ಸ್ವಪ್ನ ಎಂ

Drama Others

2.4  

ಸ್ವಪ್ನ ಎಂ

Drama Others

ನೀನಿರದೇ ನನಗೇನಿದೆ?

ನೀನಿರದೇ ನನಗೇನಿದೆ?

6 mins
147


ಕೋಲ್ಮಿಂಚಿನ ನಗೆಯವನು....

ಕವಿತೆಗೇ ಸಾಹಿತ್ಯವಾದವನು....

ಮನದ ಗುಡಿ ಸೇರಲು ಸನ್ನಿಹಿತವಾದವನೇ....

ಅನುಮಾನದ ಗೆರೆಮೂಡಿಸಿ ಮನದ ಗಡಿಯಿಂದ ದೂರ ಉಳಿಯುವ ಹುನ್ನಾರವೇಕೆ.....??

"ಶ್ರೀ........... ಯಾಕೋ... ಏನಾಯ್ತು.....? ನಾನು ಮಾಡಿದ ತಪ್ಪಾದರು ಏನು? ನನ್ನಲ್ಲಿ ಯಾಕಿಷ್ಟು ನಿರಾಸಕ್ತಿ ನಿನಗೇ...? ಬೇಡವೇಂದರು ಮನದಲ್ಲಿ ಪ್ರೀತಿಯ ಅಲೆ ಎಬ್ಬಿಸಿ ಮನದಲ್ಲಿ ನಿನ್ನದೇ ನೆನಪೇಂಬ ಸಿಹಿ ತಂಗಾಳಿ ಕ್ಷಣಕಾಲವೂ ಶಾಂತವಾಗಲು ಬಿಡದೇ ಬಿರುಸಾಗಿ ಬೀಸಲು ಕಾರಣನಾಗಿ ಇಂದು ಅದೇಕೆ ಇಷ್ಟೊಂದು ಮೌನವಹಿಸಿರುವೇ.....? ಅದೇಕೋ ಕಾಣೆ ನೀನೆಂದರೆ ವಿಶೇಷವೆನಿಸುವಷ್ಟು ಆಕರ್ಷಣೆ.... ಥೋ ಥೋ ಅದು ಬರಿಯ ಆಕರ್ಷಣೆ ಅಷ್ಟೇ ಅಲ್ಲಾ ಕಣೋ.. ನೀನೆಂದರೇ ಅಗಾಧ ಗೌರವ, ಅಭಿಮಾನ, ಎಲ್ಲವೂ.... ಆಕರ್ಷಣೆಗಷ್ಟೇ ಒಲಿಯುವ ಮನಸ್ಸು ಇದಾಗಿದ್ದರೆ ಇಷ್ಟೋತ್ತಿಗೇ ಪ್ರೀತಿ ಎನ್ನುವ ಹೆಸರಿಟ್ಟ ಆಕರ್ಷಣೆಗಳು ಅದೆಷ್ಟು ಆಗುತ್ತಿದ್ದವೋ ಏನೋ? ಆದರೇ ನನ್ನ ಮನಸ್ಸು ಅಷ್ಟು ದುರ್ಬಲವಲ್ಲ.. ಸರೀ ತಪ್ಪುಗಳನ್ನ ವಿಮರ್ಷಿಸಿ, ಸ್ವತಃ ನಿರ್ಧಾರಗಳನ್ನ ತೆಗೆದುಕೊಳ್ಳುವಷ್ಟು ಬಲಿಷ್ಠ..... ಆ ನನ್ನ ಆತ್ಮವಿಶ್ವಾಸದಿಂದಲೇ ನಾನು ನಿನ್ನನ್ನ ನನ್ನ ಸಂಗಾತಿಯನ್ನಾಗಿ ವರಿಸಲು ಮನಃಪೂರ್ವಕವಾಗಿ ಸಮ್ಮತಿಸಿದ್ದು..... ನೀನು ತೋರುತ್ತಿದ್ದ ಮಮತೆ, ವಾತ್ಸಲ್ಯ, ಕಾಳಜಿ ಪ್ರತಿಯೊಂದು ನಿನ್ನಲ್ಲಿ ನನ್ನನ್ನ ಸೂಜಿಗಲ್ಲಿನಂತೆ ಸೆಳೆಯಲು ಕಾರಣವಾಯಿತು ಎಂದರೇ ತಪ್ಪಾಗಲಿಕ್ಕಿಲ್ಲ.... ಆದರೇ ಇಂದು ಅದೆಲ್ಲಾ ಏನಾಯಿತು.....? ಆ ಪ್ರೀತಿ, ಆ ಕಾಳಜಿ ಹುದುಗಿ ಹೋಗಿದ್ದಾದರು ಎಲ್ಲಿ? ಅಂದರೆ ಇಷ್ಟು ದಿನದ ನಿನ್ನ ಪ್ರೀತಿ ಮುಖವಾಡವೇ? ಯಾಕೋ ಗೊತ್ತಿಲ್ಲ ನೀನಿಲ್ಲದೇ ಜೀವನವೇ ಇಲ್ಲವೆನ್ನುವಷ್ಟು ಬರಡು ಎನಿಸುತ್ತಿದೆ... ನೀರಿನಿಂದ ಹೊರಬಂದ ಮೀನು ವಿಲವಿಲನೇ ಒದ್ಧಾಡುವ ಪರಿಸ್ಥಿತಿ ನನ್ನದಾಗಿದೆ....ಕಾರಣವಿಲ್ಲದೆ ದೂರ ಉಳಿಯುವ ಇರಾದೆ ಯಾಕೋ ನಿನಗೇ ನಾ ಕಾಣೆ? ನಿನ್ನ ಅನುಪಸ್ಥಿತಿಯಿಂದ ಸಾವಿರ ಆಲೋಚನೆಗಳು ಮನದಲ್ಲಿ ಮೂಡಿ ಮರೆಯಾಗುತ್ತಿವೇ..... ನನ್ನ ಜೊತೆ ಒಂದೇ ಒಂದು ಮಾತು ಆಡಲು ಹಪಹಪಿಸುತ್ತಿದ್ದ ನೀನು, ಇಂದೇಕೆ ಮೌನದೂರಿಗೇ ಪಯಣ ಬೆಳೆಸಿರುವೆ? ಕಾರಣ ತಿಳಿದುಕೊಳ್ಳುವ ಬಯಕೆ ನನಗೇ....ಅದನ್ನ ಹೇಳಲಾದರು ಒಂದು ಕ್ಷಣ ಕಣ್ಣೇದುರು ಬರಬಾರದೆ? ಕಡಲೋಳಗೇ ಹುದುಗಿದ ಮುತ್ತಂತೇ ಆಗಿರುವೆ ನೀನು.... ಕೈಗೇಟುಕದ ನಕ್ಷತ್ರವಾಗುವ ಬಯಕೆ ಏಕೆ ನಿನಗೇ? ಯಾರೂ ಇಲ್ಲದ ನಿರ್ಜನವಾದ ಪ್ರದೇಶದಲ್ಲಿ ಮರವೊಂದರ ಕೆಳಗೇ ಕುಳಿತು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸರಿಯಾಗಿ ಶ್ರೀಧರನ ಒಡನಾಡವಿಲ್ಲದೆ ಕಂಗೆಟ್ಟ ವೈದೇಹಿಯ ಕಣ್ಣಿಂದ ನೀರು ಜಿನುಗುತಿತ್ತು.... ಯಾರ ಕೆಟ್ಟದೃಷ್ಟಿ ನಮ್ಮ ಮೇಲೆ ಬಿತ್ತು? ಇದ್ದಕ್ಕಿದ್ದ ಹಾಗೇ ನನ್ನ ಮೇಲೆ ನೀರ್ಲಕ್ಷತೆ ತೋರುವ ಮನೋಭಾವನೆ ನಿನ್ನಲ್ಲಿ ಸುಳಿದಿದ್ದಾದರು ಏಕೆ? ಮನಸ್ಸು ಅವನೇ ಬೇಕೆಂದು ಬಿಕ್ಕುತಿತ್ತು.... ನಿನ್ನ ಜೀವನದಲ್ಲಿ ನನ್ನ ಹೊರತು ಬೇರೇಯವರ ಪ್ರವೇಶವಾಗಿರಬಹುದೆ? ಛೇ ಛೇ... ನನ್ನ ಹೊರತು ನೀನು ಇನ್ಯಾರನ್ನಾದರು ಸತಿಯೆಂದು ಕನಸಲ್ಲೂ ಕೂಡ ಭಾವಿಸಲಾರೆಯೆಂಬ ನನ್ನ ನಂಬಿಕೆ ಇಂದ್ಯೇಕೋ ಹುಸಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ... ಬೇಡವೆಂದರೂ ಮನದಲ್ಲಿ ನಿನ್ನ ಬಗ್ಗೆ ಅನುಮಾನದ ಗೆರೆಗಳು ಮೂಡುತ್ತಿದೆ.... ಆ ಅನುಮಾನ ನಿಜವೇ ಆದಲ್ಲಿ ಎಲ್ಲಾ ಹೆಣ್ಣು ಮಕ್ಕಳ ಹಾಗೇ ನಿನ್ನ ಬಗ್ಗೆ ಬೇಸರಿಸಿಕೊಂಡು, ನಿನ್ನ ಬಗ್ಗೆ ಶಪಿಸುತ್ತಾ ಕಣ್ಣೀರಲ್ಲಿ ಬದುಕು ಸಾಗಿಸುವಷ್ಟು ದುರ್ಬಳಲಲ್ಲಾ ನಾನು....... ನಂಗೇ ಸಿಗದೆ ಇರುವ ನಿನ್ನ ಪ್ರೀತಿ ಇನ್ಯಾರಿಗೂ ಸಿಗದೆ ಇರುವಂತೆ ಮಾಡುತ್ತೆನೆ ಅದಂತೂ ನಿಶ್ಚಿತ.... ಕ್ಷಣ ಕಾಲ ಶ್ರೀಧರನೊಟ್ಟಿಗೇ ಕಳೆದ ಹಲವು ನೆನಪುಗಳನ್ನ ಮೆಲಕು ಹಾಕುತ್ತಿದ್ದವಳು, ತಟ್ಟನೆ ತನ್ನ ಬುದ್ದಿಗೆ ತಾನೇ ಶಪಿಸಿಕೊಂಡಳು... ಅವಳ ಮನೋ ವಿಕಾರತೆಗೆ ಅವಳೇ ಛಿಮಾರಿ ಹಾಕಿಕೊಂಡಳು... ಪ್ರತಿಯೊಬ್ಬರು ತಾವು ಇಷ್ಟಪಡುವ ಜೀವ ಸುಖವಾಗಿ ಇರಬೇಕೆಂದು ಕೇಳಿಕೊಳ್ಳುತ್ತಾರೆ ಆದರೇ ತಾನು...? ಅನಗತ್ಯವಾದ ದ್ವೇಷವೆಕೆ ಅವನಲ್ಲಿ? ಕ್ಷಣಕಾಲ ಯೋಚಿಸಿದವಳ ಮನಸ್ಸು ಒಂದು ಹಂತಕ್ಕೆ ಸಮಾಧಾನದ ಸೋನೆಮಳೆಗರೆಯಿತು.... ತನ್ನಿಂದ ದೂರ ಉಳಿದು ಖುಷಿಯಾಗಿ ಇರುವನೆಂದಾದರೆ ಇರಲಿ... ಕೊನೆ ಆಯ್ಕೆ ಎಂಬಂತೆ ನನ್ನಂತ ಸತಿಯನ್ನ ಕೈಹಿಡಿಯುವ ಅದೃಷ್ಟ ಅವನಿಗಿಲ್ಲ ಎಂದುಕೊಂಡರಾಯಿತು.... ಪರಿಪರಿಯಾಗಿ ತನ್ನ ಮನವನ್ನ ತಾನೇ ಸಂತೈಸಿಕೊಂಡಳು..... ಜೊತೆಗೇ ತನ್ನ ಮನಸ್ಸನ್ನ ಗಟ್ಟಿಗೋಳಿಸುವ ಪ್ರಯತ್ನವನ್ನ ಮಾಡಿ ಅಲ್ಲಿಂದ ಎದ್ದು ಮನೆ ಕಡೆ ಹೆಜ್ಜೆ ಹಾಕುವ ಪ್ರಯತ್ನ.....

ಅದೇ ದಾರಿ.....ಇಳಿ ಸಂಜೆ ಸೂರ್ಯ ಮುಳುಗುವ ಸಮಯ..... ಅವನ ಕನಸನ್ನ ಇವಳು, ಇವಳ ಕನಸನ್ನ ಅವನ ಎದೆಗೊರಗಿ ಆ ಕನಸುಗಳಿಗೆ ಸಾವಿರ ಕಾಲ ಜೊತೆಯಾಗಿ ಇರುವ ಪ್ರಮಾಣ ಮಾಡಿದ ಸಿಹಿ ನೆನಪು ವೈದೇಹಿಗೆ, ಅಲ್ಲೇ ಕುಸಿದು ಕುಳಿತು ಜೋರಾಗಿ ಅವನ ಹೆಸರನ್ನ ಕೂಗಿ ಮೋಸಗಾರ ಎಂಬ ಹಣೆಪಟ್ಟಿ ಕೊಡಬೇಕೆಂಬ ಹತಾಶೆ ಇತ್ತು ಅವಳಲ್ಲಿ.... ಆದರೇ ಅದರಿಂದ ಪ್ರಯೋಜನ ಏನು? ಅವಳ ಪ್ರತಿ ಹೆಜ್ಜೆಗಳು ಭಾರವಾಗಿತ್ತು... ಎಷ್ಟು ಸಾಗಿದರು ಹೆಜ್ಜೆಗಳು ದೂರ ಏನಿಸುತಿತ್ತು ಆಕೆಗೆ... ಪದೇ ಪದೇ ತನ್ನ ಫೋನ್ ಅನ್ನು ಪರಿಶೀಲಿಸುತ್ತಿದ್ದಳು... ಅವನ ಕರೆಗಾಗಿ, ಅವನ ಧ್ವನಿಗಾಗಿ, ಅವನ ಸಲುವಾಗಿ ಕಾಯುತ್ತಿರುವಂತೆ...... ಆದರೇ ಅದರ ಪ್ರತಿಕ್ರಿಯೆ ಮಾತ್ರಾ ಶೂನ್ಯ..... ಅವನಿಂದ ಯಾವುದೇ ಕರೆಯಾಗಲಿ, ಸಂದೇಶವಾಗಲಿ ಕೊನೆಗೆ ಬಾರದೇ ಇದ್ದಿದ್ದು ಆಕೆಗೆ ಅವನಲ್ಲಿನ ಅತಿಯಾದ ಪ್ರೀತಿಯೇ ಒಂದು ತೆರನಾದ ದ್ವೇಷಕ್ಕೆ ಕಾರಣವಾಯಿತು, ಒಂದೊಮ್ಮೆ ಆತ ಎದುರಿಗೆ ಬಂದರೇ ಸಾಕು ಎಂದು ಕಾಯುತ್ತಿದ್ದಳು ...

ಹೀಗೇ ಮೂರ್ನಾಲ್ಕು ತಿಂಗಳಗಳ ಸಮಯ ಸರಿಯುವ ಹೊತ್ತು..... ಅವನ ಬಗ್ಗೆ ಇದ್ದ ಎಲ್ಲಾ ಮೃದುದೊರಣೇಗಳೆಲ್ಲ ಒಂದೊಂದಾಗಿ ಸರಿದು ಅದೆಲ್ಲ ಕೋಪ, ದ್ವೇಷದ ಮೂಲಕ ಜ್ವಾಲಾಮುಖಿಯ ರೀತಿ ಸ್ಪೋಟವಾಗುವ ಸಮಯ.... ಅವನೊಂದೆ ಒಂದು ಸಲಾ ಸಿಕ್ಕಿದರೆ ಸಾಕು, ಅವನ ಕೊರಳ ಪಟ್ಟಿ ಹಿಡಿದು ತನ್ನ ಮುಗ್ದ ಪ್ರೀತಿಗೇ ಮೋಸ ಮಾಡಿದ ಮೋಸಗಾರ ಎಂದು ಜೋರಾಗಿ ಹೇಳಬೇಕು ಎನ್ನುವ ಹಂಬಲ ಆಕೆಯದು... ಪ್ರೀತಿ ಹೆಸರಲ್ಲಿ ಇಲ್ಲ ಸಲ್ಲದ ಆಸೆಯ ಬೀಜವನ್ನ ನನ್ನ ಮನದಲ್ಲಿ ಬಿತ್ತಿ ಅದು ಮರವಾಗಿ ಫಲ ಕೊಡುವ ಮೊದಲೇ ಹೊಸಗಿ ಹಾಕುವ ಅಧಿಕಾರವನ್ನ ಕೊಟ್ಟಿದ್ಧಾದರು ಯಾರು ನಿನಗೇ? ನನ್ನ ಮನಸ್ಸನ್ನ ಘಾಸಿಗೋಳಿಸುವ ಹಕ್ಕು ನಿನಗೇನಿದೇ? ಎಂದು ಕೇಳುವ ಹುಚ್ಚು ಆಕ್ರೋಶ ಅವಳಲ್ಲಿ.....

ಕೊನೆಗೊಂದು ದಿನಾ ಅನಿರೀಕ್ಷಿತ ಎನ್ನುವಂತೆ ಅವನ ಕರೆ ಬಂದಾಗ ಆಶ್ಚರ್ಯದಿಂದಲೋ ಖುಷಿಯಿಂದಲೋ ಆಕೆಯ ಮೊಗ ಬೀರಿದ ಮಲ್ಲಿಗೆಯಂತಾಗಿತ್ತು...

ಆತುರದಲ್ಲಿದ್ದ ಮನಸ್ಸಿಗೆ ಲಗಾಮು ಹಾಕಿಕೊಂಡು ಸಾವರಿಸಿಗೊಂಡು ಗಂಭೀರವಾಗಿಯೇ ಅವನ ಕರೆಯನ್ನ ಸ್ವೀಕರಿಸಿದಳು.....

ಆ ಕಡೆಯಿಂದ ಅದೇ ಮಧುರವಾದ ಧ್ವನಿ... ಬೇಡವೆಂದರು ಮರುಳಾಗುವ ಮೋಹಕ, ಮಾಂತ್ರಿಕತೆಯ ಧ್ವನಿ.... ಏನೊಂದು ಮಾತನಾಡದೆ ನೇರವಾಗಿ ವಿಷಯಕ್ಕೆ ಬಂದ ಶ್ರೀಧರ...

"ವೈದೇಹಿ ಇವತ್ತು ನಿನ್ನ ಬಳಿ ತುರ್ತಾಗಿ ಮಾತಾಡೋ ಅಗತ್ಯವಿದೆ ಸಂಜೆ ನಾವು ಭೇಟಿಯಾಗುತಿದ್ದ ಮಾಮೂಲಿ ಸ್ಥಳಕ್ಕೆ ಬರ್ತೀಯಾ.. ಅಲ್ಲಲ್ಲ ಬರ್ಬೇಕು ಕಾಯ್ತಾ ಇರ್ತೀನಿ...." ಎಂದು ಹೇಳಿ ಕರೆಯನ್ನ ಸ್ಥಗಿತಗೊಳಿಸಿದ್ದ....

ಅವನ ಮಾತುಗಳನ್ನ ಕೇಳಿ ಮೋಡಿಗೆ ಒಳಗಾದವಳ ಹಾಗೇ ಸಮ್ಮತಿ ಸೂಚಿಸಿಯೇ ಬಿಟ್ಟಿದ್ದಳು ವೈದೇಹಿ...

ಅವನೆದುರಲ್ಲಿ ಬಂದಾಕ್ಷಣ ತನ್ನ ಪ್ರತಿಕ್ರಿಯೆ ಹೇಗಿರಬೇಕು? ಎಂದು ತನ್ನಲ್ಲೇ ಲೆಕ್ಕಾಚಾರ ಹಾಕಿಕೊಂಡವಳು, ಅವಳ ಅಸಮಾಧಾನ ಹತಾಷೆ ಎಲ್ಲವನ್ನೂ ಅವನೆದುರು ಹೊರಗೆ ಹಾಕುವ ದಾರಿ ಹುಡುಕುತಿದ್ದಳು....

ಕಡೆಗೂ ಅವನನ್ನ ಭೇಟಿಯಾಗುವ ಸಮಯ... ದೂರದಿಂದಲೇ ನೋಡಿದಳು... ಶ್ರೀಧರ ಅವಳ ನಿರೀಕ್ಷೆಯಲ್ಲಿಯೇ ಕಾಯುತ್ತಲಿದ್ದ.... ಮೊದಲಿದ್ದ ಲವಲವಿಕೆ ಯಾಕೋ ಮುಖದಲ್ಲಿ ಕಾಣಲಿಲ್ಲ ಆಕೆಗೆ... ಆಕೆ ಬರುವ ಸದ್ದನ್ನ ಆಲಿಸಿ ಅವಳೆಡೆಗೆ ಮುಖ ಕೊಟ್ಟವನ ಮುಖ ಸಾವಿರ ಚಂದಿರನ ಹೊಳಪು ಮಿರಿಸುತ್ತಲಿತ್ತು... ಬತ್ತಿದ ನದಿಗೆ ನೀರ ಸೆಲೆ ಸಿಕ್ಕಿ ಖುಷಿಯಿಂದ ಹರಿಯುವಂತಿತ್ತು... "ವೈದೂ ಹೇಗ್ ಇದ್ದಿ.....?" ಕಾಳಜಿ ಇಂದ ಕೇಳಿದವನ ಮಾತುಗಳಲ್ಲಿ ಪ್ರೀತಿ ಇತ್ತು...

ಅವನು ಮಾತನಾಡುವ ಮೊದಲೇ ತನ್ನ ಮನದಲ್ಲಿನ ತೊಳಲಾಟಕ್ಕೆ ಅವನೆದುರು ಕೂಗಾಡಿ ಜ್ವಾಲಾಮುಖಿಯಂತೆ ಅಬ್ಬರಿಸಬೇಕು ಎಂದುಕೊಂಡವಳಿಗೆ ಅವನ ಧ್ವನಿಯಲ್ಲಿನ ಮೆದುತನ ಕಂಡು ಬೆಂಕಿ ಎದಿರು ಕರಗಿ ನೀರಾಗುವ ಬೆಣ್ಣೆಯಂತಾಗಿದ್ದಳು.. ಆದರೂ ಕೂಡಾ ತನ್ನ ಅಸಮಾಧಾನವನ್ನ ತೊರ್ಪಡಿಸದೇ ಇರಲು ಸಾಧ್ಯವಿರಲಿಲ್ಲ ಆಕೆಗೆ.....

"ಹ್ಮ್ ಶ್ರೀ ನೇರವಾಗಿ ವಿಷ್ಯಕ್ಕೆ ಬಾ.... ಅದೇ ಹಳೇ ಫಿಲ್ಮ್ ಅಲ್ಲಿ ನಡೆಯೋ ಥರಾ ನಮ್ಮ ಮನೇಲಿ ನಂಗೇ ಬೇರೇ ಹುಡ್ಗಿನ ನೋಡಿದಾರೆ ವೈದು ಇಷ್ಟು ದಿನ ನಮ್ಮ ಜೀವನದಲ್ಲಿ ನಡೆದದ್ದು ಒಂದ್ ಕೆಟ್ಟ ಕನಸು ಅಂಥಾ ಮರ್ತು ಬಿಡು ಅಂತಿಯಾ ತಾನೇ? ಸಾಕು ಶ್ರೀ ನಂಗೆಲ್ಲ ತಿಳಿಯತ್ತೇ ಕೊನೆಪಕ್ಷ ಅದನ್ನ ಹೇಳೋಕೆ ಆದ್ರೂ ನನ್ನ ಹತ್ರಾ ಬಂದು ನಿನ್ನ ಮುಖ ತೊರ್ಸಿದ್ಯಲ್ಲಾ ಅದೇ ಖುಷಿ ನಂಗೇ... ನಿನ್ನ ನೋಡೊಕೆ ಅಂಥಾ ಸ್ವಾತಿ ಮಳೆಗಾಗಿ ಕಾಯೋ ಚಕೊರ ಪಕ್ಷಿಯಂತೆ ಕಾಯ್ತಾ ಇದ್ದೆ ಗೊತ್ತಾ ಶ್ರೀ...?"

ಅವಳ ಮಾತುಗಳು ಶ್ರೀಧರನಿಗೆ ಏನೊಂದು ಅರ್ಥವಾಗಲಿಲ್ಲ ಪ್ರಶ್ನಾರ್ಥಕವಾಗಿ ಅವಳ ಮುಖವನ್ನ ನೋಡುತ್ತಾ.. "ವೈದೂ... ಸ್ವಲ್ಪ ಕೆಳ್ತೀಯಾ...?" ಶ್ರೀಧರ ಮಾತು ಮುಗಿಯುವ ಮೊದಲೇ "ಸಾಕು ಶ್ರೀ... ನಿಮ್ಮ ಸಮಜಾಯಿಸುವಿಕೆಯ ಮಾತಿನ ಅಗತ್ಯತೆಯಾಗಲಿ ಅನಿವಾರ್ಯತೆಯಾಗಲಿ ನಂಗಿಲ್ಲ....." ಎಂದು ಒಂದೆ ಸಮನೆ ಬಿಕ್ಕುತಿದ್ದವಳನ್ನ ಸಂತೈಸುವ ದಾರಿಯೇ ಕಾಣದಾಯ್ತು ಆತನಿಗೆ.

"ಹೇಯ್ ಲೂಸೂ.. ನಾನ್ ಯಾವಾಗ ಹೇಳ್ದೆ ನಂಗೇ ಬೇರೇ ಹುಡ್ಗಿನಾ ನೋಡ್ತಾ ಇದಾರೆ ಅಂಥಾ.... ತಲೆ ಕೇಟ್ಟಿದಿಯೋ ಹೇಗೆ ನಿಂಗೇ?" ಶ್ರೀಧರನ ಮಾತುಗಳಲ್ಲಿ ಆತಂಕ ಇತ್ತು...

ಒತ್ತರಿಸಿ ಬರುತ್ತಿರುವ ಕಣ್ಣೀರನ್ನ ಒರೆಸಿಕೊಳ್ಳುತ್ತಾ ವೈದೇಹಿ "ಅಂದ್ರೆ ಶ್ರೀ ನಿಂಗೇ ಬೇರೇ ಹುಡ್ಗಿ ಜೊತೆ ಮದ್ವೆ ನಿಶ್ಚಯ ಆಗಿಲ್ವಾ? ಮನೆಗೇ ಹೋಗಿ ನಮ್ಮ ಪ್ರೀತಿ ವಿಷ್ಯ ಹೇಳ್ತಿನಿ ಅಂಥಾ ಹೋದೋನು ನಾನು ಪ್ರತಿ ಸಲಾ ಕಾಲ್ ಮಾಡಿದಾಗ್ಲೂ ನಮ್ಮ ಮನೇಲಿ ಸ್ವಲ್ಪ ಸಮಸ್ಯೆ ಇದೇ ಇರು ವೈದೂ ಅಂಥಾ ಹೇಳ್ತಾ ಇದ್ದೀದ್ದ ನೋಡಿ ನಿಮ್ಮ ಮನೇಲಿ ನಮ್ಮ ಪ್ರೀತಿಗೇ ಒಪ್ಪಲಿಲ್ಲ ಅನ್ಕೊಂಡ ಇದ್ದೇ ಜೊತೆಗೇ ನಿನ್ನ ಕಾಲ್ ಕೂಡಾ ಅಪರೂಪ ಆಗೋಯ್ತು ಇತ್ತೀಚೆಗೇ... ಬಹುಶಃ ನೀನು ನಂಗೇ ಮೋಸ ಮಾಡಿ, ನಿಮ್ಮ ಮನೆವ್ರು ನೋಡಿದ ಹುಡ್ಗಿ ಜೊತೆ ಏನಾದ್ರೂ..... ಅಂಥಾ ಎನ್ ಏನೋ ಯೋಚ್ನೆ ಮಾಡಿದ್ದೆ ನಾನು 😢😢😢😢" ಪೆಚ್ಚಾಗಿ ಶ್ರೀಧರನನ್ನ ನೋಡುವ ಸರಧಿ ವೈದೇಹಿಯದಾಗಿತ್ತು.....

"ಆಹಾ.....!!! ಇನ್ನೂ ಸ್ವಲ್ಪ ದಿನ ಬಿಟ್ಟಿದಿದ್ರೇ ಈ ಖಾಲಿ ತಲೆಲಿ ಅದೇನ್ ಎನ್ ಯೋಚ್ನೆ ಬರ್ತಿತ್ತೊ ಏನೋ.. ಸಧ್ಯ ಇಷ್ಟಕ್ಕೆ ಬಂದೆ ನಾನು... ಪ್ರತಿ ಹುಡ್ಗಿನೂ ತಾನು ಪ್ರೀತ್ಸೋ ಹುಡ್ಗ ಶ್ರೀರಾಮ ಚಂದ್ರ ಅಂಥಾ ಅನ್ಕೊಂಡೆ ಇಷ್ಟಾ ಪಟ್ಟಿರ್ತಾರೆ ಆದ್ರೆ ಎಲ್ಲಿ ಒಂದ್ ಚೂರು ಆಕಡೆ ಈಕಡೇ ಬಿಡುವು ಸಿಕ್ತೊ ಸಾಕು, ರಾವಣ್ನ ಲೆವೆಲ್ಗೇ ಇಮ್ಯಾಜಿನೇಶನ್ಗೇ ಹೋಗ್ತೀರಾ ಅಲ್ವಾ? ಥೂ ಅಷ್ಟ ಇಲ್ಲದೆ ಹೇಳ್ತಾರಾ ದೊಡ್ಡೋರು ಹೆಣ್ಮಕ್ಕಳ ಬುದ್ದಿ ಮೊಣಕಾಲ್ವರ್ಗೂ ಅಂಥಾ 🤦🏻‍♂🤦🏻‍♂ ನಮ್ಮ ದೊಡ್ಡಪ್ಪ, ಅಪ್ಪನ ಹೆಸ್ರಲ್ಲಿ ಇರೋ ಹೊಲ, ಮನೆ ಪ್ರತಿಯೊಂದನ್ನೂ ಮೋಸದಿಂದ ತಗೋಳ್ಳೋಕೆ ಎಲ್ಲಾ ರೀತಿ ಸಂಚು ಮಾಡಿದ್ರು ಅದನ್ನ ತಿಳಿದು ಅಪ್ಪ ನನ್ನ ಅರ್ಜೆಂಟ್ ಆಗಿ ಊರಿಗೇ ಕರ್ಸಕೊಂಡ್ರು, ಆಸ್ತಿ ಚಿಂತೆ ಒಂದ್ಕಡೇ ಆದ್ರೆ ನಂಬಿಕೆ, ಪ್ರೀತಿ, ವಿಶ್ವಾಸ ಅನ್ಕೊಂಡ ಇದ್ದ ದೊಡ್ಡಪ್ಪ ನಮ್ಗೆ ತಿರುಗಿ ನಿಂತ್ರು ಅಪ್ಪಾ ಅದೇ ವಿಷ್ಯವನ್ನ ಮನಸ್ಸಿಗೆ ತುಂಬಾ ಅಂದ್ರೆ ತುಂಬಾ ಹಚ್ಕೊಂಡ ಬಿಟ್ಟಿದ್ರು ವೈದೂ... ಈ ಹಣ ಅನ್ನೋ ಭೂತನೇ ಹಂಗೇ ಒಂದ್ ಸಲಾ ತಲೆ ಹೊಕ್ಕರೆ ಸಾಕು ಸ್ವಂತದರನ್ನೂ ಕೂಡಾ ವಿರೋಧಿಗಳನ್ನಾಗಿ ಮಾಡಿಬಿಡತ್ತೇ ನೋಡು... ನಮ್ಮದು ತುಂಬಾ ಚಿಕ್ಕ ಹಳ್ಳಿ ಅದೂ ನಿಂಗೂ ಕೂಡಾ ಗೊತ್ತು ತಾನೇ? ಈ ಕೋರ್ಟು ಅಪ್ಪನ ಆರೋಗ್ಯ ಇವೆಲ್ಲದರ ಮಧ್ಯ ನಿನ್ನ ಅಷ್ಟೊಂದು ಗಮನಿಸಿಕೋಳ್ಳೋಕೆ ಆಗಲಿಲ್ಲ ಈ ಕೋರ್ಟು ಕೇಸು ರಗಳೆ ಮುಗಿಯೋದ್ರೊಳಗೇ ಅಪ್ಪನ ಆರೋಗ್ಯ ಕೈಕೊಡ್ತು, ಈ ಮಧ್ಯ ನನ್ನ ಫೋನ್ ಕೂಡಾ ಮಿಸ್ ಮಾಡ್ಕೊಂಡೆ ನಾನು, ನನ್ನ ಪರಿಸ್ಥಿತಿ ಆ ದೇವ್ರಿಗೆ ಪ್ರೀತಿ ಬಿಡು.. ರೋಸಿ ಹೋಗಿತ್ತು ಜೀವ ಅನ್ನೋದು... ಎಲ್ಲಾ ಒಂದು ಹಂತಕ್ಕೆ ಬಂದ್ಮೇಲೆ ನನ್ನ ಹಳೇ ನಂಬರ್ಗೇ ಡುಪ್ಲಿಕೇಟ್ ಸಿಮ್ ತಗೊಂಡು ಮೊದ್ಲು ನಿಂಗೇ ಕಾಲ್ ಮಾಡ್ದೆ, ಅಪ್ಪನ ಆರೋಗ್ಯ ಕೂಡಾ ಈಗ ಸುಧಾರಿಸಿದೇ ಮನೇಲಿ ನಮ್ಮ ವಿಷ್ಯ ಹೇಳ್ದೆ ಎಲ್ಲರಿಗೂ ಕೂಡಾ ನಮ್ಮ ಪ್ರೀತಿಗೇ ಸಮ್ಮತಿ ಇದೇ, ನಿಮ್ಮ ಮನೇಲಿ ವಿಷ್ಯ ತಿಳಿಸಿ ನಿನ್ನ ಕರ್ಕೊಂಡು ಹೋಗೋಣ ಅಂಥಾ ಬಂದಿದಿನಿ... ಅವನ ಮುಖದಲ್ಲಿ ನಿರಾಳತೆಯ ನಗುವಿತ್ತು....

ವೈದೇಹಿ ತನ್ನ ಮೂರ್ಖತನಕ್ಕೆ ತಾನು ನೊಂದುಕೊಂಡು ಅವನನ್ನೊಮ್ಮೇ ಜೋರಾಗಿ ಅಪ್ಪಿ ಸಾರೀ.. ಎಂದಳಷ್ಟೇ..

ವೈದೇಹಿಯನ್ನ ತನ್ನ ಎರಡೂ ಭಾಹುಗಳಿಂದ ಬಳಸಿ ಅಳುತಿದ್ದ ಅವಳ ತಲೆಸವರುತ್ತಾ.. ನೋಡು ವೈದೂ ಯಾವ್ದೆ ಸಂಭಂದದಲ್ಲಾಗಲಿ ನಂಬಿಕೆ ಅನ್ನೋದು ತುಂಬಾನೇ ಮುಖ್ಯ ಆಗತ್ತೆ.. ನಂಬಿಕೆ ಇಲ್ಲಾ ಅಂದ್ಮೇಲೆ ಆ ಸಂಬಂಧ ತನಗೆ ಇರೊ ಬೆಲೆ ಕಳ್ಕೋಳ್ಳತ್ತೇ ಕಣೋ.. "ನೀ ಇರದೇ ನಂಗೇ ಬದುಕೆಲ್ಲಿದೇ ಹೇಳು?" ಅವನ ಮಾತುಗಳನ್ನ ಕೇಳಿ ಪುಟ್ಟ ಗುಬ್ಬಿ ಮರಿಯಂತೇ ಅವನ ಎದೆಯಲ್ಲಿ ಅವಿತು ಭಯದಿಂದ ನಡುಗುವಂತೆ ಆಕೆ ತನ್ನ ಹಿಡಿತವನ್ನ ಇನ್ನೂ ಬಿಗಿಗೊಳಿಸಿ.. "ಪ್ಲೀಸ್ ಇನ್ಮುಂದೆ ನನ್ನ ಬಿಟ್ಟು ಏಲ್ಲೂ ಹೋಗ್ಬೇಡಾ......" ಎಂದವಳ ತಲೆಗೊಂದು ಮುತ್ತನಿಟ್ಟ.. ಅದೇ ಅವನ ಒಪ್ಪಿಗೆ, ಸಮ್ಮತಿ, ಆಣೆ ಪ್ರಮಾಣವಾಗಿತ್ತು.......

ನಂಬಿಕೆಯೇ ಜೀವನ......



Rate this content
Log in

Similar kannada story from Drama