kaveri p u

Classics Inspirational Others

4  

kaveri p u

Classics Inspirational Others

ಮಾಲ್ಗುಡಿ ಡೇಸ್

ಮಾಲ್ಗುಡಿ ಡೇಸ್

1 min
406


ನಾನ್ ಸ್ಟಾಪ್ ನವೆಂಬರ್ - ಮಧ್ಯಂತರ


ಮಾಲ್ಗುಡಿ ಡೇಸ್ ಅತ್ಯದ್ಭುತ ಚಿತ್ರ. ಆರ್ ಕೆ ನಾರಾಯಣ್ ಅವರ ಕೃತಿಯೇ ಚಿತ್ರವಾಗಿ ಹೊರ ಹೊಮ್ಮಿದೆ.

ಸಾಮಾನ್ಯ ಜನರ ಜೀವನದ ಸುತ್ತ ನಡೆಯುವ ಈ ಕಥೆ, ಚಿತ್ರದಲ್ಲೂ ತನ್ನ ನೈಜತೆ ಉಳಿಸಿಕೊಂಡಿದೆ. ಶಾಲಾ ಮೇಷ್ಟ್ರು ಆಗಿ ವಿಜಯ್ ರಾಘವೇಂದ್ರ ಅವರ ನಟನೆ ಅಮೋಘ.

ಈ ಚಿತ್ರವನ್ನು ನನ್ನ ದೃಷ್ಟಿಕೋನದಂತೆ ಬದಲಾಯಿಸುವುದಾದರೆ,


ಸ್ವಾಮಿ ತನ್ನ ಗೆಳೆಯರೊಂದಿಗೆ ಚೆನ್ನಾಗಿದ್ದ. ಸ್ವಾಮಿ ತಂದೆಯ ಶಿಸ್ತು ಸ್ವಾಮಿಯನ್ನು ಎಲ್ಲ ವಿಷಯಕ್ಕೂ ಕಟ್ಟಿ ಹಾಕುತ್ತಿತ್ತು. ಅಜ್ಜಿಯ ಕೂಗು ಸ್ವಾಮಿಗೆ ಕಿರಿಕಿರಿ ಅನಿಸುತ್ತಲೇ ಇರುತ್ತಿತ್ತು. ಸ್ವಾಮಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ. ಕನ್ನಡ ಮಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಸ್ವಾಮಿಯನ್ನು ವರ್ಗಾಯಿಸಿದಾಗ ಸ್ವಾಮಿಗೆ ತಲೆ ಬುಡವೂ ಅರ್ಥವಾಗಲಿಲ್ಲ. ಅಲ್ಲದೇ, ರಾಜನ್ ಎಂಬ ಪೊಲೀಸ್ ಅಧಿಕಾರಿಯ ಮಗನ ದರ್ಪ ಸ್ವಾಮಿಯನ್ನು ಕೀಳರಿಮೆ ಮೂಡಿಸಿಕೊಳ್ಳುವಂತೆ ಮಾಡುತ್ತಿತ್ತು. ಪ್ರತಿ ಕ್ಷಣಕ್ಕೂ ರಾಜನ್ ಸ್ವಾಮಿಯನ್ನು ಅವಮಾನಿಸುತ್ತಿದ್ದ. ಇಂಗ್ಲಿಷ್ ಬಾರದ ಸ್ವಾಮಿಯನ್ನು ಹಳ್ಳಿ ಗಮಾರ ಎಂದು ರಾಜನ್ ಅಣಕಿಸುತ್ತಿದ್ದ. ಸ್ವಾಮಿ ಏನಾದರೂ ತಿಳಿಯದೆ ಇದ್ದದ್ದನ್ನು ರಾಜನ್ ಬಳಿ ಕೇಳಿದರೆ, ಅದಕ್ಕೆ ತಪ್ಪು ಉತ್ತರಗಳನ್ನೇ ಹೇಳಿ ಕೊಡುತ್ತಿದ್ದ ರಾಜನ್.

ಹೀಗೆ ಸಮಯ ಕಳೆದಂತೆ ರಾಜನ್'ನ ಕೆಟ್ಟ ಬುದ್ದಿಯನ್ನು ಅರಿತ ಸ್ವಾಮಿ ಛಲದಿಂದ ಇಂಗ್ಲಿಷ್ ಕಲಿತು, ರಾಜನ್ ಅನ್ನು ಹಿಂದಿಕ್ಕಿ ತರಗತಿಗೆ ಮೊದಲಿಗನಾಗಬೇಕೆಂದು ಪಟ್ಟು ಹಿಡಿದು ಓದ ತೊಡಗಿದ.


ಪರೀಕ್ಷೆಗಳು ಮುಗಿದು, ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಅಚ್ಚರಿ ಕಾದಿತ್ತು. ಕನ್ನಡ ಮೀಡಿಯಂ ಸ್ವಾಮಿ, ಇಂಗ್ಲಿಷ್ ಶಾಲೆಗೆ ಮೊದಲಿಗನಾಗಿದ್ದ.

ರಾಜನ್ ದರ್ಪದ ಮುಂದೆ, ಸ್ವಾಮಿಯ ಛಲ ಗೆದ್ದಿತ್ತು.


(ಚಲನಚಿತ್ರದಲ್ಲಿ ಸ್ವಾಮಿ ಮತ್ತು ರಾಜನ್ ಉತ್ತಮ ಸ್ನೇಹಿತರು. ರಾಜನ್ ದರ್ಪ ತೋರುತ್ತಿರಲಿಲ್ಲ. ಸ್ವಾಮಿಯೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದ.)


Rate this content
Log in

Similar kannada story from Classics