು ಬೆಳೀಬೇಕು ಅಂದರೆ ಬೇಕು ತಾನೇ ಮತ್ತಷ್ಟು ಪೋಷಣೆ, 24-25 ರ ವಯಸ್ಸು ಮನೆಯಲ್ಲಿ ಹೆಣ್ಣು ನೋಡಿ ಮದುವೆ ಮಾಡುವರು ಎಂದರೆ ಇನ್ನ ಇಬ್ಬರು ಮದುವೆ ಆಗುವ ಹೆಣ್ಣುಮಕ್ಕಳು ಇದ್ದಾರೆ !. ಇರಲಿ ಆದರೂ.... ಉಹೂ. ಕೆಲಸ ಕಾರ್ಯ ಇಲ್ಲದೆ ದಂಡಕ್ಕೆ ಬಿದಿರುವ ಮಗನಿಗೆ ಮದುವೆ ಮಾಡಿ, ಬರುವ ಹೆಣನ್ನು ಸಾಕುವ ಜವಾಬ್ದಾರಿಯನ್ನು ಕೂಡ ತಾನೇ ವಹಿಸಿ ಕೊಳ್ಳಲು ಯಾವ ತಂದೆ ತಾನೇ ಇಷ್ಟ ಪಡುತ್ತಾನೆ, ಅದು ಹೇಗೊ ಆಗುತ್ತೆ ಅಂತ ಯೋಚಿಸಿದರೆ.., ಮದುವೆ ಆಗಿ ಬರುವ ಹೆಣ್ಣಿನ ಸ್ಥಿತಿ !? ಮಗನ ಸದ್ಗುಣಗಳನ್ನು ತಂದೆ ತಿಳಿದವನೇನು ಆಗಿರಲಿಲ್ಲ, ಇಂತವನನ್ನು ಕಟ್ಟಿಕೊಂಡು ಆ ಹೆಣ್ಣು ಮಗಳು ಏಗುವು ದಾದರೂ ಹೀಗೆ?

ತನಗೂ 3 ಹೆಣ್ಣು ಮಕ್ಕಳು ಇದಾರಲ್ಲ. ! ಅಂತೂ ಮೋಹನನ ತಂದೆ ದೃಢ ನಿಶ್ಚಯ ಮಾಡಿದ್ದ, ಜವಾಬ್ದಾರಿ ಬರುವವರೆಗೆ ಇವನಿಗೆ ಮದುವೆ ಮಾಡಬಾರದು ಅಂತ ! ಜವಾಬ್ದಾರಿ ಅಂದರೆ ಅದೇನು ಪ್ರತಿದಿನ ಮೋಹನನ ಟೀ ಅಡ್ಡೆಯ ಮುಂದೆ ನಡೆದು ಹೋಗೋ ಟೈಪಿಂಗ್ ಇನ್ಸ್ಟಿಟ್ಯೂಟ್ ಹುಡುಗಿ ಅಲ್ಲವಲ್ಲ?

ಯಾರಿವಳು? ಟೈಪಿಂಗ್ ಇನ್ಸ್ಟಿಟ್ಯೂಟ್ ಹುಡುಗಿ ಅಂತ ಯೋಚ್ನೆ ಮಾಡ್ತಿದೀರಾ? ಸರಿಯಾಗಿದೆ ನಿಮ್ಮ ಯೋಚನೆ ನಾನೇ ಹೇಳೋದು ಮರ್ತಿದೆ !.

ಮೋಹನನ್ನು ಅವನ ಸ್ನೇಹಿತರು ಪ್ರತಿ ದಿನ ಹರಟೆ ಹೊಡೆಯಲು ಸೇರುತ್ತಿದ್ದ ಜಾಗ, ಅದನ್ನೇ ಮೋಹನನ ಟೀ ಅಡ್ಡಾ ಅಂಥ ಕರೆದದ್ದು , ಅದೇನು ವಿಶೇಷ ಅಲ್ಲ ಬಿಡಿ, ಎಲ್ಲಾ ಊರುಗಳಲ್ಲಿ ಇರೋದೇ ಅಲ್ವಾ, ಟೀ ಅಂಗಡಿ? ಅದರ ಮುಂದೆ ಹರಟೆ ಹೊಡಿಯುವ ಯುವಕರ ಗುಂಪು? ಇಲ್ಲಿ ವಿಷಯ ಟೀ ಅಂಗಡಿ ಅಲ್ಲ ಅದರ ಮುಂದೆ ನಡೆದು ಹೋಗುತಿದ್ದ ಟೈಪಿಂಗ್ ಇನ್ಸ್ಟಿಟ್ಯೂಟ್ ಹುಡುಗಿ ! ಹೌದು, ಹೊಸದಾಗಿ ಚಿಗುರಲು ಹತ್ತಿದ ಮೋಹನನ ಪ್ರೀತಿಯ ಮರಕ್ಕೆ ಸಾವಯವ ಗೋಬರವೇ ಇವಳು. ಸ್ನೇಹಿತರು, ಫಿಲಂ, ಇವು ಆಗಾಗ ಬೀಳುವ ತುಂತುರು ಹನಿಗಳಂತೆ,

ತಂದೆ ಮಗನನ್ನು ಅರ್ಥ ಮಾಡಿಕೊಂಡಂತೆ ಮಗನು ತಂದೆ ಯ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದ, ನಮಪನ್ನ ನಂಬ್ಕೊಂಡ್ರೆ, ಅವನು ಅವರ ಅಪ್ಪನ ಆಣೆಗೂ ನನಗೆ ಮದುವೆ ಮಾಡಲ್ಲ ಅಂಥ ಮೋಹನ ಅರ್ಥ ಮಾಡಿಕೊಂಡಿದ್ದ,

ಹಾಗಾಗಿಯೇ ತಾನೇ ಏನಾದರು ಒಂದು ಉಪಾಯ ಮಾಡಬೇಕು ಅಂಥ ಯೋಚ್ನೆ ಮಾಡುತ್ತಾ.. ಟೀ ಹೀರುತ್ತಿದ್ದ ಮೋಹನನಿಗೆ ಈವತ್ತೆನೋ ವಿಶೇಷವಾಗಿ ಕಂಡಳು, ಟೀ ಅಂಗಡಿ ಮುಂದೆ ನಡೆದು ಹೋಗುತ್ತಿದ್ದ ಟೈಪಿಂಗ್ ಇನ್ಸ್ಟಿಟ್ಯೂಟ್ ಹುಡುಗಿ. ಹೌದು ತುಂಬಾ ವಿಶೇಷ ವಾಗಿ ಕಂಡಳು. ಹಬ್ಬವೋ, ಹುಟ್ಟಿದಹಬ್ಬವೊ ಇರಬಹುದು, ಇರಲಿ. ಇದಾದ ನಂತರ ಪ್ರತಿದಿನ ಟೀ ಅಂಗಡಿಯ ಮುಂದೆ ಸಮಯಕ್ಕೆ ಸರಿಯಾಗಿ ಹಾಜರಾಗುತಿತ್ತು ಮೋಹನನ ಹಾಗೂ ಅವನ ಸ್ನೇಹಿತರ ಸವಾರಿ . ಹುಡುಗಿಯರೇನು ದಡ್ಡಿಯರಲ್ಲವಲ್ಲ ಮೋಹನನ್ನು ಪ್ರತಿ ದಿನ ತನ್ನ ಕಡೆಗೆ ಏನೋ ಒಂತರಾ ನೋಡ್ತಾ ಇದ್ದಾನೆ ಅಂಥ ಅವಳಿಗೂ ಗೊತ್ತಿತ್ತು. ಜೊತೆಗೆ ಟೈಪಿಂಗ್ ಕಳಿಯಲು ಬರುತಿದ್ದ ಬೇರೆ ಹುಡುಗಿಯರ ಮೂಲಕ ಮೋಹನನ ವಿವರಗಳ್ಳನ್ನು ಸಹ ತಿಳಿದುಕೊಂಡಿದಳು. ಆದರೂ ತನಗೆ ಏನು ಗೊತ್ತಿಲ ಎಂಬಂತೆ ಇದು ಬಿಟ್ಟಿದಳು.


ಹೀಗೆ ದಿನಗಳು ಉರುಳುತ್ತಿದವು, ಹೆಚ್ಚೇನುನು ಅಲ್ಲ 2-3 ತಿಂಗಳು ಕಳೆದಿರಬಹುದು, ಅಷ್ಟರಲ್ಲಿ ಆಗಲೇ ಮೋಹನ ಮತ್ತು ಟೈಪಿಂಗ್ ಇನ್ಸ್ಟಿಟ್ಯೂಟ್ ಹುಡುಗಿ ಇಬ್ಬರ ವೇಷ ಭೂಷಣಗಳು ಸಾಕಷ್ಟು ಬದಲಾಗಿದ್ದವು, ತನಗಾಗಿ ಒಬ್ಬ ಹುಡುಗ ಅದರಲ್ಲೂ ಮೋಹನ ನಂತಹ ಚೆಲುವ ಕಾಯುತ್ತಿದಾನೆ ಅನೋದು ಯಾವ ಹುಡುಗಿಗೆ ಆಗಲಿ ಒಂದು ರೀತಿ ಗರ್ವವನ್ನ ಹೆಚ್ಚು ಮಾಡುವ ವಿಷಯವೇ ತಾನೇ? ಅಲ್ಲ ಅಂತೀರಾ? ಇರಲ್ಲಿ ಈ ಕಥೆಯ ಮಟ್ಟಿಗಾದರು ನಿಜ ಅಂಥ ಭಾವಿಸಿ, ಕಾಯುತ್ತಿರುವ ಹುಡುಗನಿಗೆ ತಾನು ಸುಂದರವಾಗಿ ಕಾಣಬೇಕು ಅನೋ ಅಸೆ ಅವಳಲ್ಲಿ ದಿನದಿಂದ ದಿನಕ್ಕೆ ಬೆಳಿತಾನೇ ಇತ್ತು. ಅದರ ಪರಿಣಾಮ ದಿಂದಲೇ ಅವಳು ಸಹ ಬದಲಾಗಿದ್ದು. ಇನ್ನು ಮೋಹನನು ಕಥೆ ಯನ್ನು ಹೇಳುವುದೇ ಬೇಡ, ಈ ಹುಡುಗಿನ ಇಂಪ್ರೆಸ್ ಮಾಡೋದೇ ಅವನ ಫುಲ್ ಟೈಮ್ ಡ್ಯೂಟಿ ಆಗಿತ್ತು.

ತಾನು ಚೆನ್ನಾಗಿ ಕಾಣೋಕೆ ಏನು ಬೇಕೋ ಎಲವನ್ನು ಮೋಹನ ಮಾಡೋಕೆ ರೆಡಿ. ಅಪ್ಪನ ಜೋಬಿನಿಂದ ಕದ್ದು, ಇಲ್ಲ ಅಮ್ಮನನ್ನು ಪುಸಲಾಯಿಸಿ ಅಥವಾ ಸ್ನೇಹಿತರಿಂದ ಸಾಲ ಮಾಡಿ, ಇಂತಹ ವಿಚಾರಗಳಿಗೆ ಸಾಲ ಕೊಡದ ಸ್ನೇಹತರು ಇರುತ್ತಾರಾ?

ಸುಲಭ ವಾಗಿ ಸಾಲ ಸಿಗುತಿತ್ತು ಅವನು ಅದರಿಂದ ದಿನಾ ಬಿಟ್ಟಿ ಶೋಕಿ ಮಾಡಿಕೊಂಡು ಪೋಜ್ ಕೊಡುತಾ ನಿಂತಿರುತ್ತಿದ್ದ ಟೀ ಅಂಗಡಿ ಮುಂದೆ ನಿಂತಿರುತ್ತಿದ್ದ.


ಇದು ಹೀಗೆ 2-3 ತಿಂಗಳು ಕಳೆಯಿತು. ಅವಳಿಗೆ ಯಾಕಿವನ್ನು ಇಷ್ಟ್ಟು ದಿನಾ ಆದ್ರೂ ಒಂದು ಮಾತು ಆಡದೆ ಹೀಗೆ ಬರೀ ನೋಡೋದ್ರಲೇ ಕಳಿತಿದ್ದನಲ್ಲ.? ಪೂರ್ ಫೆಲೋ !! ಅಂಥ ಒಮ್ಮೆ ಆದರೂ ಅನಿಸಿರಬೇಕು, ಮೋಹನನಿಗೆ ಮಾತಾಡುವ ಅಸೆ ಇರಲಿಲ್ಲ ವೆಂದಲ್ಲ, ಆದರೆ ತಕ್ಕ ಸಮಯ ಕ್ಕಾಗಿ ಕಾಯುತಿದ್ದ ಅಷ್ಟೇ. ತಕ್ಕ ಸಮಯ ಬಂತೋ ಅಥವಾ ಹುಡುಗಿಯೇ ಸಮಯ ಮಾಡಿಕೊಂಡಳೋ ಅಂತೂ ಅವಳೇ ಮೊದಲಾಗಿ ಇವನನ್ನು ಮಾತಾಡುವ ಪ್ರಯತ್ನ ಮಾಡಿದಳು, ಇಷ್ಟಾಗಿ ಮೋಹನ ಸುಮ್ಮನಿರೋದು ಸಾಧ್ಯ ನಾ? ಅವನು ಮುಂದುವರೆದ ಮಾತು... ಮಾತು.. ಹೀಗೆ ಕೆಲವು ದಿನಾ.. ಮತ್ತೆ ಪಾರ್ಕು ಸಿನಿಮಾ... ಎಲ್ಲವು ಸರಿ ಆದರೆ ಮುಂದೇನು??


ವ್ಯರ್ಥ ಆಗ್ತಾ ಇರೋ ಯವನಕ್ಕೆ ಒಂದು ಅರ್ಥ ಕೊಡಬೇಕು ಅಂಥ ಮೋಹನನು ಯೋಚ್ನೆ ಮಾಡುತ್ತ ಇದ್ದರೆ, ಆ ಕಡೆ ಮಗಳಿಗೆ ಮದುವೆ ಮಾಡಬೇಕು ಅಂಥ ಓಡಾಡುತ್ತಿದ್ದ ತಂದೆ, ಅದೇ ಟೈಪಿಂಗ್ ಇನ್ಸ್ಟಿಟ್ಯೂಟ್ ಹುಡುಗಿಯ ತಂದೆ. ತಮ್ಮ ಪ್ರೀತಿಯನ್ನ ತಂದೆಗೆ ಹೇಳಿ ಒಪ್ಪಿಸುವುದು ಅವಳ ಅಸೆ. ಆದರೆ ತನ್ನ ಮಗಳಿಗೆ ಗವರ್ನಮೆಂಟ್ ಕೆಲಸ ದಲಿರೋ ಹುಡ್ಗನೆ ಬೇಕು ಅಂಥ ಛಲ ಹಿಡಿದಿರುವ ಅಪ್ಪ ಮೋಹನನ ವಿಷಯ ವನ್ನು ಕಡಾ ಖಂಡಿತ್ ವಾಗಿ ತಿರಸ್ಕಾರ ಮಾಡ್ತಾರೆ ಅನೋದು ಅವಳಿಗೆ ತಿಳಿಯದ ವಿಷಯವೇನು ಆಗಿರ್ಲಿಲ್ಲ ! ಮೋಹನನ ಮನೆ ಪರಿಸ್ಥಿತಿ? ಮೋಹನನಿಗೆ ಇನ್ನು ಜವಾಬ್ದಾರಿ ಬಂದಿಲವಲ್ಲ !? , ಉಳಿದಿರುವ ದಾರಿ?

ಹೌದು, ನೀವು ಯೋಚ್ನೆ ಮಾಡ್ತಾ ಇರೋದೇ ನೇ ಉಳಿದಿರುವ ದಾರಿ, ನೀವೇನು ಹುಟ್ಟಿದ ಮಕ್ಕಳಿಗೂ ಗೊತ್ತು ಮನೇಲಿ ಒಪ್ಪದಿದ್ರೆ ಓಡೋಗಿ ಮದ್ವೆ ಆಗ್ತಾರೇ ಅಂಥ ! ಆದರೆ ಮನೆಯವರ ಒತ್ತಾಯಕೆ ಮಣಿದು ಪ್ರೀತಿಯನ್ನ ತ್ಯಾಗ ಮಾಡಿದವರು ಇದಾರೆ ಅನ್ನಿ, ಆದರೆ ಮೋಹನನ ಪ್ರಕಾರ ಅವರದ್ದು ನಿಜವಾದ ಪ್ರೀತಿ ಅಲ್ಲ !

ಅವ್ನು ಹೇಳೋ ಹಾಗೆ ನಿಜವಾದ ಪ್ರೀತಿ ಯಾರಿಗೂ ಹೆದರಲ್ಲ, ಏನೇ ಕಷ್ಟ ಬರಲಿ ಪ್ರೀತಿಸಿದವರನ್ನ ಬಿಟ್ಟು ಹೋಗ್ಬಾರ್ದು ಅದೇ ನಿಜವಾದ ಪ್ರೀತಿ, ಎಷ್ಟೇ ಆಗ್ಲಿ ಸಿನೆಮಾ ನೋಡಿ ಬೆಳದವರಲ್ವೇ?

ಹುಡುಗಿ ಮೋಹನನ ಜೊತೆ ಓಡಿ ಹೋಗೋಕೇ ಒಪ್ಪದಿದಾಗ ಅವಳಿಗೆ ನಾನಾ ವಿಧವಾಗಿ ಪ್ರೀತಿಯ ಬಗ್ಗೆ ಹೇಳಿ ಕಡೆಗೂ ಅವಳನ್ನು ಒಪಿಸಿದ್ದ, ಹುಡುಗಿ ಒಪ್ಪಿದಳು.

ಗ್ರೀನ್ ಸಿಗ್ನಲ್ ಸಿಕ್ಕಿತಲ್ಲ, ಇನ್ನ ಟ್ರೈನ್ ಹೋರಡುವುದೊಂದೇ ಬಾಕಿ, ಮೋಹನನು ಎಲ್ಲಾ ಸ್ನೇಹಿತರಿಗೂ ವಿಷಯ ತಿಳಿಸಿದ, ಇವನು ಸಹಾಯ ಕೇಳುವ ಮೊದಲೇ ಅವರು ವಿಧ ವಿಧ ವಾದ ಐಡಿಯಾ ಗಳನ್ನು ಕೊಡೋದ್ಕ್ಕೆ ಪ್ರಾರಂಭ ಮಾಡ್ತಾರೆ. ಅದೇ ರೀತಿ ಇಂತಹ ವಿಷಯಗಳಲ್ಲಿ ಹಲವು ಸ್ನೇಹಿತರು ನಾ ಮುಂದು ತಾ ಮುಂದು ಅಂಥ ಮೋಹನನ ಸಹಾಯಕ್ಕೆ ಬರ್ತಾರೆ.....

.. ಮನೆಯಲಿ ದವರು ಇವರಿಬರ್ರು ಕಾಣೆ ಅದಮೇಲೆನೆ ಮನೆಯವರಿಗೆ ವಿಷಯ ತಿಳುಯುತ್ತೆ...

ಈಗೇನು ಮಡಕ್ಕೆ ಸಾಧ್ಯ?


...... ಮುಂದುವರಿಯುವುದು .



Rate this content
Log in

More kannada story from VARUNRAJ JI

Similar kannada story from Drama