STORYMIRROR

Vaishnavi S Rao

Abstract Children Stories Others

4  

Vaishnavi S Rao

Abstract Children Stories Others

ನೆನಪಿನ ದೋಣಿ

ನೆನಪಿನ ದೋಣಿ

2 mins
328

ಆ ಘಟನೆಯನ್ನು ಎನಿಸಿಕೊಂಡರೆ ಒಮ್ಮೆ ತನ್ನ ತಾನು ಮೌನವಾಗಿ ಹೋಗುವ ಭಾವನೆಯನ್ನು ನೋಡಿದರೆ ಈ ಕೆಟ್ಟ ಸಮಾಜ ಯಾಕೆ ನಮಗೆ ರೀತಿಯಾಗಿ ನಿರೂಪಣೆ ನೀಡಿತು ಎನಿಸುತ್ತದೆ.....

     ಅಂದು ನಾವು ನಮ್ಮವರ ಜೊತೆಯಲ್ಲಿ ನಮ್ಮ ಕುಲದೇವರ ಬಳಿ ಹೋಗಲು ನಿರ್ಧಾರವನ್ನು ಮಾಡಿದೆವು. ಎಲ್ಲರೂ ಎಂದರೆ ನಮ್ಮ ಸಂಪೂರ್ಣ ಕುಟುಂಬದವರು ಅಂದು ಊರಿಗೆ ಬಂದಿದ್ದು ಸಂತೋಷದಲ್ಲಿ ಇದ್ದು ಎಲ್ಲರೂ ನಮಗೆ ನಮ್ಮವರಿಗೆ ತಮಾಷೆ ಮಾಡಿಕೊಂಡು ವಾಹನದಲ್ಲಿ ಕೂತುಕೊಂಡು ಇರುವಾಗ.......

       ಏಕೋ ಎಂದೂ ನನ್ನ ಬಲಗಣ್ಣು ಬಹಳ ತುರಿಕೆಗೊಳ್ಳುತ್ತಾ ಇದೆ ಎಂದೂ ತನ್ನ ಅತ್ತೆಯಮ್ಮನವರ ಬಳಿ ತಿಳಿಸಿದಾಗ ಅವರು ನಿನಗೆ ದುಃಖ ಬರಬಹುದು ಎಂದೂ ಹೇಳಿದಕ್ಕೆ ನಮ್ಮವರು ಅವಳು ಗಟ್ಟಿ ಯಾವುದಕ್ಕೂ ರೋದಿಸುವುದಿಲ್ಲ ಎಂದೂ ತಮಾಷೆ ಮಾಡತೊಡಗಿದರು...

      ಹೀಗೆ ನಮ್ಮ ಕುಲದೇವರ ದೇವಸ್ಥಾನ ತಲುಪಿದೆವು. ಅಲ್ಲಿ ಮುದ್ದು ಮುದ್ದಿನ ಒಂದು ಮಗುವನ್ನು ಒಬ್ಬರು ಎತ್ತುಕೊಂಡು ಆಟವನ್ನು ಆಡಿಸುವುದನ್ನು ಕಂಡ ನನ್ನ ಮನಕ್ಕೆ ಏಕೆ ಇಟ್ಟುಕೊಳ್ಳಬೇಕು ಎನಿಸಿ ಹೋಗೋಣ ಎಂದೂ ಅವರ ಬಳಿ ಹೋದಾಗ......

      ಅವರು ನುಡಿದ ಆ ಮಾತು ಒಮ್ಮೆ ನನ್ನ ಮನಕ್ಕೆ ಎಷ್ಟು ನೋವು ಮಾಡಿತು ಎಂದರೆ ನಮ್ಮವರು ಆ ಘಟನೆಯನ್ನು ಕಂಡು ನನ್ನ ಬಳಿ ಬಂದು ಬಾ ಎಂದೂ ಎಲ್ಲರಿಗೂ ತಮಾಸೆ ಮಾಡಿಕೊಂಡು ಒಳಗಡೆ ಹೋಗುವಾಗ.....

        ಆ ಮಗುವಿನ ತಾಯಿಯವರು ಬಂದು ಕ್ಷಮಿಸಿ ಬಿಡಿ ಎಂದು ನನ್ನ ಕಾಲಿಗೆ ಬಿದ್ದಾಗ ಇರಲಿ ಬಿಡಿ ಎಂದೂ ದೇವರ ದರ್ಶನಕ್ಕೆ ಅನುಮತಿ ಬೇಡಿ ಪೂಜೆ ಮಾಡುವಾಗ ಆ ದೇವರ ಬಳಿ ನನಗೆ ಒಂದು ಮುದ್ದು ಮಗುವು ಕೊಡಿ ಎಂದೂ ಕೇಳಿಕೊಳ್ಳುವಾಗ ದೇವರ ಪ್ರಸಾದವನ್ನು ಆಚಾರ್ಯರವರು ತೆಗೆದುಕೊಂಡು ಕೊಡಲು ನಮ್ಮವರ ಕಣ್ಣಿನ ಅಂಚಿನಲ್ಲಿ ಬರುವ ನೀರು ಕಂಡು ಆಚಾರ್ಯಯವರು ರೋದಿಸಬೇಡಿ ಎಂದೂ ನಮ್ಮವರನ್ನು ನನ್ನನ್ನು.......

    ಮರಗಳಿಗೆ ಜೋಕಾಲಿ ಇಲ್ಲಿ ಪೂಜೆಯನ್ನು ಮಾಡಿ ಎಲ್ಲವೂ ಸರಿ ಹೋಗುತ್ತದೆ ಎಂದೂ ಹೇಳಿ ಭೋಜನ ಕೂತುಕೊಂಡ ಹೀಗೆ ನಮ್ಮವರು ಯಾಕೆ ಏನು ಆಯಿತು? ಎಂದೂ ನನ್ನ ಬಳಿ ಪ್ರಶ್ನೆ ಮಾಡಿದಾಗ....

   ಏನು ಇಲ್ಲ ಎಂದೂ ಮರು ಉತ್ತರ ನೀಡಿದೆ. ಆದರು ಅವರ ಕಣ್ಣಿನ ಅಂಚಿನಲ್ಲಿ ನೀರು ಬಂದ ದೃಶ್ಯ ನನ್ನ ಮನಕ್ಕೆ ನೋವು ತಂದಿತು....

    ಹೀಗೆ ಎಲ್ಲಾ ಪೂಜೆ ಮುಗಿಸಿ ಮನೆಗೆ ಹೋದಾಗ ಸುಮಾರು ಆರು ಗಂಟೆಯಾಯಿತು. ದೇವರಿಗೆ ದೀಪವನ್ನು ಹಚ್ಚುವಾಗ ಆ ಘಟನೆ ಎನಿಸಿ ಒಮ್ಮೆ ಜೋರಾಗಿ ಅಳಬೇಕು ಎನಿಸಿ, ದೇವರೇ ಅವರು ನನ್ನ ಬಂಜೆ ಮಗುವನ್ನು ಮುಟ್ಟಬೇಡ ಎಂದೂ ಹೇಳಿದ ನುಡಿ ನನ್ನ ಮನಕ್ಕೆ ಎಷ್ಟು ನೋವು ಉಂಟು ಮಾಡಿದೆ.....

    ನನಗೆ ಒಂದು ಮಗುವಿನ ಭಾಗ್ಯ ಸಿಗುವಂತೆ ಆಗಲಿ ಎಂದೂ ಕೇಳುವಾಗ ನಮ್ಮವರು ಬಂದು ನನ್ನ ಕರೆದುಕೊಂಡು ಹೋಗಿ ಯಾಕೆ ಅಳುತ್ತೀಯಾ ನಾಳೆ ನಾವು ಇಬ್ಬರು ವೈದ್ಯರ ಬಳಿ ಹೋಗಿ ಕೇಳಿಬರೋಣ ಎಂದೂ ತಿಳಿಸಿದಾಗ ನಮ್ಮ ಅತ್ತೆ ಅಮ್ಮ ಅಪ್ಪಣೆ ನೀಡಿದರು......

     ಮುಂಜಾನೆ ದೇವರಿಗೆ ದೀಪವನ್ನು ಹಂಚಿ ಪೂಜೆ ಮುಗಿಸಿ ವೈದ್ಯರ ಬಳಿ ಕೇಳಿದಾಗ ಅವರು ನಿಮಗೆ ನಿಮ್ಮ ಪತಿಗೆ ಸಾಕಷ್ಟು ಪರೀಕ್ಷೆ ಮಾಡಲು ಇದೆ ಎಂದೂ ಕರೆದುಕೊಂಡು ಹೋಗಿ ಪರೀಕ್ಷೆಗೆ ಮಾಡಿಸಿಕೊಂಡು ನಾವು ಮನೆಗೆ ಬಂದಾಗ......

      ಅತ್ತೆಯಮ್ಮ ಎಲ್ಲವೂ ಒಳಿತು ಆಗುವುದು ಎಂದೂ ನಮ್ಮವರಿಗೆ ಕೆಲಸಕ್ಕೆ ಹೋಗಲು ಸಿದ್ದತೆಯನ್ನು ಮಾಡಿಕೊಟ್ಟು ಇತ್ತ ನಾನು ನನ್ನ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದೂ ಹೇಳಿ ರಾತ್ರಿ ಭೋಜನವನ್ನು ಮಾಡುವಾಗ ನಾವು ಹೋಗಿ ಬಂದ ವೈದ್ಯರು ನಾಳೆ ಇಬ್ಬರು ಬನ್ನಿ ತಿಳಿಸಿದಾಗ ಸಂತೋಷದಲ್ಲಿ ನಮ್ಮವರು ಆಯಿತು ಬರುತ್ತೇವೆ ಎಂದೂ ಮನೆಯಲ್ಲಿ ತಿಳಿಸಿದಾಗ ಮಾವನವರು ಹೋಗಿ ಬನ್ನಿ ಎಂದೂ.....

     ಮುಂಜಾನೆ ಸುಮಾರು ಒಂಬತ್ತು ಗಂಟೆಗೆ ವೈದ್ಯರ ಬಳಿ ಹೋದಾಗ ಅವರ ಮುಖದ ಭಾವನೆ ಏಕೆ ಇಂದು ಸಪ್ಪೆಯಾಗಿ ಇದೆ ಎಂದೂ ನಮ್ಮವರು ಕೇಳಿದಾಗ ಅವರು ನಮ್ಮ ಪರೀಕ್ಷೆಯ ವರದಿ ವಿವರಿಸುತ್ತ ಇರುವಾಗ ಇಬ್ಬರ ಅಂಚಿನಲ್ಲೂ ಒಮ್ಮೆ ನೀರು ಬರಲು ಅವರು....

    ಅಯ್ಯೋ ಹೆದರಿಕೊಳ್ಳಬೇಡಿ ಎಂದೂ ನನಗೆ ಒಂದು ಗುಳಿಗೆ ಕೊಟ್ಟರು ಅದನ್ನು ತೆಗೆದುಕೊಳ್ಳಿ ಮುಂದಿನ ಆರು ತಿಂಗಳಲ್ಲಿ ಆಗುತ್ತದೆ ಎಂದೂ ಹೇಳಿ ಮನೆಗೆ ತೆರಳಿದಾಗ....

    ನಮ್ಮವರು ಮನೆಯವರ ಬಳಿ ಎಲ್ಲಾ ವಿಷಯ ತಿಳಿಸಿದಾಗ ಏನು ಆಗುವುದಿಲ್ಲ ದೇವರು ಇದ್ದಾರೆ ಎಂದೂ ನುಡಿದು ಮಲಗಿಕೊಂಡರು ಅದೇ ಆಲೋಚನೆ.....

   ವೈದ್ಯರು ಇಬ್ಬರು ಬನ್ನಿ ಎಂದೂ ಸಂಪೂರ್ಣ ಮರು ಪರೀಕ್ಷೆಯನ್ನು ಮಾಡಿದಾಗ ಅವರು ಇದು ನಿಜವಾಗಲೂ ದೇವರ ಆಶೀರ್ವಾದ ನಿಮಗೆ ಖಂಡಿತವಾಗಿ ಮುದ್ದು ಮುದ್ದು ಮಕ್ಕಳ ಭಾಗ್ಯ ಇದೆ ನುಡಿದಾಗ ಅವರ ಮುಖದಲ್ಲಿ ಮೂಡಿದ ಸಂತೋಷ ಎಂದೂ ಮರೆಯಲು ಸಾಧ್ಯವಿಲ್ಲ.

   ಮನೆಗೆ ಬಂದು ಎಲ್ಲರ ಬಳಿ ತಿಳಿಸಿದಾಗ ಎಲ್ಲರಿಗೂ ಸಂತೋಷವಾಗಿ ನಲಿಯುವ ಬಗೆಯನ್ನು ಕಂಡ ನನ್ನ ಮನಕ್ಕೆ ಒಂದು ಬಗೆಯ ಶಾಂತಿ ಉಂಟಾಯಿತು.



Rate this content
Log in

Similar kannada story from Abstract